ಮೃತ ಪೊಲೀಸ್ ಅಧಿಕಾರಿಗೆ ಮೋದಿ ಸೆ.17ರ ಭೇಟಿಯ ನಿರ್ವಹಣೆ ಹೊಣೆ, ಮುಜುಗರಕ್ಕೀಡಾದ ಒಡಿಶಾ!

By Chethan Kumar  |  First Published Sep 15, 2024, 7:04 PM IST

ಸೆ.17ರಂದು ಮೋದಿ ಒಡಿಶಾಗೆ ಭೇಟಿ ನೀಡುತ್ತಿದ್ದಾರೆ.  ಈ ವೇಳೆ ಜನಸಂದಣಿ ನಿರ್ವಹಣೆ ಹೊಣೆಯನ್ನು ಕಳೆದ ವರ್ಷ ಮೃತಪಟ್ಟ ಪೊಲೀಸ್ ಅಧಿಕಾರಿಗೆ ವಹಿಸಿದ ನಿರ್ಧಾರ ಒಡಿಶಾ ಸರ್ಕಾರಕ್ಕೆ ಮಜುಗರ ತರಿಸಿದೆ.


ಭುವನೇಶ್ವರ್(ಸೆ.15) ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17 ರಂದು ಒಡಿಶಾಗೆ ಭೇಟಿ ನೀಡುತ್ತಿದ್ದಾರೆ. ಮಹಿಳಾ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲು ತೆರಳುತ್ತಿರುವ ಮೋದಿ ಕಾರ್ಯಕ್ರಮಕ್ಕೆ ಭಾರಿ ತಯಾರಿ ನಡೆಯುತ್ತಿದೆ. ಜನತಾ ಮೈದಾನದಲ್ಲಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ. ಹೀಗಾಗಿ ನಿರ್ವಹಣೆಗೆ ಒಡಿಶಾ ಸರ್ಕಾರ ಹಲವು ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಈ ಪೈಕಿ ಜನಸಂದಣಿ ನಿರ್ವಹಣೆಗೆ ಒಡಿಶಾ ಅಡ್ಮಿನಿಸ್ಟ್ರೇಟ್ ಸರ್ವೀಸ್ ಅಧಿಕಾರಿ ಪ್ರಭೋಧ ಕುಮಾರ್‌ಗೆ ವಹಿಸಲಾಗಿದೆ. ಆದರೆ ಪ್ರಭೋಧ ಕುಮಾರ್ ಕಳೆದ ವರ್ಷ ಮೃತಪಟ್ಟಿದ್ದಾರೆ.

ಮೋದಿ ಭೇಟಿ ಬೇಳೆ ಭದ್ರತಾ ವ್ಯವಸ್ಥೆ, ಜನಸಂದಣಿ ನಿರ್ವಹಣೆ, ಟ್ರಾಫಿಕ್ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲು 50 OAS ಅಧಿಕಾರಿಗಳ ಹೆಸರು ಪಟ್ಟಿ ಮಾಡಿದೆ. ಈ ಪಟ್ಟಿಯನ್ನು ಒಡಿಶಾ ಸರ್ಕಾರ ಘೋಷಿಸಿ, ಕಾರ್ಯಕ್ರಮ ಸೂಸೂತ್ರವಾಗಿ ನಡೆಯುವಂತೆ ಸೂಚನೆ ನೀಡಿದೆ. ಆದರೆ ಈ ಪಟ್ಟಿಯಲ್ಲಿರುವ ಅಧಿಕಾರಿಗಳ ಪೈಕಿ ಪ್ರಬೋಧ ಕುಮಾರ್ 2023ರ ಜುಲೈ ತಿಂಗಳಲ್ಲಿ ನಿಧನರಾಗಿದ್ದಾರೆ. ಕೊನೆಯದಾಗಿ OCAC ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ನಿಧನರಾಗಿದ್ದರು.

Latest Videos

undefined

ಬೊಂಡಾ ಸಮುದಾಯದಿಂದ ನೀಟ್ ಪಾಸ್ ಮಾಡಿದ ಮೊದಲಿಗ, ಕೇಂದ್ರದಿಂದ 1.2 ಲಕ್ಷ ರೂ ಫೀಸ್ ಮನ್ನ!

ಜನಸಂದಣಿ ನಿರ್ವಹಣೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದ ಪ್ರಭೋಧ ಕುಮಾರ್‌ಗೆ ನಿಧನರಾಗಿದ್ದರೂ ಅವರ ಹೆಸರು, ಸೇವೆಯನ್ನು ಒಡಿಶಾ ಪೊಲೀಸ್ ವಿಭಾಗ ಹಾಗೂ ಸರ್ಕಾರದಲ್ಲಿ ಈಗಲೂ ಜನಜನಿತವಾಗಿದೆ. ಹೀಗಾಗಿ ಸೆಪ್ಟೆಂಬರ್ 17ರ ಕಾರ್ಯಕ್ರಮಕ್ಕೆ ನಿಧನರಾಗಿರುವ ಪ್ರಬೋಧ್ ಕುಮಾರ್‌ಗೆ ಡ್ಯೂಟಿ ಹಾಕಿದ್ದಾರೆ.

ಈ ಮಾಹಿತಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ತಕ್ಷಣವೇ ಒಡಿಶಾ ಸರ್ಕಾರ ತಪ್ಪಿನಿಂದ ಎಚ್ಚೆತ್ತುಕೊಂಡಿದೆ. ಈ ಆದೇಶ ಹಿಂಪಡೆದು ಹೊಸ ಆದೇಶ ಪ್ರಕಟಿಸಿದೆ. ತಪ್ಪು ಸರಿಪಡಿಸಿ ಹೊಸ ಅಧಿಕಾರಿಯನ್ನು ಈ ಸ್ಥಾನಕ್ಕೆ ನೇಮಿಸಿದ್ದಾರೆ. ಒಡಿಶಾ ಸರ್ಕಾರ ಎಡವಟ್ಟಿನಿಂದ ಒಡಿಶಾ ಬಿಜೆಪಿ ಮುಜುಗರಕ್ಕೀಡಾಗಿದೆ. ಇತ್ತ ಬಿಜೆಡಿ ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರವನ್ನು ಟ್ರೋಲ್ ಮಾಡಿದೆ. 

ಮಹಿಳಾ ಮತ್ತು ಮಕ್ಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯಕ್ರಮಕ್ಕಾಗಿ ಮೋದಿ ಒಡಿಶಾಗೆ ಆಗಮಿಸುತ್ತಿದ್ದಾರೆ. ಭುವನೇಶ್ವರದ ಜನತಾ ಮೈದಾನದಲ್ಲಿ ಈ ಕಾರ್ಯಕ್ರಮ ಆಯೋಜಿಸಾಗಿದೆ. ಮಹಿಳೆಯರ ಸುಭದ್ರಾ ಯೋಜನ ಉದ್ಘಾಟನೆಗಾಗಿ ಆಗಮಿಸುತ್ತಿರುವ ಮೋದಿ, ಮಹಿಳಾ ಫಲಾನುಭವಿಗಳ ಭೇಟಿ ಮಾಡಿ ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ವಿತರಿಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಬೃಹತ್ ವೇದಿ ನಿರ್ಮಾಣಗೊಂಡಿದೆ.

ದೇಶದಲ್ಲಿರುವ ಶ್ರೀಕೃಷ್ಣನ ಪ್ರಮುಖ 7 ದೇವಾಲಯಗಳು ಮತ್ತು ನಿಗೂಢ ರಹಸ್ಯಗಳು!
 

click me!