ಜಮ್ಮು-ಕಾಶ್ಮೀರ: ರಜೌರಿ ಪಂಚಾಯತ್ ಅಧ್ಯಕ್ಷನ ಮನೆ ಸನಿಹ ಬಾಂಬ್ ಸ್ಫೋಟ!

By Suvarna NewsFirst Published Jun 6, 2021, 7:14 PM IST
Highlights
  • ಜಮ್ಮು ಕಾಶ್ಮೀರದಲ್ಲಿ ಹೆಚ್ಚಿದ ಉಗ್ರರ ಉಪಟಳ
  • ಪುಲ್ವಾಮಾದಲ್ಲಿನ ಗ್ರೈನೇಡ್ ದಾಳಿಗೂ ಮೊದಲು ಬಾಂಬ್ ಸ್ಫೋಟ
  • ರಜೌರಿ ಜಿಲ್ಲೆಯ ಪಂಚಾಯ್ ಅಧ್ಯಕ್ಷನ ಮನೆ ಸನಿಹ ಬಾಂಬ್ ದಾಳಿ

ರಜೌರಿ(ಜೂ.06): ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ ಹತ್ತಿಕ್ಕಲು ಭಾರತೀಯ ಸೇನೆ ಅವಿರತ ಶ್ರಮವಹಿಸುತ್ತಿದೆ. ಪರಿಣಾಣ ವಿಧ್ವಂಸಕ ಕೃತ್ಯಗಳು ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಇತ್ತೀಚೆಗೆ ಮತ್ತೆ ಉಗ್ರರು ತಮ್ಮ ಬಾಲಬಿಚ್ಚುವ ಯತ್ನ ಮಾಡುತ್ತಿದ್ದಾರೆ. ಇದೀಗ ರಜೌರಿ ಜಿಲ್ಲೆಯ ಪಂಚಾಯ್ ಅಧ್ಯಕ್ಷನ ಮನೆ ಸಮೀಪ ಬಾಂಬ್ ಸ್ಫೋಟಿಸಿದ ಘಟನೆ ನಡೆದಿದೆ.

ಪುಲ್ವಾಮಾದಲ್ಲಿ ಮತ್ತೊಂದು ದಾಳಿ: CRPF ಯೋಧರ ಮೇಲೆ ಉಗ್ರರ ಗ್ರೈನೇಡ್ ಅಟ್ಯಾಕ್!

ರಜೌರಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಸ್ಫೋಟ ನಡೆದಿದೆ. ಕಡಿಮೆ ತೀವ್ರತೆ ಸ್ಫೋಟ ವರದಿಯಾಗಿದ್ದು,ಸ್ಫೋಟದಿಂದ ಯಾವುದೇ ಹಾನಿಯಾಗಿಲ್ಲ. ಆದರೆ ಈ ಸ್ಫೋಟದ ಸಮೀಪದಲ್ಲೇ ಪಂಚಾಯತ್ ಅಧ್ಯಕ್ಷನ ಮನೆ ಇದೆ. ಸ್ಥಳಕ್ಕೆ ಆಗಮಿಸಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಫೋಟ ಶನಿವಾರ(ಜೂ.05) ತಡ ರಾತ್ರಿ ನಡೆದಿದೆ. ಶನಿವಾರ ಮುಂಜಾನೆ ಮಾನ್ಯಾಲ್ ವಲಯದ ಮೇಲೆ ಭಾರತೀಯ ಸೇನೆ ಹಾಗೂ ಜಮ್ಮು ಕಾಶ್ಮೀರ ಪೊಲೀಸರು ಉಗ್ರರ ನೆಲೆ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತಾಸ್ತ್ರ ವಶಪಡಿಸಿಕೊಂಡಿದ್ದರು.  ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿತ್ತು.

ಭದ್ರತಾ ಸಿಬ್ಬಂದಿಯನ್ನು ಬಿಟ್ಟು ಹೋದ BJP ಕೌನ್ಸಿಲರ್‌ ಉಗ್ರರ ಗುಂಡಿನಿಂದ ಸಾವು

ರಜೌರಿ ಜಿಲ್ಲೆಯಲ್ಲಿ ದಾಳಿ ನಡೆಸಲು ಉಗ್ರರ ಪ್ಲಾನ್ ಹಾಕಿದ್ದಾರೆ ಅನ್ನೋ ಮಾಹಿತಿಯನ್ನು ಸೇನೆ ಕಲೆಹಾಕಿತ್ತು. ಇದಕ್ಕಾಗಿ ಭಾರಿ ಪ್ರಮಾಣದ ಶಸ್ತಾಸ್ತ್ರ ಪೂರೈಕೆಯಾಗಿದೆ. ಜೊತೆಗೆ ಮಾನ್ಯಾಲ್ ವಲಯದಲ್ಲಿ ಅಡಗಿಸಿ ಇಡಲಾಗಿದೆ ಅನ್ನೋ ಮಾಹಿತಿ ಆಧರಿ ದಾಳಿ ನಡೆಸಿ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿತ್ತು. ಇದೇ ಗ್ಯಾಂಗ್ ಇದೀಗ ಪಂಚಾಯತ್ ಅಧ್ಯಕ್ಷನ ಮನೆ ಸಮೀಪ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಜಮ್ಮು ಮತ್ತು ಕಾಶ್ಮೀರ ರಜೌರಿ ಪೊಲೀಸ್ ಠಾಣೆಯ ಹಿರಿಯ ಎಸ್‌ಪಿ ಪ್ರಕರಣ ತನಿಖೆ ನಡೆಸುತ್ತಿದ್ದಾರೆ. 
 

click me!