Agniveer Retention: ಶೇ.50ರಷ್ಟು ಅಗ್ನಿವೀರರಿಗೆ 4 ವರ್ಷ ಮುಗಿದ ಬಳಿಕವೂ ಕೆಲಸ!

By Kannadaprabha News  |  First Published Sep 6, 2024, 8:58 AM IST

Centre Agnipath changes 4 ವರ್ಷಗಳ ಅಲ್ಪಾವಧಿಗೆ ಯುವಕರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ ಯೋಜನೆಯಲ್ಲಿ ಬದಲಾವಣೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈಗ ಶೇ.25ರಷ್ಟು ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಉಳಿಸಿಕೊಳ್ಳಲಾಗುತ್ತಿದ್ದು, ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಜತೆಗೆ ವೇತನ, ಭತ್ಯೆಯಲ್ಲೂ ಬದಲಾವಣೆ ತರುವ ನಿರೀಕ್ಷೆ ಇದೆ.


ನವದೆಹಲಿ (ಸೆ.6): 4 ವರ್ಷಗಳಷ್ಟು ಅಲ್ಪಾವಧಿಗೆ ಯುವಕರನ್ನು ಸೇನಾಪಡೆಗಳಿಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ ಯೋಜನೆಯಲ್ಲಿ ಭಾರಿ ಬದಲಾವಣೆ ತರಲು ಕೇಂದ್ರ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗಿದೆ. 4 ವರ್ಷಗಳ ಸೇವಾವಧಿ ಮುಗಿದ ಬಳಿಕ ಈಗ ಶೇ.25ರಷ್ಟು ಅಗ್ನಿವೀರರನ್ನು ಮಾತ್ರ ಸೇವೆಯಲ್ಲಿ ಉಳಿಸಿಕೊಂಡು, ಉಳಿದವರನ್ನು ಬಿಡುಗಡೆ ಮಾಡಲಾಗುತ್ತಿದೆ. ಇನ್ನು ಮುಂದೆ ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸುವ ಸಂಭವವಿದೆ. ಜತೆಗೆ ವೇತನ, ಭತ್ಯೆಯಲ್ಲೂ ಬದಲಾವಣೆ ತರುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ. ಸೇನಾಪಡೆಗಳು ತಮ್ಮ ವಿವಿಧ ಘಟಕಗಳಿಂದ ಅಗ್ನಿಪಥ ಯೋಜನೆ ಕುರಿತು ಅಭಿಪ್ರಾಯ ಸ್ವೀಕರಿಸಿದೆ. ಜತೆಗೆ ಆಂತರಿಕ ಸಮೀಕ್ಷೆ ನಡೆಸಿದೆ. ಆ ಪ್ರಕಾರ, ಶೇ.25ರಷ್ಟು ಅಗ್ನಿವೀರರನ್ನು ಮಾತ್ರವೇ ಸೇವೆಯಲ್ಲಿ ಉಳಿಸಿಕೊಳ್ಳುವುದು ತೀರಾ ಕಡಿಮೆಯಾಗುತ್ತದೆ. ಇದರಿಂದ ನಿರೀಕ್ಷಿತ ಯುದ್ಧ ಸನ್ನದ್ಧತೆಯನ್ನು ಕಾಯ್ದುಕೊಳ್ಳುವುದು ಕಷ್ಟ. ಹೀಗಾಗಿ ಈ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಳ ಮಾಡಬೇಕು ಎಂದು ಸೇನಾಪಡೆಗಳು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಶಿಫಾರಸು ಮಾಡಿವೆ ಎನ್ನಲಾಗಿದೆ. ಇದು ಜಾರಿಗೆ ಬರಲು ಒಂದಷ್ಟು ಸಮಯ ಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ.

ಇದರೊಂದಿಗೆ ಅಗ್ನಿವೀರರಿಗೆ ನೀಡಲಾಗುತ್ತಿರುವ ವೇತನವನ್ನೂ ಹೆಚ್ಚಳ ಮಾಡುವ ಸಾಧ್ಯತೆ ಕಾಣುತ್ತಿದೆ. ಅದರೊಂದಿಗೆ ಅಗ್ನಿವೀರ ಯೋಜನೆಯಲ್ಲಿ ಸಿಗುವಂಥ ಬೆನಿಫಿಟ್‌ಗಳನ್ನು ಏರಿಸುವ ಯೋಚನೆ ಕೂಡ ಕೇಂದ್ರದ ಮುಂದಿದೆ.

Latest Videos

undefined

ವಿಪಕ್ಷದ ವಿರೋಧಕ್ಕೆ ಮಣಿದ ಸರ್ಕಾರ?: ಸೇನಾಪಡೆಗಳಿಗೆ ಅಲ್ಪಾವಧಿಗೆ ಮಾತ್ರ ನೇಮಕಾತಿ ಮಾಡಿಕೊಳ್ಳುವ ಈ ಯೋಜನೆ ಬಗ್ಗೆ ಪ್ರತಿಪಕ್ಷಗಳು ನಿರಂತರ ಟೀಕಾ ಪ್ರಹಾರ ನಡೆಸುತ್ತಿವೆ. ಈ ಯೋಜನೆಯಿಂದಾಗಿ, ಹೆಚ್ಚು ಯುವಕರು ಸೇನೆಗೆ ಸೇರುವ ದೇಶದ ವಿವಿಧ ಭಾಗಗಳಲ್ಲಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಹಿನ್ನಡೆ ಆಗಿದೆ ಎಂಬ ವಿಶ್ಲೇಷಣೆಗಳಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಯೋಜನೆಯ ಪರಿಷ್ಕರಣೆಗೆ ಮುಂದಾಗಿರುವುದು ಗಮನಾರ್ಹ.

ಕಾಂಗ್ರೆಸ್‌ ಆಕ್ಷೇಪ: ಈ ನಡುವೆ, ಯೋಜನೆಯಲ್ಲಿ ಬದಲಾವಣೆಯನ್ನು ನಾವು ಒಪಲ್ಲ. ಇಡೀ ಅಗ್ನಿವೀರ ಯೋಜನೆಯನ್ನೇ ರದ್ದು ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಅಗ್ನಿವೀರರು ಅಂದ್ರೆ ಯಾರು ? ಏನೆಲ್ಲಾ ಸೌಲಭ್ಯ ಸಿಗುತ್ತವೆ ? ರಾಹುಲ್ ಗಾಂಧಿ ಆರೋಪಗಳಿಗೆ..ಸೈನ್ಯವೇ ಕೊಟ್ಟಿತು ಉತ್ತರ..!

2022ರಲ್ಲಿ ಆರಂಭವಾದ ಯೋಜನೆ: 2022ರಲ್ಲಿ ಕೇಂದ್ರ ಸರ್ಕಾರ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಆರಂಭ ಮಾಡಿತ್ತು. ಅಗ್ನಿಪಥ ಯೋಜನೆಯ ಅಡಿಯಲ್ಲಿ ದೇಶದ ಮೂರು ಸೇನಾಪಡೆಗಳಾದ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಗೆ ಅಗ್ನಿವೀರರನ್ನು ಆಯ್ಕೆ ಮಾಡುವುದಾಗಿ ಘೋಷಣೆ ಮಾಡಿತ್ತು. ನಾಲ್ಕು ವರ್ಷಗಳ ಸೇವಾಅವಧಿ ಇವರದಾಗಿರಲಿದೆ. ಇದರಲ್ಲಿ ಶೇ. 25ರಷ್ಟು ಮಂದಿ ಮಾತ್ರವೇ ಸೇನೆಯಲ್ಲಿ ಪರ್ಮ್‌ನೆಂಟ್‌ ಕಮೀಷನ್‌ಗೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿತ್ತು. ಕೇಂದ್ರದ ಈ ಯೋಜನೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತಾದರೂ ಕೇಂದ್ರ ಸರ್ಕಾರ ಮಾತ್ರ ಈ ಯೋಜನೆಯನ್ನು ಸಮರ್ಥಿಸಿಕೊಂಡಿದೆ.

 

ಒಂದೇ ವರ್ಷದಲ್ಲಿ 19 ಅಗ್ನಿವೀರರ ಸಾವು: 2023ರಲ್ಲಿ ಸೇನೆಗೆ ನಿಯೋಜನೆಗೊಂಡಿದ್ದ ಮೊದಲ ತಂಡ

click me!