ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋಗಳನ್ನು ನೋಡಿದ್ರೆ ನಗು ಬರಬಹುದು. ಆದ್ರೆ ಈ ವಿಡಿಯೋ ನೋಡಿದ್ರೆ ನಿಮಗೆ ಕೆಟ್ಟ ಕೋಪ ಬರುತ್ತದೆ.
ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಕೆಲವೊಮ್ಮೆ ಅಸಹ್ಯ, ಛೀ ಥೂ ಅನ್ನುವಂತಹ ವಿಡಿಯೋಗಳು ಸಹ ಹರಿದಾಡುತ್ತಿರುತ್ತವೆ. ಕೆಲವರು ಡ್ಯಾನ್ಸ್ ಮಾಡುತ್ತಾ ಬಿದ್ರೆ, ಸ್ಟಂಟ್ ಮಾಡುತ್ತಾ ಎಡವಟ್ಟು ಮಾಡಿಕೊಂಡಿರುವ ವಿಡಿಯೋಗಳು ಅತಿ ಬೇಗ ಟ್ರೆಂಡಿಂಗ್‌ನಲ್ಲಿ ಬರುತ್ತವೆ. ಕೆಲವೊಮ್ಮೆ ಒಂದಿಷ್ಟು ಮಂದಿ ಕಲ್ಪನೆಗೂ ಮೀರಿದ ರೀತಿಯಲ್ಲಿ ಕಂಟೆಂಟ್ ಇರೋ ವಿಡಿಯೋಗಳನ್ನು ರಚಿಸುತ್ತಿರುತ್ತಾರೆ. ಇಂದು ನಾವು ತೋರಿಸುವ ವಿಡಿಯೋ ನೋಡಿದ್ರೆ ನಗೋದು ಖಂಡಿತ. ಹಾಗಾದ್ರೆ ವೈರಲ್ ಆಗುತ್ತಿರೋ ವಿಡಿಯೋದಲ್ಲಿ ಏನಿದೆ ಅಂತ ನೋಡೋಣ ಬನ್ನಿ.
ಈ ವಿಡಿಯೋ ನೋಡಿದರೆ ಕೆಲವರಿಗೆ ಕೋಪ ಸಹ ಬರುತ್ತದೆ. ತಿನ್ನುವ ಅಥವಾ ಕುಡಿಯುವ ಆಹಾರದ ಜೊತೆ ಈ ರೀತಿ ವಿಚಿತ್ರವಾಗಿ ವಿಡಿಯೋ ಮಾಡಬಾರದು. ನಾವೆಲ್ಲರೂ ಆಹಾರವನ್ನು ದೇವರ ರೂಪದಲ್ಲಿ ಕಾಣುತ್ತವೆ. ಕೇವಲ ವ್ಯೂವ್, ಲೈಕ್ಸ್‌ಗಾಗಿ ಆಹಾರದ ಜೊತೆ ಹೀಗೆ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧ. ಲೈಕ್ಸ್ ಬರಬಹುದು, ಆದ್ರೆ ಯಾರಿಗೂ ಈ ವಿಡಿಯೋ ಖಂಡಿತ ಇಷ್ಟವಾಗಲ್ಲ. ಜನರಿಂದ ನಿಂದನೆಗೊಳಗಾದ ಆ ವೈರಲ್ ವಿಡಿಯೋದಲ್ಲಿ ಏನಿದೆ ಗೊತ್ತಾ? ಆ ಕುರಿತ ವರದಿ ಇಲ್ಲಿದೆ.
ಪ್ರೀತಿ ಅತಿಯಾದಾಗ ಹೀಗೆ ಆಗೋದು? ಕಾರ್‌ನಲ್ಲಿಯೇ ಮುಖಕ್ಕೆ ಪಟ ಪಟ ಅಂತ ಹೊಡೆದಾಡಿಕೊಂಡ ಗಂಡ ಹೆಂಡತಿ
ಈ ವಿಡಿಯೋದಲ್ಲಿ ವ್ಯಕ್ತಿಯೋರ್ವ ಟೀ ಮಾಡುತ್ತಿರೋದನ್ನು ನೋಡಬಹುದು. ಟೀ ಚೆನ್ನಾಗಿ ಕುದಿಯುತ್ತಿರುತ್ತದೆ. ಕೈಯಲ್ಲಿ ಜರಡಿ ಹಿಡಿದುಕೊಂಡು ಅಕ್ಕ-ಪಕ್ಕ ಬಟ್ಟೆ ಅಥವಾ ಇಕ್ಕಳ ಹುಡುಕುತ್ತಾನೆ. ಆದರೆ ಆತನಿಗೆ ಎಲ್ಲಿಯೂ ಬಟ್ಟೆಯೂ ಸಿಗಲ್ಲ, ಇಕ್ಕಳವೂ ಕಾಣಿಸಲ್ಲ. ಕೊನೆಗೆ ಧರಿಸಿದ ಲೂಫರ್ಸ್ (ಶೂ) ತೆಗೆದು ಹಿಂದಿನಿಂದ ಚಹಾವನ್ನು ತೆಗೆದು ಕಪ್‌ಗೆ ಜರಡಿ ಹಿಡಿದುಕೊಳ್ಳುತ್ತಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ಈತನಷ್ಟು ಕೊಳಕು ವ್ಯಕ್ತಿ ಮತ್ತೊಬ್ಬಿರಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋವನ್ನು @armaan.tawer ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋಗೆ 4.81 ಲಕ್ಷಕ್ಕೂ ಅಧಿಕ ಲೈಕ್ಸ್, 6 ಕೋಟಿಗೂ ಅಧಿಕ ವ್ಯೂವ್ ಬಂದಿವೆ. ನೆಟ್ಟಿಗರು ಸಹ ಶೂನಿಂದ ಜರಡಿ ಹಿಡಿದು ಟೀ ಕುಡಿದ ವ್ಯಕ್ತಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವ್ಯಕ್ತಿ ಎಷ್ಟು ಹೊಲಸು ಕೆಲಸ ಮಾಡಿದ್ದಾರೆ ನೋಡಿ. ಆಹಾರದ ಜೊತೆ ಎಂದಿಗೂ ಈ ರೀತಿ ಮಾಡಬೇಡಿ. ಸಾಧ್ಯವಾದ್ರೆ ಈ ವಿಡಿಯೋ ಡಿಲೀಟ್ ಮಾಡಿ. ಇಲ್ಲವಾದ್ರೆ ಇದರಿಂದ ಪ್ರೇರಿತಗೊಂಡು ಮತ್ತಷ್ಟು ಹುಚ್ಚರು ಇಂಥಾ ವಿಡಿಯೋಗಳನ್ನು ಮಾಡಬಹುದು ಎಂದು ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಬಾಯ್‌ಫ್ರೆಂಡ್ ಜೊತೆ ಓಡಿ ಹೋಗ್ತಿದ್ದ ಯುವತಿ; ರೈಲಿನೊಳಗೆ ಹೋಗುವಾಗ ಹುಡುಗಿಗೆ ನೆನಾಪದ ಅಪ್ಪ!