ಕೋವಿಡ್ ಹೆಚ್ಚಳಕ್ಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಮೋದಿ ಸರ್ಕಾರ ಕಾರಣ; ಅಮರ್ತ್ಯ ಸೇನ್!

By Suvarna News  |  First Published Jun 5, 2021, 3:28 PM IST
  • ಮೋದಿ ಸರ್ಕಾರ ಸಂಪೂರ್ಣ ವೈಫಲ್ಯದಿಂದ ಕೊರೋನಾ ಹೆಚ್ಚಳ
  • ಕೈಗೊಂಡ ಕ್ರಮಗಳ ಕ್ರೆಡಿಟ್ ಪಡೆಯಲು ಬಯುಸುತ್ತಿದೆ ಕೇಂದ್ರ ಸರ್ಕಾರ
  • ಪ್ರಚಾರದ ನಡುವೆ ವೈರಸ್ ನಿಯಂತ್ರಣ ಮರೆತಿದೆ ಎಂದ ನೊಬೆಲ್ ಪುರಸ್ಕೃತ ಸೇನ್

ನವದೆಹಲಿ(ಜೂ.05):  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ಗೊಂದಲ ಹಾಗೂ ಅಸಮರ್ಪಕ ನಿರ್ಧಾರ ಹಾಗೂ ಕ್ರಮಗಳೇ ಭಾರತದಲ್ಲಿ ಕೊರೋನಾ ವೈರಸ್ ಹರಡಲು ಕಾರಣವಾಗಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಾಗ್ದಾಳಿ ನಡೆಸಿದ್ದಾರೆ

ಶ್ರೀರಾಮನ ಹೆಸರು ಜನರನ್ನು ಬಡಿಯಲು ಬಳಕೆ: ಸೇನ್!.

Tap to resize

Latest Videos

ಸೇವಾ ದಳ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಮರ್ತ್ಯ ಸೇನ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪ್ರಚಾರ, ಅದರಿಂದ ತಮ್ಮ ಸರ್ಕಾರ ಇತರ ಎಲ್ಲಾ ಸರ್ಕಾಕ್ಕಿಂತ ಬೆಸ್ಟ್ ಎಂದು ಬಿಂಬಿಸಲು ಹೊರಟ ಕಾರಣ ದೇಶದಲ್ಲಿ ಕೊರೋನಾ ವೈರಸ್ ಹೆಚ್ಚಾಗಿದೆ ಎಂದು ಅಮರ್ತ್ಯ ಸೇನ್ ಹೇಳಿದ್ದಾರೆ. 

ಭಾರತ ಅತೀ ಹೆಚ್ಚು ಔಷಧಿ ಉತ್ಪಾದಿಸುವ ರಾಷ್ಟ್ರ. ಆದರೆ ಅದೇ ಭಾರತದಲ್ಲಿ ಲಸಿಕೆ ಅಭಾವ ಕಾಡುತ್ತಿದೆ. 2ನೇ ಅಲೆ, 3ನೇ ಅಲೆ ಸೇರಿದಂತೆ ವೈರಸ್ ಭವಿಷ್ಯದ ಆತಂಕ ಕುರಿತು ಸರ್ಕಾರಕ್ಕೆ ತಜ್ಞ ವೈದ್ಯರು ವರದಿ ಸಲ್ಲಿಸಿದ್ದಾರೆ. ಈ ಎಲ್ಲಾ ವರದಿ ಇದ್ದರೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಡುತ್ತಿದೆ ಎಂದು ಸೇನ್ ಹೇಳಿದ್ದಾರೆ.

ಪ್ರಧಾನಿಯನ್ನು ಸಿಎಂ ಅವ್ರೇ ಸ್ವಾಗತಿಸ್ಬೇಕೆಂದಿಲ್ಲ: ಮಮತಾ-ಮೋದಿ ಭೇಟಿ ಸತ್ಯಾಸತ್ಯತೆ

ಸರ್ಕಾರದ ನಿರ್ಧಾರಗಳಲ್ಲಿ ಗೊಂದಲ, ವೈದ್ಯಕೀಯ ಸಲಕರಣೆ ಪೂರೈಕೆ ಅಭಾವ, ಸೋಂಕಿತರ ಸೂಕ್ತ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಸೇರಿದಂತೆ ಎಲ್ಲವೂ ಅಸಮರ್ಪಕವಾಗಿದೆ. ಕೊರೋನಾ ವೈರಸ್ 2ನೇ ಅಲೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಸೇನ್ ಹೇಳಿದ್ದಾರೆ.

click me!