
ಡೆಹ್ರಾಡೂನ್: ಮಗಳೇ ತಂದೆಯ ವಿರುದ್ಧ ದಾಖಲಿಸಿದ ಅತ್ಯಾಚಾರ ಪ್ರಕರಣವೊಂದು ಸುಳ್ಳು ಎಂದು ಸಾಬೀತಾದ ಹಿನ್ನೆಲೆಯಲ್ಲಿ ಐದು ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಿರಪರಾಧಿ ಅಪ್ಪನನ್ನು ಡೆಹ್ರಾಡೂನ್‌ನ ಕೋರ್ಟ್ ಬಿಡುಗಡೆ ಮಾಡಿದೆ. ವಿಶೇಷ ಪೋಸ್ಕೋ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು, ಯುವತಿಯ ತಂದೆ ಈ ಪ್ರಕರಣದಲ್ಲಿ ನಿರಪರಾಧಿ ಎಂದು ಸಾಕ್ಷ್ಯಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ 42 ವರ್ಷದ ತಂದೆಯನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ.
2019ರ ಡಿಸೆಂಬರ್ 25ರಂದು 15 ವರ್ಷದ ಬಾಲಕಿಯೇ ತನ್ನ 42 ವರ್ಷದ ತಂದೆಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು. ಬಾಲಕಿಯ ಹೇಳಿಕೆ ಆಧರಿಸಿ ಮಕ್ಕಳ ಕಲ್ಯಾಣ ಸಮಿತಿ ತಂದೆಯ ವಿರುದ್ಧ ದೂರು ದಾಖಲಿಸಿ ಆತನನ್ನು ಜೈಲಿಗಟ್ಟಿತ್ತು. ತನ್ನ ತಂದೆ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಬಾಲಕಿ ನಮಗೆ ದೂರು ನೀಡಿದ್ದಳು, ಇದಕ್ಕೆ ಪುಷ್ಟಿ ನೀಡುವಂತೆ ಆಕೆಯ ಕಿರಿಯ ಸಹೋದರಿಯೂ ತನ್ನ ಅಕ್ಕನನ್ನು ಬೆಂಬಲಿಸಿದ್ದಳು ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗಾಗಿ ಡಿಸೆಂಬರ್ 27ರಂದು ಬಾಲಕಿಯ ತಂದೆಯನ್ನು ಪೊಲೀಸರು ಬಂಧಿಸಿದ್ದರು.
ಸುಳ್ಳು ರೇಪ್ ಕೇಸ್ ಹಾಕಿ ಆತನನ್ನೇ ಮದ್ವೆಯಾದ ಯುವತಿಗೆ ದಂಡ ವಿಧಿಸಿದ ಹೈಕೋರ್ಟ್
ಹೀಗೆ ಸುಳ್ಳು ಅತ್ಯಾಚಾರ ಆರೋಪದಡಿ ಜೈಲು ಸೇರಿದ್ದ ವ್ಯಕ್ತಿ ಡೆಹ್ರಾಡೂನ್‌ನಲ್ಲಿ ಲ್ಯಾಂಡ್ರಿ ಕೆಲಸ ಮಾಡುತ್ತಿದ್ದ. ಇದಾದ ನಂತರ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರಿಗೆ ಅಲ್ಲೊಂದು ಪ್ರೇಮ ಪತ್ರ ಸಿಕ್ಕಿತ್ತು. ಇದನ್ನು ಬಾಲಕಿಗೆ ಆತನ ಗೆಳೆಯ ಬರೆದಿದ್ದ. ಇದಾದ ನಂತರ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ತಂದೆ ತಾನು ಶಾಲೆಗೆ ಗೈರಾಗುತ್ತಿದ್ದಿದ್ದಕ್ಕೆ, ತರಗತಿ ಮಿಸ್ ಮಾಡುತ್ತಿದ್ದಿದ್ದಕ್ಕೆ ಹಾಗೂ ಹುಡುಗನೋರ್ವನ ಸ್ನೇಹ ಮಾಡಿದ್ದಕ್ಕೆ ಬೈಯುತ್ತಿದ್ದರು ಎಂಬುದನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಳು.
ಇದಾದ ನಂತರ ಬಾಲಕಿಗೆ ತಿರುವುಮುರುವಾಗಿ (cross-questioning) ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದಾಗ ಬಾಲಕಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸಾಕ್ಷ್ಯಗಳ ಪರಿಶೀಲನೆ ಹಾಗೂ ವಿಚಾರಣೆ ಮಾಡಿದಾಗ ಬಾಲಕಿ ತನ್ನ ಗೆಳೆಯನ ಮಾತು ಕೇಳಿ ಅಪ್ಪನ ವಿರುದ್ಧ ಸುಳ್ಳು ರೇಪ್ ಕತೆ ಕಟ್ಟಿ ಹಾಕಿ ಅಪ್ಪನನ್ನು ಜೈಲಿಗಟ್ಟಿದ್ದಾಳೆ ಎಂಬುದು ಸಾಬೀತಾಗಿತ್ತು. ಅಲ್ಲದೇ ಅತ್ಯಾಚಾರ ಪ್ರಕರಣದ ವೈದ್ಯಕೀಯ ವರದಿ ಕೂಡ ನೆಗೇಟಿವ್ ಆಗಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೋಸ್ಕೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಪ್ರಕರಣವನ್ನು ರದ್ದುಪಡಿಸಿ ಈಗಾಗಲೇ ಐದು ವರ್ಷ ಈ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿದ ವ್ಯಕ್ತಿಯನ್ನು ನಿರಾಪರಾಧಿ ಎಂದು ಹೇಳಿ ಬಿಡುಗಡೆಗೆ ಆದೇಶಿಸಿದ್ದಾರೆ. ಒಟ್ಟಿನಲ್ಲಿ ತನ್ನದೇ ರಕ್ತಮಾಂಸ ಹಂಚಿಕೊಂಡು ಹುಟ್ಟಿದ ಮಗಳ ಈ ಭಯಾನಕ ಆರೋಪದಿಂದಾಗಿ ತಂದೆ ಏನು ಮಾಡದ ತಪ್ಪಿಗೆ ಐವು ವರ್ಷಗಳ ಕಾಲ ಕಂಬಿ ಹಿಂದೆ ಕಳೆಯುವಂತಾಗಿದ್ದು, ವ್ಯವಸ್ಥೆಯ ದೊಡ್ಡ ದುರಂತವೇ ಸರಿ.
ಅಪ್ರಾಪ್ತೆಯನ್ನು ಪ್ರೀತಿಸಿ ಮದುವೆ - ಮಗು ಜನನದ ಬಳಿಕ ಗಂಡ ಅರೆಸ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ