Delhi Air Pollution:ನಿಮಗೆ ಸಾಧ್ಯವಿಲ್ಲದಿದ್ದರೆ ಸರ್ಕಾರ ನಡೆಸಲು ಅಧಿಕಾರಿ ನೇಮಕ, ಕೇಜ್ರಿ ಸರ್ಕಾರಕ್ಕೆ ಸುಪ್ರೀಂ ವಾರ್ನಿಂಗ್!

By Suvarna NewsFirst Published Dec 2, 2021, 4:00 PM IST
Highlights
  • ದೆಹಲಿ ಹಾಗೂ  ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ
  • ಕೇಂದ್ರಕ್ಕೆ 24 ಗಂಟೆ ಸಮಯ, ಕೇಜ್ರಿ ಸರ್ಕಾರಕ್ಕೆ ಆಗದಿದ್ದರೆ ಹೊಸ ಅಧಿಕಾರಿ ನೇಮಕ
  • ಸುಪ್ರೀಂ ಸೂಚನೆಗೆ ಕೇಂದ್ರ ಹಾಗೂ ಕೇಜ್ರಿವಾಲ್ ಸರ್ಕಾರದಲ್ಲಿ ತಳಮಳ
     

ನವದೆಹಲಿ(ಡಿ.02): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ(Delhi Air Pollution) ವಪರೀತವಾಗುತ್ತಿದೆ. ಭಾಗಶಃ ಲಾಕ್‌ಡೌನ್, ಕಟ್ಟಡ ಕಾಮಗಾರಿ ಸ್ಥಗಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡರೂ ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಹಲವರಲ್ಲಿ ಆರೋಗ್ಯ(Health) ಸಮಸ್ಯೆ ಕಾಡುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್(Supreme Court) ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದೆ. ಇದೀಗ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗರಂ ಆಗಿದೆ. ನಿಮ್ಮಿಂದ ಸರ್ಕಾರ ನಡೆಸಲು ಆಗದಿದ್ದರೆ ನಾವು ಹೊಸ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್  ಅರವಿಂದ್ ಕೇಜ್ರಿವಾಲ್(arvind kejriwal) ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದೆ.

ದೆಹಲಿ ವಾಯು ಮಾಲಿನ್ಯ ಕುರಿತು ಅರ್ಜಿ ವಿಚಾರಣೆ ನಡೆಸಿದ ಚೀಫ್ ಜಸ್ಟೀಸ್ ಎನ್ ವಿ ರಮಣ(NV Ramana), ಅರವಿಂದ್ ಕೇಜ್ರಿವಾಲ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದುವರೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಮಾಲಿನ್ಯ ನಿಯಂತ್ರಣಕ್ಕೆ ಬಂದಿಲ್ಲ. ಸರ್ಕಾರ ಇದಕ್ಕೆ ಪರಿಹಾರವನ್ನೂ ಸೂಚಿಸಿಲ್ಲ. ನಾಳೆ(ಡಿ.03) ದೆಹಲಿ ವಾಯು ಮಾಲಿನ್ಯ ಅರ್ಜಿ ವಿಚಾರಣೆ ನಡೆಸುತ್ತೇವೆ. ಇದರೊಳಗಡೆ ದೆಹಲಿ ಸರ್ಕಾರ(Delhi Governnment) ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರ ಸೂಚಿಸಬೇಕು. ನಿಮ್ಮ ಕೈಯಿಂದ ಸಾಧ್ಯವಾಗುತ್ತಿಲ್ಲ ಎಂದಾದರೂ ಹೇಳಿ. ಅಥವಾ ನಿಮಗೆ ಆದೇಶ ನೀಡಿದರೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದಾದರೆ ಕೋರ್ಟ್ ಆದೇಶ ನೀಡಲು ಸಿದ್ಧ. ಇದ್ಯಾವುದು ಆಗದಿದ್ದರೆ ಹೇಳಿ, ನಿಮ್ಮ ಸರ್ಕಾರ ನಡೆಸಲು ಹೊಸ ಅಧಿಕಾರಿಯನ್ನು ನೇಮಕ ಮಾಡುತ್ತೇವೆ ಜಸ್ಟೀಸ್ ಎನ್ ವಿ ರಮಣ ದೆಹಲಿ ಸರ್ಕಾರಕ್ಕೆ ವಾರ್ನಿಂಗ್ ನೀಡಿದ್ದಾರೆ.

Delhi Pollution: ವಿಶ್ವಕ್ಕೆ ನಾವು ಎಂಥ ಸಂದೇಶ ನೀಡುತ್ತಿದ್ದೇವೆ? ಸರ್ಕಾರಗಳಿಗೆ ಮತ್ತೆ ಸುಪ್ರೀಂ ಚಾಟಿ!

ಕಳದ ವಿಚಾರಣೆ ಸಂದರ್ಭದಲ್ಲಿ ದೆಹಲಿ ಸರ್ಕಾರ ಹಲವು ಕ್ರಮಗನ್ನು ಕೈಗೊಂಡಿರುವುದಾಗಿ ಹೇಳಿದೆ. ಇದರಲ್ಲಿ ಕಟ್ಟಡ ಕಾಮಗಾರಿ ಸ್ಥಗಿತ, ಶಾಲೆ ಕಾಲೇಜು ಬಂದ್, ವರ್ಕ್ ಪ್ರಮ್ ಫೋಮ್ ಸೇರಿದಂತೆ ಕೆಲ ನಿರ್ಧಾರಗಳನ್ನು ತಿಳಿಸಿದೆ. ಆದರೆ ಈಗ ಮಕ್ಕಳು ಕೆಟ್ಟ ಮಾಲಿನ್ಯದ ನಡುವೆ ಶಾಲೆಗೆ ತೆರಳುತ್ತಿದ್ದಾರೆ. ದೊಡ್ಡವರು ಮನೆಯಲ್ಲಿ ಕೂತು ಕೆಲಸ ಮಾಡುತ್ತಿದ್ದಾರೆ ಎಂದು ಜಸ್ಟೀಸ್ ಡಿವೈ ಚಂದ್ರಚೂಡ್ ಹಾಗೂ ಜಸ್ಟೀಸ್ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ಸರ್ಕಾರದ ಪರ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದಾರೆ. ಶಾಲೆ ಮುಚ್ಚುವುದರಿಂದ ಮಕ್ಕಳ ಕಲಿಕೆಗೆ ತೊಡಕಾಗುತ್ತಿದೆ. ಆಫ್ ಲೈನ್ ಹಾಗೂ ಆನ್‌ಲೈನ್ ಕ್ಲಾಸ್ ತೆರೆಯಲಾಗಿದೆ. ಪೋಷಕರು ಯಾವುದನ್ನು ಬೇಕಾದರೂ ಆರಿಸಬಹುದು ಎಂದು ಸಿಂಗ್ವಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೋರ್ಟ್ ಪೀಠ.  ಕಳೆದೆರಡು ವರ್ಷದಿಂದ ಮನೆಯಲ್ಲಿರುವ ಮಕ್ಕಳಿಗೆ ನೀವು ಬಂದರೆ ಬರಬಹುದು ಎಂದರೆ ಎಲ್ಲಾ ಮಕ್ಕಳು ಶಾಲೆಗೆ ಬರುತ್ತಾರೆ. ಇದು ಸಮಂಜಸ ವಾದವಲ್ಲ ಎಂದು ಕೋರ್ಟ್ ಹೇಳಿದೆ.

Delhi pollution: ಶಾಲೆಗಳಿಗೆ ರಜೆ, ವರ್ಕ್ ಫ್ರಂ ಹೋಂ ವಿಸ್ತರಣೆ

ದೆಹಲಿ ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ವಕೀಲ ಅಭಿಷೇಕ್ ಮನುಸಿಂಗ್ವಿ ಕೋರ್ಟ್‌ಗೆ ವಿವರಿಸಿದ್ದಾರೆ. ಇದಕ್ಕೆ ಉತ್ತರಿಸಿದ ಕೋರ್ಟ್, ನಾವು ವಿರೋಧ ಪಕ್ಷದವರಲ್ಲ. ನಮ್ಮನ್ನು ಮೆಚ್ಚಿಸುವ ಅಗತ್ಯವೂ ಇಲ್ಲ. ನೀವು ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಯಾವುದೇ ಜಾರಿಯಾಗಿದೆ. ಇದರಿಂದ ಮಾಲಿನ್ಯ ನಿಯಂತ್ರಣವಾಗಿದೆಯಾ? ನಮ್ಮ ಆದೇಶ ಪಾಲನೆಯಾಗಿದೆಯಾ ಇದನ್ನು ಹೇಳಿ ಎಂದು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರ ಚಾಟಿ ಬೀಸಿದೆ.

ಇದೇ ವೇಳೆ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕೇಂದ್ರ ವಾಯು ಗುಣಮಟ್ಟ ಆಯೋಗ ಏನು ಮಾಡುತ್ತಿದೆ ಎಂದು ಸುಪ್ರೀಂ ಪ್ರಶ್ನಿಸಿದೆ. ಈ ಆಯೋಗಕಕ್ಕೆ ಆದೇಶ ನೀಡುವ ಯಾವುದೇ ಅಧಿಕಾರವಿಲ್ಲ. ಕೇವಲ ದಂಡ ವಸೂಲಿ ಅಧಿಕಾರ ಮಾತ್ರ ಇದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ. 
 

click me!