ಸೋಂಕಿತರ ಪೈಕಿ ಶೇ.75ರಷ್ಟು ಮಂದಿಯಲ್ಲಿ ಕಾಣಿಸಿಕೊಂಡ ಡೆಲ್ಟಾ ವೈರಸ್!

Published : Jun 05, 2021, 05:58 PM IST
ಸೋಂಕಿತರ ಪೈಕಿ ಶೇ.75ರಷ್ಟು ಮಂದಿಯಲ್ಲಿ ಕಾಣಿಸಿಕೊಂಡ ಡೆಲ್ಟಾ ವೈರಸ್!

ಸಾರಾಂಶ

ಬ್ರಿಟನ್‌ನಲ್ಲಿ ಅಬ್ಬರಿಸುತ್ತಿರುವ ಡೆಲ್ಟಾ ವೈರಸ್ ಭಾರತದಲ್ಲಿ ಹೆಚ್ಚಳ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಿದೆ ಡೆಲ್ಟಾ ವೈರಸ್ ದೆಹಲಿ ಅಧ್ಯಯನ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ನವದೆಹಲಿ(ಜೂ.05): ಕೊರೋನಾದ ಮತ್ತೊಂದು ರೂಪಾಂತರಿ ವೈರಸ್ ಡೆಲ್ಟಾ (B.1.617.2) ಇದೀಗ ಭಾರತದಲ್ಲೂ ಆರ್ಭಟ ಆರಂಭಿಸಿದೆ. ಸದ್ಯ ಪತ್ತೆಯಾಗುತ್ತಿರುವ ನಾಲ್ವರು ಕೊರೋನಾ ಸೋಂಕಿತರಲ್ಲಿ ಡೆಲ್ಟಾ ರೂಪಾಂತರಿ ವೈರಸ್ ಕಾಣಸಿಕೊಳ್ಳುತ್ತಿದೆ. ಇದರ ನಡುವೆ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದ್ದು ದೆಹಲಿಯಲ್ಲಿ ಶಕೇಡಾ 60 ರಿಂದ 75 ಮಂದಿ ಲಸಿಕೆ ಪಡೆವರಲ್ಲಿ ಡೆಲ್ಟಾ ವೈರಸ್ ಕಾಣಿಸಿಕೊಳ್ಳುತ್ತಿದೆ

ಬ್ರಿಟನ್‌ ಮೇಲೂ ಡೆಲ್ಟಾ ದಾಳಿ: ಭಾರತದಲ್ಲಿ ಪತ್ತೆಯಾದ ವೈರಸ್‌ ಅಬ್ಬರವೇ ಹೆಚ್ಚು!

ವೈರಸ್ ಪಡೆದು ಕೊರೋನಾಗೆ ಗುರಿಯಾಗುತ್ತಿರುವವರ ಪೈಕಿ ಹೆಚ್ಚಿನವರಲ್ಲಿ ಈ ರೂಪಾಂತರಿ ಡೆಲ್ಟಾ ವೈರಸ್ ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನ ವರದಿ ಹೇಳುತ್ತಿದೆ. ಈ ವೈರಸ್ ತ್ವರಿತಗತಿಯಲ್ಲಿ ಹರಡುತ್ತಿದೆ. ಇಷ್ಟೇ ಅಲ್ಲ ಸೋಂಕಿತರ ವೇಗವಾಗಿ ಅಸ್ವಸ್ಥಗೊಳ್ಳುತ್ತಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡವರು ಮತ್ತೆ ಕೊರೋನಾಗೆ ಗುರಿಯಾದರೆ ಹಾಗೂ ಕೋವಿಡ್ ಲಸಿಕೆ ಪಡೆದ ಬಳಿಕ ನಿರ್ಲಕ್ಷ್ಯದಿಂದ ಕೋವಿಡ್‌ಗೆ ತುತ್ತಾಗುತ್ತಿರವವರಲ್ಲಿ ಇದೀಗ ಡೆಲ್ಟಾ ಕಾಣಿಸಿಕೊಳ್ಳುತ್ತಿದೆ. ಇದು ಆತಂಕಕಾರಿ ಎಂದು ಅಧ್ಯಯನ ವರದಿ ಹೇಳಿದೆ.

ಬ್ರಿಟನ್‌ ವೈರಾಣುಗಿಂತ ಭಾರತದ ಡೆಲ್ಟಾ ವೈರಸ್‌ ಭಾರಿ ಡೇಂಜರ್‌!

ಡೆಲ್ಟಾ ಕೊರೋನಾದ ಡಬಲ್ ಮ್ಯೂಟೇಶನ್ ವೈರಸ್ ಆಗಿದೆ. B.1.617 ಎಂಬುದು COVID-19 ರ ಡಬಲ್ ರೂಪಾಂತರದ ಹೆಸರು. ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಈ ವೈರಸ್ ಪತ್ತೆಯಾಗಿತ್ತು. E484Q ಮತ್ತು L452R ಎಂಬ ಎರಡು ರೂಪಾಂತರಿ ವೈರಸ್ ಹೊಂದಿರುವುದರಿಂದ ಇದು ಡಬಲ್ ಮ್ಯೂಟೇಶನ್ ವೈರಸ್ ಎಂದು ಕರೆಯಲಾಗುತ್ತಿದೆ. 

ಈ ವೈರಸ್ ದೆಹದಲ್ಲಿನ ರೋಗನಿರೋಧಕ ಶಕ್ತಿ ಕುಗ್ಗಿಸಿ ಸಂಪೂರ್ಣವಾಗಿ ಅಸ್ವಸ್ಥಗೊಳಿಸುತ್ತದೆ. ಹೀಗಾಗಿ ಡೆಲ್ಟಾ ವೈರಸ್ ಅಪಾಯಕಾರಿಯಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ