
ನವದೆಹಲಿ(ಮೇ.05): ಒಮ್ಮೆ ಲಾಕ್‌ಡೌನ್ ಮುಕ್ತಾಯವಾಗಿ ವಿಮಾನ ಹಾರಾಟ ಆರಂಭವಾಯಿತೆಂದರೆ ವಿಮಾನ ಟಿಕೆಟ್ ದರ ದುಪ್ಪಟ್ಟು ಆಗುವ ಸಾಧ್ಯತೆ ಇದೆ. ಬೆಂಗಳೂರು-ದಿಲ್ಲಿ ವಿಮಾನ ಟಿಕೆಟ್ ದರ 5,700 ರು.ನಿಂದ 11,200 ರು.ಗೆ ಏರುವ ಸಂಭವವಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.
ಇದಕ್ಕೆ ಅನೇಕ ಕಾರಣಗಳಿವೆ. ಕೊರೋನಾ ಬರದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪದ್ಧತಿ ವಿಮಾನಗಳಲ್ಲೂ ಜಾರಿಗೆ ಬರಲಿದೆ. ಅಂದರೆ 3 ಸೀಟುಗಳಿರುವ ಒಂದು ಆಸನದಲ್ಲಿ ಮಧ್ಯದ ಸೀಟನ್ನು ಖಾಲಿ ಬಿಡಬೇಕಾಗುತ್ತದೆ. ಅಲ್ಲದೆ, ವಿಮಾನ ಸಾಗುವಾಗ ಪ್ರಯಾಣಿಕರಿಗೆ ಹೆಚ್ಚೂ ಕಡಿಮೆ ಆದರೆ ಕ್ವಾರಂಟೈನ್‌ಗೆಂದು ಕೊನೆಯ 3 ಸಾಲು ಖಾಲಿ ಬಿಡಬೇಕು ಎಂದು ವಿಮಾನಯಾನ ಸಚಿವಾಲಯ ಪ್ರಸ್ತಾಪ ಇರಿಸಿದೆ. ಆಗ 180 ಸೀಟಿನ ವಿಮಾನದಲ್ಲಿ 108 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಲಭಿಸಲಿದೆ. ಅಲ್ಲದೆ, ವಿಮಾನವನ್ನು ಸೋಂಕು ರಹಿತಗೊಳಿಸಲು ಸಾಕಷ್ಟುಶುದ್ಧೀಕರಣ ಕ್ರಮ ಜರುಗಿಸಬೇಕಾಗುತ್ತದೆ.
ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್ ರಿಜಿಸ್ಟರ್: ದೇಶದಲ್ಲೇ ಪ್ರಥಮ!
ಹೀಗಾದರೆ ವಿಮಾನಯಾನ ಕಂಪನಿಗಳು ಭಾರೀ ಖರ್ಚು ಮಾಡಬೇಕಾಗುತ್ತದೆ. ಈ ವೆಚ್ಚ ಹಾಗೂ ಖಾಲಿ ಸೀಟಿನ ವೆಚ್ಚವನ್ನು ಸರಿದೂಗಿಸಲು ವಿಮಾನ ಪ್ರಯಾಣ ದರವನ್ನು ದುಪ್ಪಟ್ಟು ಮಾಡಬೇಕಾಗುತ್ತದೆ. ಸುಮಾರು 5700 ರು. ಇರುವ ದಿಲ್ಲಿ-ಬೆಂಗಳೂರು ವಿಮಾನ ಟಿಕೆಟ್ ದರ 11,200 ರು.ಗೆ ಏರುವ ಸಾಧ್ಯತೆ ಇದೆ. 5000 ರು. ಇರುವ ಮುಂಬೈ-ದಿಲ್ಲಿ ವಿಮಾನ ಪ್ರಯಾಣ ದರ 9,700 ರು.ಗೆ ಏರುವ ಸಾಧ್ಯತೆ ಇದೆ ಎಂದು ಏಷ್ಯಾ ಪೆಸಿಫಿಕ್ ಏವಿಯೇಶನ್ ಇಂಡಿಯಾ ಸೆಂಟರ್ (ಸಿಎಪಿಎ) ಅಧ್ಯಯನ ವರದಿ ಅಂದಾಜು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ