Delhi Air Pollution crisis; ದೆಹಲಿ ಜನರ ಪ್ರಾಣಕ್ಕೆ ವಿಷಗಾಳಿ ಕಂಟಕ!

By Suvarna News  |  First Published Nov 4, 2022, 8:23 PM IST

ದೆಹಲಿಗರಿಗೆ ಈಗ ವಿಷಕಂಠಕರಾಗದೇ ಬೇರೆದಾರಿಯೇ ಇಲ್ಲ. 100 ಸಿಗರೇಟ್ = ಒಂದು ದಿನ  ಎನ್ನುವಂತಾಗಿದೆ ಅಲ್ಲಿನ ಪರಿಸ್ಥಿತಿ.  ಒಬ್ಬ ಮನುಷ್ಯ ದೆಹಲಿಯಲ್ಲಿ ಒಂದು ದಿನ ಓಡಾಡಿದ್ರೆ ನೂರು ಸಿಗರೇಟ್ ಸೇದಿದಷ್ಟು ವಿಷಕಾರಿ ಹೊಗೆ ಆ ಮನುಷ್ಯ ದೇಹ ಸೇರುತ್ತೆ ಎನ್ನುವ ಲೆಕ್ಕಾಚಾರ ಹೊರಬರುತ್ತಿದೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ.


ವರದಿ: ಡೆಲ್ಲಿ ಮಂಜು

ನವದೆಹಲಿ (ನ.4) : ಸ್ಮಾಗ್ ವರ್ಸಸ್ ಫಾಗ್..! ರಾಜಕೀಯ `ಕುರುಕ್ಷೇತ್ರ' ನವದೆಹಲಿಯಲ್ಲಿ ಈಗ ನಡೆಯುತ್ತಿರುವುದು ಇದೇ `ಹೊಗೆ'ಯ ಗಲಾಟೆ..! ದೆಹಲಿಗರಿಗೆ ಈಗ ವಿಷಕಂಠಕರಾಗದೇ ಬೇರೆದಾರಿಯೇ ಇಲ್ಲ. 100 ಸಿಗರೇಟ್ = ಒನ್ ಡೇ ಎನ್ನುವಂತಾಗಿದೆ ರಾಷ್ಟ್ರೀಯ ರಾಜಧಾನಿಯಲ್ಲಿ. ಒಬ್ಬ ಮನುಷ್ಯ ದೆಹಲಿಯಲ್ಲಿ ಒಂದು ದಿನ ಓಡಾಡಿದ್ರೆ ನೂರು ಸಿಗರೇಟ್ ಸೇದಿದಷ್ಟು ವಿಷಕಾರಿ ಹೊಗೆ ಆ ಮನುಷ್ಯ ದೇಹ ಸೇರುತ್ತೆ ಎನ್ನುವ ಲೆಕ್ಕಾಚಾರ ಹೊರಬರುತ್ತಿದೆ. ನೀರಿಗಾಗಿ ಜಗಳ ಕೇಳಿದ್ದೀವಿ. ವಿದ್ಯುತ್‍ಗಾಗಿ ಜಗಳ ಕೇಳಿದ್ದೀವಿ. ಸ್ವಚ್ಚಗಾಳಿಗಾಗಿ ಗುದ್ದಾಟ ಮಾಡುವುದು ಕೇಳಿದ್ದೀರಾ ? ಹೌದು ಈ ಸ್ಥಿತಿಗೆ ದೆಹಲಿ ತಲುಪಿದೆ. ಈ ಇಂದ್ರಪಸ್ರಸ್ಥದ ಪ್ರತಿಯೊಬ್ಬರು ಕೂಡ ಇದೀಗ ಹೊರಗಡೆ ಓಡಾಡುವುದಕ್ಕೂ ಹೆದರುವಂತಾಗಿದೆ. ಮಕ್ಕಳು ಶಾಲೆ ಮುಖವನ್ನು ಮತ್ತೆ ಮರೆಯುವಂತಾಗುತ್ತಿದೆ. ಉದ್ಯೋಗಿಗಳಿಗೆ ಮತ್ತೆ ವರ್ಕ್ ಪ್ರಮ್ ಹೋಂ ಶುರುವಾಗೋ ಲಕ್ಷಣಗಳು ಇವೆ. ದೆಹಲಿ ಸರ್ಕಾರದ ಈಗಾಗಲೇ ಶೇ.50 ರಷ್ಟು ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡಿ ಅಂತ ಆದೇಶ ಹೊರಡಿಸಿದೆ. ಖಾಸಗಿ ಸಂಸ್ಥೆಗಳು ಇದೇ ನಿಯಮಗಳನ್ನು ಪಾಲಿಸಿದರೇ ಒಳಿತು ಅಂತಲೂ ಸರ್ಕಾರ ಹೇಳಿ ಬಿಟ್ಟಿದೆ. ವಾಯುವಿಹಾರ ಅನ್ನೋ ಮಾತು ಕೇವಲ ಕಲ್ಪನೆಯಾಗುತ್ತಿದೆ.

Tap to resize

Latest Videos

ಸ್ಮಾಗ್ ಮತ್ತು ಫಾಗ್ ದೆಹಲಿಯಲ್ಲಿ ಇವರೆಡರ ಒಂದೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ನವೆಂಬರ್ ತಿಂಗಳು ಅಂದರೆ ದೆಹಲಿ ಚಳಿಗಾಲ ಶುರುವಾಗಿ ಫಾಗ್ ಮನೆ, ರಸ್ತೆ ಆವರಿಸುವುದು ಹೊಸದಲ್ಲ. ಈ ಫಾಗ್ ಅಥವಾ ಮಬ್ಬು ಮುಸುಕಿದ ಮೇಘಗಳಿಗೆ ಕೈಗಾರಿಕೆಗಳು ಉಗುಳುವ ಹೊಗೆ, ಕಟ್ಟಡಗಳ ನಿರ್ಮಾಣದ ಧೂಳು, ಗೋಧಿ ಕಡ್ಡಿಗೆ ಬೆಂಕಿ ಈ ಎಲ್ಲಾ ವಿಷಕಾರಿಕ ಅಂಶಗಳು ಸೇರಿಕೊಂಡು ಸ್ಮಾಗ್ ಆಗುತ್ತೆ. ಜನರ ಪ್ರಾಣಕ್ಕೆ ಈ ವಿಷಗಾಳಿ ಕಂಟಕವಾಗುತ್ತಿದೆ.    

ದೆಹಲಿ ಈಗ ಪಕ್ಕಾ ಗ್ಯಾಸ್ ಚೇಂಬರ್ ಆಗಿದೆ. ವಿಷಕಾರಿ ಗಾಳಿ ಅಥವಾ ವಾಯು ಮಾಲೀನ್ಯ ಕುಸಿತ ಕಾಣಿಸಿಕೊಳ್ಳುತ್ತಿರುವುದು ಹಲವು ರೋಗಗಳು ಆವರಿಸಿಕೊಳ್ಳುತ್ತಿವೆ. ಊಸಿರಾಡಲು ಶುದ್ದಗಾಳಿ ಸೇವನೆಗೆ ಸಿಗದಿರುವುದಕ್ಕೆ ನೇರವಾಗಿ ಮನುಷ್ಯನ ಶ್ವಾಸಕೋಶದ ಮೇಲೆ ವೈರಾಣುಗಳು ದಾಳಿ ಇಡುತ್ತಿವೆ. ಶೀತ, ಜ್ವರ, ಕೆಮ್ಮು ಪ್ರತಿ ಮನೆಯ ಬಾಗಿಲು ತಟ್ಟುತ್ತಿದೆ. 10 ರಲ್ಲಿ 7 ಮನೆಗಳಲ್ಲಿ ರೋಗಗಳು ಕಾಡುತ್ತಿವೆ. ಈ ವಿಷಗಾಳಿ ಮಕ್ಕಳ ಮೇಲೆ ಪ್ರತಾಪ ತೋರುತ್ತಿರುವುದು ದೆಹಲಿಗರನ್ನು ಹೈರಾಣವಾಗಿಸಿದೆ.

ಧ್ಯಾನ, ಯೋಗ : ಕರ್ನಾಟಕದಲ್ಲಿ ಈ ಎರಡು ಪದಗಳು ಬಹುಚರ್ಚಿತವಾಗುತ್ತಿದ್ದರೇ ದೆಹಲಿಯಲ್ಲಿ ಅನಿವಾರ್ಯ ಎನ್ನುವಂತಾಗಿದೆ. ಶಾಲಾ ಮಕ್ಕಳು 10 ನಿಮಿಷ ಪ್ರತಿನಿತ್ಯ ಧ್ಯಾನ ಮಾಡಬೇಕು ಅನ್ನೋ ಕರ್ನಾಟಕ ಸರ್ಕಾರದ ಆದೇಶಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆ. ಏಕಾಗ್ರತೆ ಮತ್ತು ಮಾನಸಿಕ, ದೈಹಿಕವಾಗಿ ಸದೃಢವಾಗಿಸುವಂತ ವಿಚಾರ ಇದೀಗ ವಿರೋಧ ವ್ಯಕ್ತವಾಗುತ್ತಿದೆ. ಆದರೆ ಹೆಲ್ತ್ ಎಮರ್ಜಿನ್ಸಿಯಲ್ಲಿ ಸ್ಥಿತಿಯಲ್ಲಿರುವ ದೆಹಲಿಯಲ್ಲಿ ಎಲ್ಲರೂ ಯೋಗ ಮತ್ತು ಧ್ಯಾನದ ಮೊರೆಹೋಗಿ, ನಿಮ್ಮ ಆರೋಗ್ಯವನ್ನು ನೀವು ರಕ್ಷಿಸಿಕೊಳ್ಳಿ ಅಂಥ ದೆಹಲಿ ಸರ್ಕಾರ ಹೇಳುತ್ತಿದೆ.

Air Pollution: ಗ್ಯಾಸ್‌ ಚೇಂಬರ್‌ ಆದ ದೆಹಲಿ, ಗುಜರಾತ್‌ ಎಲೆಕ್ಷನ್‌ನಲ್ಲಿ ಕೇಜ್ರಿವಾಲ್‌ ಬ್ಯುಸಿ!

ಕೊರೊನಾ ಸೋಂಕು ಎರಡನೇ ಅಲೆ ಶುರುವಾದಾಗ ಇದೇ ಯೋಗ, ಧ್ಯಾನದ ಯೋಜನೆಗೆ ದೆಹಲಿ ಸರ್ಕಾರ ಚಾಲನೆ ನೀಡಿತ್ತು. ನೂರಾರು ಯೋಗ ತರಬೇತಿದಾರರನ್ನು ನೇಮಕ ಮಾಡಿಕೊಂಡು ದೆಹಲಿಗರ ಆರೋಗ್ಯ ಸುಸ್ಥಿತಿಗೆ ಹೊಸ ಹೆಜ್ಜೆ ಇಟ್ಟಿತ್ತು. ಇದೇ ಯೋಜನೆಗೆ ಮತ್ತೊಮ್ಮೆ ಚಾಲನೆ ನೀಡಲು ದೆಹಲಿ ಸರ್ಕಾರ ಮುಂದಾಗಿದೆ. ಹೊಗೆಗೂಡಿನಂತಾಗಿರುವ ದೆಹಲಿಯಲ್ಲಿ ವಾಯುಮಾಲೀನ್ಯದಿಂದ ರಕ್ಷಿಸಿಕೊಳ್ಳಲು ದೆಹಲಿಗರು ಮನೆಯಲ್ಲೇ ಧ್ಯಾನ, ಯೋಗಕ್ಕೆ ಮೊರೆಹೋಗಬಹುದು. ಈ ಮೂಲಕ ನಿಮ್ಮ ಆರೋಗ್ಯವನ್ನು ಸದೃಢಗೊಳಿಸಗೊಳ್ಳಬಹುದು ಎನ್ನುವುದು ಕೇಜ್ರಿವಾಲ್ ಸರ್ಕಾರದ ಉದ್ದೇಶ. ಈ ಯೋಗ ಮತ್ತು ಧ್ಯಾನವನ್ನು ಆನ್‍ಲೈನ್ ಮೂಲಕ ಎಲ್ಲರ ಮನೆಗಳನ್ನು ತಲುಪಲು ಆಪ್ ಸರ್ಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ.

ಶಾಲೆ, ಫ್ಯಾಕ್ಟರಿ ಬಂದ್, ನಿರ್ಮಾಣ, ಡೀಸೆಲ್ ವಾಹನಕ್ಕೆ ಬ್ರೇಕ್, ದೆಹಲಿಯಲ್ಲಿ ಕೈಮೀರಿದ ಪರಿಸ್ಥಿತಿ! 

ಗ್ಯಾಸ್ ಚೇಂಬರ್ ನಂತಿರುವ ದೆಹಲಿಯಲ್ಲಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವುದು ಮತ್ತಷ್ಟು ಹೆದರುವಂತಾಗಿದೆ. ಇಷ್ಟರ ನಡುವೆ ನವೆಂಬರ್ 10 ರಂದು ವಿಷ ವಾಯುಮಾಲಿನ್ಯ ಕುರಿತಾಗಿ ಪ್ರಕರಣದ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ವಿಚಾರಕ್ಕೆ ರಾಜಕೀಯ ಕೆಸರೆರಚಾಟ ಆಪ್ ಮತ್ತು ಬಿಜೆಪಿ ನಡುವೆ ನಡೆಯುತ್ತಿದೆ. ಈ ವಾಯುಮಾಲಿನ್ಯಕ್ಕೆ ದೆಹಲಿ, ಉತ್ತರಪ್ರದೇಶ, ಪಂಜಾಬ್ ಸರ್ಕಾರಗಳ ಬೇಜಬ್ದಾರಿಯೂ ಕಾರಣ. ಹಾಗಾಗಿ ಶಾಶ್ವತ ನಿಯಂತ್ರಣಕ್ಕೆ ಪರಿಹಾರವೇನು ? ಈ ಪ್ರಶ್ನೆ ಹಲವು ವರ್ಷಗಳಿಂದ ಕಾಡುತ್ತಿದೆ. ಉತ್ತರ ಯಾರು ಹುಡುಕುತ್ತಾರೆ ಅನ್ನೋದು ಮ್ಯೂಜಿಕಲ್ ಚೇರ್ ಆಟವಾಗಿದೆ.

click me!