2500 ರೂ.ಗೆ 3 ಪ್ರೀಮಿಯಂ ವಿಸ್ಕಿ, 5 ಬಿಯರ್ ಬಾಟೆಲ್ ಸೇರಿ 10 ವಸ್ತುಗಳು: 17 ವರ್ಷದ ಹಿಂದಿನ ಬಿಲ್ ವೈರಲ್

By Mahmad Rafik  |  First Published Sep 30, 2024, 1:02 PM IST

ಸೋಶಿಯಲ್ ಮೀಡಿಯಾದಲ್ಲಿ 17 ವರ್ಷಗಳ ಹಿಂದಿನ ಬಾರ್ ಬಿಲ್ ಫೋಟೋ ವೈರಲ್ ಆಗುತ್ತಿದೆ. 2007 ರ ಬಿಲ್ ನಲ್ಲಿ 10 ವಸ್ತುಗಳಿಗೆ 2,522 ರೂಪಾಯಿ ಬಿಲ್ ಮಾಡಲಾಗಿದ್ದು, ಇಂದಿನ ಬೆಲೆಗೆ ಹೋಲಿಸಿದರೆ ಬೆಲೆಗಳು ಎಷ್ಟು ಏರಿಕೆಯಾಗಿವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.


ದೆಹಲಿ: ಜಗತ್ತಿನ ಮೂಲೆಯಲ್ಲಿ ಯಾವುದೇ ಘಟನೆ ನಡೆದರೂ ಕೆಲ ಸಮಯದಲ್ಲಿ ಅದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಿಂದ ಇಡೀ ಜಗತ್ತು ನಮ್ಮ ಬೆರಳತುದಿಯಲ್ಲಿದ್ದಂತೆ ಅನುಭವವಾಗುತ್ತದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ 17 ವರ್ಷಗಳ ಹಿಂದಿನ ದೆಹಲಿಯ ಬಾರ್ ಬಿಲ್ ಫೋಟೋ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅದರಲ್ಲಿಯೂ 90ರ ದಶಕದ ಜನರು ಈ ಪೋಸ್ಟ್ ಶೇರ್ ಮಾಡಿಕೊಂಡು, ನಮ್ಮ ಕಾಲವೇ ಬೆಸ್ಟ್ ಆಗಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ. 17 ವರ್ಷದ ಹಿಂದೆ ಎರಡೂವರೆ ಸಾವಿರಕ್ಕೆ 10 ವಸ್ತುಗಳು ಸಿಕ್ಕಿದೆ. ಈ 10 ವಸ್ತುಗಳಲ್ಲಿ ಪ್ರೀಮಿಯಂ ವಿಸ್ಕಿ ಮತ್ತು ಬಿಯರ್ ಬಾಟೆಲ್ ಸಹ ಸೇರಿದೆ.

ದಿನದಿಂದ ದಿನಕ್ಕೆ ಬೆಲೆಗಳು ಏರಿಕೆಯಾಗುತ್ತಿರೋದು ಎಲ್ಲರ ಗಮನಕ್ಕೆ ಬಂದಿರುತ್ತದೆ. ಇತ್ತೀಚೆಗಷ್ಟೇ 2 ರೂಪಾಯಿ ಮಸಾಲೆ ದೋಸೆ ರಶೀದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇಂದು ವೈರಲ್ ಆಗುತ್ತಿರುವ 2007ರ  ಬಾರ್ ರಶೀದಿ ನೋಡಿದ್ರೆ, ಇಲ್ಲಿರುವ ವಸ್ತುಗಳನ್ನ ಖರೀದಿಸಿದ್ರೆ ಅಂದಾಜು 5 ರಿಂದ 6 ಸಾವಿರ ರೂಪಾಯಿ ಬೇಕಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. 2007 ಮತ್ತು 2024ರ ಬೆಲೆಗಳನ್ನು ಹೋಲಿಕೆ ಮಾಡಿದ್ರೆ ಖಂಡಿತ ಎಷ್ಟು ಬೆಲೆ ಏರಿಕೆಯಾಗಿದೆ ಎಂದು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 

Tap to resize

Latest Videos

ನವದೆಹಲಿಯ ಈಸ್ಟ್ ಆಫ್ ಕೈಲಾಶ್ ರಸ್ತೆಯಲ್ಲಿರುವ ದಿ ಸೂಪರ್ ಫ್ಯಾಕ್ಟರಿ ಹೆಸರಿನ ಬಾರ್‌ನ 17 ವರ್ಷದ ಬಿಲ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. 2ನೇ ಜೂನ್ 2007ರಂದ ಗ್ರಾಹಕರೊಬ್ಬರು 10 ವಸ್ತುಗಳಿಗೆ 2,522 ರೂಪಾಯಿ (ತೆರಿಗೆ ಸೇರಿದಂತೆ) ಹಣ ಪಾವತಿಸಿದ್ದಾರೆ. 

ಹುಲಿ ಬಳಿಕ ಮಾರುಕಟ್ಟೆಗೆ ಬಂದ 'ಬೆಲ್ಲ' ರಮ್‌, ಭಾರತ-ಅಮೆರಿಕದಲ್ಲಿ ಬಿಡುಗಡೆ ಮಾಡಿದ ಅಮೃತ್‌ ಡಿಸ್ಟಲರಿ!

ಆರ್ಡರ್ ಮಾಡಿದ 10 ವಸ್ತುಗಳು

ಆರ್ಡರ್ ಮಾಡಿದ ವಸ್ತುಗಳು

ಪ್ರಮಾಣ (Qty) ಬೆಲೆ (ರೂ.ಗಳಲ್ಲಿ)
ಲಾಹೋರಿ ಮುರ್ಗಾ ತಂದೂರಿ 1 180
ಪ್ಲ್ಯಾಟರ್ ಪನೀರ್ 2 300
ಪಾಪಡ್ 5 75
ವೆಜ್ ಪ್ಲ್ಯಾಟರ್ 2 500
ಜ್ಯೂಸ್ 4 160
ಸೋಡಾ 2 60
ನೀರಿನ ಬಾಟೆಲ್  3 36
ಪ್ರೀಮಿಯಂ ವಿಸ್ಕಿ 4 100
ಬಿಯರ್ ಬಾಟೆಲ್  5 300
ಒಟ್ಟು (ತೆರಿಗೆ ಹೊರತುಪಡಿಸಿ) - 2011

10 ವಸ್ತುಗಳಿಗೆ 2011 ರೂಪಾಯಿ ಆಗಿದ್ದು, ಇದಕ್ಕೆ ಸರ್ವಿಸ್ ಚಾರ್ಜ್ 201 ರೂ, ವ್ಯಾಟ್ @12.50: 221 ರೂ ಮತ್ತು ವ್ಯಾಟ್ @20: 88 ರೂಪಾಯಿ ಸೇರಿಸಿ ಒಟ್ಟು 2.521.61 ರೂಪಾಯಿ ಆಗಿದೆ. 

ವೀಕೆಂಡ್‌ನಲ್ಲಿ ಸಿನಿಮಾ ನೋಡೋಕೆ ಹೋದ್ರೆ ಖರ್ಚಾಗೋದೆಷ್ಟು? ಶುರುವಾಗಿದೆ ಸಖತ್‌ ಚರ್ಚೆ!

ಈ ಪೋಸ್‌ಗೆ ಕಮೆಂಟ್ ಮಾಡಿರುವ ಜನರು, ಬೆಲೆಗಳು ಎಷ್ಟು ಏರಿಕೆಯಾಗಿದೆ ಎಂಬುದನ್ನು ಈ ಬಿಲ್ ಸ್ಪಷ್ವವಾಗಿ ಹೇಳುತ್ತಿದೆ. ಇಂದು ಎಲ್ಲರೂ ಹಣದುಬ್ಬರದಿಂದ ಉಳಿತಾಯ ಅನ್ನೋ ಪದವನ್ನು ಮರೆಯುವಂತಾಗಿದೆ. 2007ರಲ್ಲಿ 2,500 ರೂಪಾಯಿ ಅಂದ್ರೆ ಕಡಿಮೆ ಹಣ ಅಲ್ಲ. ಅಂದು ಅದೊಂದು ದೊಡ್ಡ ಮೊತ್ತವಾಗಿತ್ತು. 2007-08ರಲ್ಲಿ ಎರಡೂವರೆ ಸಾವಿರಕ್ಕೆ ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ 1 ಬಿಹೆಚ್‌ಕೆ ಫ್ಲಾಟ್ ಬಾಡಿಗೆಗೆ ಸಿಗುತ್ತಿತ್ತು. ಆದರೆ ಇಂದು ಹಳ್ಳಿಗಳಲ್ಲಿಯೂ ಈ ಬೆಲೆ ಸಿಂಗಲ್ ರೂಮ್ ಬಾಡಿಗೆಗೆ ಸಿಗಲ್ಲ ಎಂದು ಹೇಳಿದ್ದಾರೆ.

Throwing party in 2007 was pocket friendly.
byu/Status-Document-2150 indelhi
click me!