Predator Drones: ಅಮೆರಿಕಾದಿಂದ 30 ಡ್ರೋನ್ ಖರೀದಿಗೆ ಭಾರತ ಸಿದ್ಧತೆ!

By Kannadaprabha NewsFirst Published Nov 16, 2021, 11:41 AM IST
Highlights

*ಅಮೆರಿಕಾದಿಂದ 21,000 ಕೋಟಿ ಮೌಲ್ಯದ ಪ್ರಿಡೇಟರ್ ಡ್ರೋನ್‌
*ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ಸಾಧ್ಯತೆ
*ತಲಾ 10 ಡ್ರೋನ್‌ ಪಡೆಯಲಿರುವ ಸೇನೆ, ನೌಕಾಪಡೆ ಮತ್ತು ವಾಯುಪಡೆ  

ನವದೆಹಲಿ(ನ.16): ಸದ್ಯದಲ್ಲೇ ಭಾರತವು ಅಮೆರಿಕದಿಂದ (America) 21,000 ಕೋಟಿ ಮೌಲ್ಯದ ಪ್ರಿಡೇಟರ್ ಡ್ರೋನ್‌ಗಳನ್ನು (Predator drones)  ಖರೀದಿಸುವ ಚಿಂತನೆ ನಡೆಸಿದೆ. ರಕ್ಷಣಾ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಒಪ್ಪಿಗೆ ದೊರೆತರೆ ಪ್ರಸ್ತಾವವನ್ನು ರಕ್ಷಣಾ ಸ್ವಾಧೀನ ಮಂಡಳಿಗ (Defence Acquisition Council) ರವಾನಿಸಲಾಗುತ್ತದೆ. ಈ ಡ್ರೋನ್‌ಗಳು ಸುಧಾರಿತ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರಗಳನ್ನೊಳಗೊಂಡಿದ್ದು ದೀರ್ಘ ಶ್ರೇಣಿಯ ಕಣ್ಗಾವಲು ಹಾಗೂ ನಿಖರವಾದ ದಾಳಿಗೆ ನೆರವಾಗಲಿವೆ. ಜಲಪ್ರದೇಶ ಹಾಗೂ ವಾಯುಪ್ರದೇಶ ರಕ್ಷಣೆಗೆ ನೆರವಾಗಲಿದೆ.

ಭಾರತಕ್ಕೆ ಚೀನಾ ಭಾರಿ ಅಪಾಯ: ಸೇನಾಪಡೆಗಳ ಮುಖ್ಯಸ್ಥ ರಾವತ್‌!

ಸುಮಾರು 21,000 ಕೋಟಿ ಮೌಲ್ಯದ ಸ್ವಾಧೀನಪಡಿಸಿಕೊಳ್ಳುವ ಕುರಿತು ಚರ್ಚಿಸಲು ರಕ್ಷಣಾ ಸಚಿವಾಲಯದಲ್ಲಿ ಸೋಮವಾರ ಉನ್ನತ ಮಟ್ಟದ ಸಭೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವ ಸಭೆಯ ಅಧ್ಯಕ್ಷತೆಯನ್ನು ರಕ್ಷಣಾ ಕಾರ್ಯದರ್ಶಿ ವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಸ್ವಾಧೀನಕ್ಕೆ ಒಪ್ಪಿಗೆ ದೊರೆತರೆ ಅದನ್ನು ರಕ್ಷಣಾ ಸಚಿವರ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿಗೆ ರವಾನಿಸಲಾಗುತ್ತದೆ. ನಂತರ ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಅಂತಿಮ ಒಪ್ಪಿಗೆ ನೀಡಲು ಭದ್ರತೆಯ ಕ್ಯಾಬಿನೆಟ್ ಸಮಿತಿಗೆ (Cabinet Committee on Security) ಕಳುಹಿಸಲಾಗುತ್ತದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ತಲಾ 10 ಡ್ರೋನ್‌ಗಳನ್ನು ಕಸ್ಟಮೈಸ್ (customise) ಮಾಡಿದ ವಿಶೇಷಣಗಳೊಂದಿಗೆ ಪಡೆಯಲಿವೆ ಎಂದು ವರದಿಗಳು ತಿಳಿಸಿವೆ.

ಈಗಾಗಲೇ ಎರಡು ಡ್ರೋನ್‌ಗಳನ್ನು ಬಳಸುತ್ತಿರುವ ನೌಕಾಪಡೆ!

ಭಾರತೀಯ ನೌಕಾಪಡೆಯು (Indian Navy) ಈಗಾಗಲೇ ಎರಡು ಆಯುಧ ರಹಿತ ಸೀಗಾರ್ಡಿಯನ್ ಡ್ರೋನ್‌ಗಳನ್ನು (seaguardian drone) ಬಳಸುತ್ತಿದೆ, ಅದು ಕಳೆದ ವರ್ಷ ಯುಎಸ್‌ನಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಕ್ಷಣೆಗಾಗಿ  ಲೀಸ್‌ (Lease) ಪಡೆದ ಡ್ರೋನ್‌ಗಳಾಗಿವೆ.  ರಕ್ಷಣಾ ಸ್ವಾಧೀನ ಪ್ರಕ್ರಿಯೆ 2020 ಮತ್ತು ರಕ್ಷಣಾ ಸಂಗ್ರಹಣೆ ಕೈಪಿಡಿ 2009 ರ ಅನ್ವಯ ಶಸ್ತ್ರಾಸ್ತ್ರಗಳನ್ನು  ಗುತ್ತಿಗೆ ನೀಡುವ ಆಯ್ಕೆಯನ್ನು ಒದಗಿಸಲಾಗಿದೆ. ಡ್ರೋನ್ ಲೀಸ್‌ ಪಡೆಯುವುದರಿಂದ ವೆಚ್ಚವನ್ನು ಕಡಿತಗೊಳಿಸಲು ಭಾರತಕ್ಕೆ ಸಹಾಯ ಮಾಡುತ್ತದೆ, ಏಕೆಂದರೆ ಅದರ ನಿರ್ವಹಣೆಯ ಜವಾಬ್ದಾರಿ ಯುಎಸ್‌ ಹೊರಲಿದೆ.

Sports Quota Recruitment: ಭಾರತೀಯ ಸೇನೆಗೆ ನ.29ರಿಂದ ನೇಮಕಾತಿ rally

ಕಳೆದ ಕೆಲವು ವರ್ಷಗಳಿಂದ, ಭಾರತೀಯ ಸಶಸ್ತ್ರ ಪಡೆಗಳು ಕಣ್ಗಾವಲು ಅಗತ್ಯತೆಗಳಿಗಾಗಿ ಅಮೆರಿಕದ ಶಸ್ತ್ರಾಸ್ತ್ರಗಳ ಮೇಲೆ ನಂಬಿಕೆಯನ್ನು ತೋರಿಸುತ್ತಿವೆ. ಭಾರತೀಯ ನೌಕಾಪಡೆಯು ಈಗಾಗಲೇ ಒಂಬತ್ತು P-8I ದೀರ್ಘ-ಶ್ರೇಣಿಯ ಕಣ್ಗಾವಲು ವಿಮಾನಗಳನ್ನು ಬಳಸುತ್ತಿದೆ ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಇನ್ನೂ ಒಂಬತ್ತು ವಿಮಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಚೀನಾ, ಪಾಕ್‌ ದಾಳಿ ತಡೆಯಲು ಬಂತು ವಾಯುರಕ್ಷಣಾ ವ್ಯವಸ್ಥೆ!

ನಾ ಮತ್ತು ಪಾಕಿಸ್ತಾನದಿಂದ (China and Pakistan)ಎದುರಾಗಬಹುದಾದ ಯಾವುದೇ ದಾಳಿಯನ್ನು ಸಮರ್ಥವಾಗಿ ತಡೆಯಬಲ್ಲ ರಷ್ಯಾ (Russia) ನಿರ್ಮಿತ ಎಸ್‌-400 ಟ್ರಯಂಫ್‌ ವಾಯು ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬಂದಿಳಿದಿದೆ. ಇದರೊಂದಿಗೆ ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಂತಾಗಿದೆ.

2018ರಲ್ಲಿ ಭಾರತ ಸರ್ಕಾರ ರಷ್ಯಾದಿಂದ ಒಟ್ಟು ಐದು ಎಸ್‌-400 ಟ್ರಯಂಫ್‌ ಏರ್‌ ಡಿಫೆನ್ಸ್‌ ಸಿಸ್ಟಮ್‌ (S-400 Triumf ‘SA-21 Growler’ air defence systems ) ಖರೀದಿ ಸಂಬಂಧ 40000 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಖರೀದಿ ನಡೆದರೆ ಭಾರತದ (India) ಮೇಲೆ ನಿರ್ಬಂಧ ಹೇರುವುದಾಗಿ ಅಮೆರಿಕ ಬೆದರಿಕೆ ಒಡ್ಡಿದ್ದರೂ ಜಗ್ಗದ ಭಾರತ ಒಪ್ಪಂದ ಜಾರಿಗೆ ಮುಂದಾಗಿತ್ತು. ಅದರಂತೆ ಮೊದಲ ವಾಯುರಕ್ಷಣಾ ವ್ಯವಸ್ಥೆಯ ಉಪಕರಣಗಳು ವಾಯು ಮತ್ತು ಸಮುದ್ರ ಮಾರ್ಗದ ಮೂಲಕ ಈಗಾಗಲೇ ಭಾರತವನ್ನು ಪ್ರವೇಶಿಸಿವೆ ಎಂದು ರಷ್ಯಾ ಪ್ರಕಟಿಸಿದೆ. ದುಬೈನಲ್ಲಿ (Dubai) ನಡೆಯುತ್ತಿರುವ ಏರ್‌ಶೋ ವೇಳೆ ರಷ್ಯಾ ಸರ್ಕಾರದ ಮಿಲಿಟರಿ ಉಪಕರಣ ರಫ್ತು ನಿಯಂತ್ರಣ ಸಂಸ್ಥೆಯ ನಿರ್ದೇಶಕ ಡಿಮಿಟ್ರಿ ಶುಗೇವ್‌ ಭಾನುವಾರ ಈ ಮಾಹಿತಿ ನೀಡಿದ್ದಾರೆ.

click me!