ಬಂಗಾಳದಲ್ಲಿ ಸರ್ಕಾರ ರಚನೆ ಬೆನ್ನಲ್ಲೇ ದೆಹಲಿ ಬಿಜೆಪಿ ಕಚೇರಿ ಮೇಲೆ ಉಗ್ರ ದಾಳಿ ಎಚ್ಚರಿಕೆ, ಭದ್ರತೆ ಹೆಚ್ಚಳ

Published : May 09, 2026, 09:55 PM IST
Terror Threat Alert Around Delhi BJP Headquarters Security Intensified at DDU Marg

ಸಾರಾಂಶ

ಬಂಗಾಳದಲ್ಲಿ ಬಿಜೆಪಿಗೆ ಅಧಿಕಾರ ಬಾಂಗ್ಲಾದೇಶ, ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳನ್ನು ಕೆರಳಿಸಿದೆ. ಈ ಗೆಲುವಿನ ಬೆನ್ನಲ್ಲೇ ದೆಹಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರರ ದಾಳಿ ಸಾಧ್ಯತೆಯನ್ನು ಗುಪ್ತಚರ ಇಲಾಖೆ ನೀಡಿದೆ. 

ನವದೆಹಲಿ (ಮೇ.09) ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಮತ್ತಷ್ಟು ಬಲಿಷ್ಠವಾಗಿದೆ. ಅದರಲ್ಲೂ ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಹಿಂದುತ್ವ ಮತಗಳು ಧ್ರುವಿಕರಣಗೊಂಡು ಮಮತಾ ಬ್ಯಾನರ್ಜಿ ಸರ್ಕಾರವನ್ನು ಮತದಾರರು ಕಿತ್ತೆಸೆದಿದ್ದಾರೆ. ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿರುವುದು ಬಾಂಗ್ಲಾದೇಶ, ಪಾಕಿಸ್ತಾನದಲ್ಲೂ ಅಸಮಾಧಾನಕ್ಕೆ ಕಾರಣಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ದೆಹಲಿಯಲ್ಲಿ ಬಿಜೆಪಿ ಪ್ರಧಾನ ಕಚೇರಿ ಮೇಲೆ ಉಗ್ರ ದಾಳಿ ಆತಂಕ ಎದುರಾಗಿದೆ. ಗುಪ್ತಚರ ಇಲಾಖೆ ಅಧಿಕಾರಿಗಳು ಬಿಜೆಪಿ ಕಚೇರಿ ಸೇರಿದಂತೆ ದೆಹಲ ಕೆಲ ಪ್ರಮುಖ ಸ್ಥಳಗಳ ಮೇಲೆ ಉಗ್ರರ ದಾಳಿ ಆತಂಕದ ಸೂಚನೆ ನೀಡಿದೆ.

ಐಇಡಿ, ಕಾರು ಬಾಂಬ್, ಉಗ್ರ ದಾಳಿ

ಬಿಜೆಪಿ ಕಚೇರಿ ಹಾಗೂ ಇತರ ಕೆಲವೆಡೆ ಉಗ್ರರು ದಾಳಿಗೆ ಸಜ್ಜಾಗಿದ್ದಾರೆ. ಐಇಡಿ ಬಾಂಬ್ ದಾಳಿ, ಕಾರು ಬಾಂಬ್, ಆತ್ಮಾ*ಹುತಿ ದಾಳಿ, ಶೂಟೌಟ್ ರೀತಿಯಲ್ಲಿ ದಾಳಿ ನಡೆಸಲು ಉಗ್ರರು ಸಜ್ಜಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ದೆಹಲಿಯಲ್ಲಿ ಭದ್ರತೆ ಹೆಚ್ಚಿಸಿದ ಸರ್ಕಾರ

ದೆಹಲಿಯಲ್ಲಿ ಉಗ್ರರ ದಾಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸರ್ಕಾರ ಭದ್ರತೆ ಹೆಚ್ಚಿಸಿದೆ. ದೆಹಲಿಯ ಎಲ್ಲೆಡೆ ಭದ್ರತೆ ಹಾಗೂ ತಪಾಸಣೆ ನಡೆಯುತ್ತಿದೆ. ಪ್ಯಾರಾಮಿಲಿಟರಿ ಸೇರಿದಂತೆ ಹಲವು ಭದ್ರಾತಾ ಎಜೆನ್ಸಿಗಳ ನಿಯೋಜನೆ ಮಾಡಲಾಗಿದೆ. ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ದೆಹಲಿ ಬಿಜೆಪಿ ಕಚೇರಿ ಜೊತೆಗೆ ಕೆಲ ಸರ್ಕಾರಿ ಕಚೇರಿಗಳು ಉಗ್ರರ ಟಾರ್ಗೆಟ್ ಲಿಸ್ಟ್‌ನಲ್ಲಿದೆ ಅನ್ನೋ ಮಾಹಿತಿಯನ್ನು ಇಂಟಲಿಜೆನ್ಸ್ ನೀಡಿದೆ. ಈ ಮಾಹಿತಿಗಳ ಆಧಾರದಲ್ಲಿ ದೆಹಲಿಯಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇತ್ತ ದೆಹಲಿ ಮಾತ್ರವಲ್ಲ ಇದೀಗ ಕೇಂದ್ರ ಸರ್ಕಾರ ಇತರ ಕೆಲ ನಗರಗಳಲ್ಲೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ತೀವ್ರ ನಿಗಾವಹಿಸಲು ಸೂಚನೆ ನೀಡಲಾಗಿದೆ. ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Video: ರೈಲ್ವೆ ನಿಲ್ದಾಣದಲ್ಲಿ ಬಣ್ಣದಲ್ಲಿ ಅದ್ದಿದ ಸೌತೆಕಾಯಿ ಮಾರಾಟ: ವಿಚಾರಣೆ ವೇಳೆ ಮಹಿಳೆಯರ ಶಾಕಿಂಗ್​ ಹೇಳಿಕೆ
ದಳಪತಿ ವಿಜಯ್ 'SSLC ಮಾಕ್ಸ್‌ಕಾರ್ಡ್' ವೈರಲ್ ಆಗಿರೋ ಬೆನ್ನಲ್ಲೇ ಓಡಾಡ್ತಿರೋ ಕಾಮೆಂಟ್ ಏನ್ ಗೊತ್ತಾ?