ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರವಿಸರ್ಜನೆ ಮಾಡಿದ ಶಂಕರ್‌ನ ವಜಾಗೊಳಿಸಿದ ವೆಲ್ಸ್ ಫಾರ್ಗೋ!

By Suvarna NewsFirst Published Jan 6, 2023, 9:59 PM IST
Highlights

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾಗೆ ಮತ್ತೊಂದು ಶಾಕ್, ವೆಲ್ಸ್ ಫಾರ್ಗೋ ಕಂಪನಿಯಿಂದ ಶಂಕರ್ ಮಿಶ್ರಾ ವಜಾಗೊಳಿಸಲಾಗಿದೆ.
 

ಬೆಂಗಳೂರು(ಜ.06): ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಪ್ರಕರಣವನ್ನು ವಿಮಾನಯಾನ ನಿಯಂತ್ರಕ ಡಿಜಿಸಿಎ ಗಂಭೀರವಾಗಿ ಪರಿಗಣಿಸಿದೆ. ಮೂತ್ರ ವಿಸರ್ಜನೆ ಮಾಡಿ ಬಳಿಕ ಮಾತುಕತೆ ನಡೆಸಿ ಜಾರಿಕೊಂಡಿದ್ದ ಶಂಕರ್ ಮಿಶ್ರಾಗೆ ಒಂದರ ಮೇಲೊಂದರಂತೆ ಸಮಸ್ಯೆ ಎದುರಾಗಿದೆ. ಈ ಘಟನೆ ಬೆನ್ನಲ್ಲೇ ವೆಲ್ಸ್ ಫಾರ್ಗೋ ಕಂಪನಿ ಶಂಕರ್‌ ಮಿಶ್ರಾನನ್ನು ವಜಾಗೊಳಿಸಿದೆ. ಶಂಕರ್ ಮಿಶ್ರಾ ಅಮೆರಿಕ ಮೂಲದ ಫಿನಾನ್ಸ್ ಸರ್ವೀಸ್ ಕಂಪನಿ ವೆಲ್ಸ್ ಫಾರ್ಗೋದಲ್ಲಿ ಭಾರತದ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಕುರಿತು ಪತ್ರಿಕಾ ಪ್ರಕರಣ ಬಿಡುಗಡೆ ಮಾಡಿರುವ ವೆಲ್ಸ್ ಫಾರ್ಗೋ, ಶಿಸ್ತು ಮೀರಿದ  ಹಾಗೂ ನಿಯಮ ಉಲ್ಲಂಘಿಸುವ ಸಿಬ್ಬಂದಿಯನ್ನು ಕಂಪನಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ವೆಲ್ಸ್ ಫಾರ್ಗೋ ಹೇಳಿದೆ.

ವೆಲ್ಸ್‌ ಫಾರ್ಗೋ ಹಣಕಾಸು ಸೇವಾ ಕಂಪನಿಯಾಗಿದೆ. ‘ಮಿಶ್ರಾ ಮೇಲೆ ಕೇಳಿಬಂದ ಆರೋಪ ಆಘಾತಕಾರಿ. ನೌಕರರಿಂದ ನಾವು ಉತ್ತಮ ನಡವಳಿಕೆ ನಿರೀಕ್ಷಿಸುತ್ತೇವೆ. ಹೀಗಾಗಿ ಅವರನ್ನು ವಜಾ ಮಾಡಲಾಗುತ್ತದೆ’ ಎಂದು ಕಂಪನಿ ಹೇಳಿದೆ. 

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದು ಓರ್ವ ಉದ್ಯಮಿ..

ಇತ್ತ ಡಿಜಿಸಿಎ ವಿಮಾನಯಾನ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. ವಿಮಾನಗಳಲ್ಲಿ ಪ್ರಯಾಣಿಕರು ನಡೆಸುವ ಪುಂಡಾಟಗಳ ವಿರುದ್ಧ ವಿಮಾನಯಾನ ಸಂಸ್ಥೆಗಳು ಕ್ರಮ ಕೈಗೊಳ್ಳದಿದ್ದರೆ ಆ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ  ಡಿಜಿಸಿಎಎಚ್ಚರಿಕೆ ನೀಡಿದೆ. ಇತ್ತೀಚಿಗೆ  ವಿಮಾನದೊಳಗೆ ಇತ್ತೀಚಿಗೆ ನಡೆದ ಅನುಚಿತ ಘಟನೆಗಳಲ್ಲಿ ವಿಮಾನದ ಸಿಬ್ಬಂದಿ ಕ್ರಮ ಕೈಗೊಳ್ಳಲು ಸೋತಿದ್ದಾರೆ. ಆದರೆ ಇಂತಹ ಘಟನೆಗಳ ವಿರುದ್ಧ ಕ್ರಮ ಜರುಗಿಸದೇ ಇರುವುದು ಸರಿಯಲ್ಲ. ಹಾಗಾಗಿ ಇನ್ನು ಮುಂದೆ ಇಂತಹ ಘಟನೆಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಂತಹ ಸಂಸ್ಥೆಗಳ ವಿರುದ್ಧ ಡಿಜಿಸಿಎ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದೆ.

ನ್ಯೂಯಾರ್ಕ್ ದೆಹಲಿ ವಿಮಾನದಲ್ಲಿ ನಡೆದ ಘಟನೆ 
ಮಹಿಳೆಯೊಬ್ಬರು ಏರ್‌ ಇಂಡಿಯಾದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದರು. ರಾತ್ರಿ ಊಟದ ಬಳಿಕ ವಿಮಾನದಲ್ಲಿ ಲೈಟ್‌ ಅನ್ನು ಡಿಮ್‌ ಮಾಡಿದ ವೇಳೆ 70 ವರ್ಷದ ಮಹಿಳೆ ಪಕ್ಕ ಕುಳಿತಿದ್ದ ವೃದ್ಧ ವ್ಯಕ್ತಿಯೊಬ್ಬ ಏಕಾಏಕಿ ಈಕೆಯ ಸೀಟಿನ ಬಳಿಗೆ ಬಂದು ಮೂತ್ರ ವಿಸರ್ಜನೆ ಮಾಡಿ, ಬಳಿಕವೂ ಅಲ್ಲೇ ನಿಂತು ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಮಹಿಳೆ ತೊಟ್ಟಿದ್ದ ವಸ್ತ್ರ, ಸೀಟೆಲ್ಲಾ ಮೂತ್ರದಿಂದ ಒದ್ದೆಯಾಗಿತ್ತು. ಈ ವೇಳೆ ಮಹಿಳೆ ವಿಮಾನದ ಸಿಬ್ಬಂದಿಗೆ ದೂರಿದ ಬಳಿಕ ಅವರು ಜುಬ್ಬಾ ಪೈಜಾಮಾ ನೀಡಿ, ಸಿಬ್ಬಂದಿಗೆ ಇರುವ ಆಸನದಲ್ಲಿ ಕೂರಲು ಹೇಳಿದ್ದರು.

Air India: ಮಹಿಳಾ ಪ್ರಯಾಣಿಕರ ಬ್ಲಾಂಕೆಟ್‌ ಮೇಲೆ ಮೂತ್ರ ವಿಸರ್ಜನೆ: ಮತ್ತೊಂದು ಘಟನೆ ಬೆಳಕಿಗೆ..!

ಇದಾದ ಅರ್ಧ ಗಂಟೆ ಬಳಿಕ ಮಹಿಳೆಗೆ ನಿಮ್ಮ ಸ್ಥಾನಕ್ಕೆ ತೆರಳಿ ಎಂದು ಸಿಬ್ಬಂದಿ ಸೂಚಿಸಿದ್ದರು. ಹೀಗಾಗಿ ಮಹಿಳೆ ತಮ್ಮ ಸೀಟಿಗೆ ಮರಳಿ ನೋಡಿದರೆ ಅಲ್ಲಿ ಇನ್ನೂ ಮೂತ್ರ ಹಾಗೆಯೇ ಉಳಿದುಕೊಂಡಿತ್ತು. ಈ ಬಗ್ಗೆ ಮತ್ತೆ ದೂರಿದ ಬಳಿಕ, ಎಕಾನಮಿ ಕ್ಲಾಸ್‌ನಲ್ಲಿ ಸಾಕಷ್ಟುಸೀಟು ಇದ್ದರೂ ಅಲ್ಲಿ ಸೀಟು ನೀಡದೆ ಮರಳಿ ಸಿಬ್ಬಂದಿಗಳ ಸೀಟಿನಲ್ಲೇ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಇಷ್ಟೆಲ್ಲಾ ಆದರೂ ದೆಹಲಿಯಲ್ಲಿ ವಿಮಾನ ಇಳಿದ ಬಳಿಕ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ವಿರುದ್ಧ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳದೇ ಬಿಟ್ಟು ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಮಾರನೇ ದಿನ ಮಹಿಳೆ, ಏರ್‌ ಇಂಡಿಯಾ ಅಧ್ಯಕ್ಷ ಚಂದ್ರಶೇಖರನ್‌ ಅವರಿಗೆ ಪತ್ರ ಬರೆದು ದೂರಿದ್ದರು. ‘:ಇದು ನನ್ನ ಜೀವನದಲ್ಲೇ ನಾನು ಎದುರಿಸಿದ ಅತ್ಯಂತ ಆಘಾತಕಾರಿ ಘಟನೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ತನಿಖೆಗೆ ಆಂತರಿಕ ಸಮಿತಿ ರಚಿಸಿ ಅದರ ಆರೋಪಿ ಪ್ರಯಾಣಿಕನ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಜೊತೆಗೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ವಿರುದ್ಧ ದೆಹಲಿಯಲ್ಲಿ ಕೇಸು ದಾಖಲಿಸಲಾಗಿದೆ.

click me!