ಕೊರೋನಾಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ; ಎಚ್ಚರಿಕೆ ನೀಡಿದ ಇನ್ಫಿ ಮೂರ್ತಿ!

By Suvarna NewsFirst Published Apr 30, 2020, 8:46 PM IST
Highlights

ಕೊರೋನಾ ವೈರಸ್ ಹರದಂತೆ ತಡೆಯಲು ಭಾರತದಲ್ಲಿ ಲಾಕ್‌ಡೌನ್ ಮೇ.3ರವರೆಗೆ ವಿಸ್ತರಿಲಾಗಿದೆ. ಇದೀಗ ಮತ್ತೆ ವಿಸ್ತರಣೆಯಾಗುವು ಮಾತುಗಳು ಕೇಳಿ ಬರುತ್ತಿದೆ. ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕುರಿತು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್ ವಿಸ್ತರಣೆಯಾದರೆ ಕೊರೋನಾ ಸಾವಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದ್ದಾರೆ.

ಬೆಂಗಳೂರು(ಏ.30): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ ಮಾಡುವುದು ಉತ್ತಮ ನಿರ್ಧಾರವಲ್ಲ ಎಂದು ಇನ್ಫೋಸಿಸಿ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ. ಭಾರತದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಿದರೆ ಕೊರೋನಾ ಸಾವಿಗಿಂತ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಮೂರ್ತಿ ಹೇಳಿದ್ದಾರೆ. ಕೊರೋನಾ ಪರೀಕ್ಷೆ ಸೋಂಕಿತರ ಚಿಕಿತ್ಸೆ ಜೊತಗೆ ಜನರಿಗೆ ಕೆಲಸ ಮಾಡಲ ಅವಕಾಶ ನೀಡಬೇಕು ಎಂದು ಮೂರ್ತಿ ಆಗ್ರಹಿಸಿದ್ದಾರೆ.

ನಮ್ಮ ಸರಕಾರಿ ಶಾಲೆಗಳಿಗೋಸ್ಕರ 'ದಾನ' ಮೂರ್ತಿ ಮಹತ್ವದ ಹೆಜ್ಜೆ: ಭಲೇ ಭಲೇ

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕಿತರ ಸಂಖ್ಯೆ ಹಾಗೂ ಬಲಿಯಾದವರ ಸಂಖ್ಯೆ ಕಡಿಮೆ. ಇದೀಗ ಭಾರತ ಕೊರೋನಾ ಕಟು ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಭಾರತದಲ್ಲಿ ಪ್ರತಿ ವರ್ಷ 9 ಮಿಲಿಯನ್ ಅಂದರೆ 90 ಲಕ್ಷ ಜನ ಹಲವು ಕಾರಣಗಳಿಂದ ಸಾಯುತ್ತಿದ್ದಾರೆ. ಇದರಲ್ಲಿ ಮಾಲಿನ್ಯ ಸಮಸ್ಯೆಯಿಂದ, ಅಪಘಾತ ಸೇರಿದಂತೆ ಹಲವು ಕಾರಣಗಳಿಂದ ಜನ ಸಾಯುತ್ತಿದ್ದಾರೆ. ಈ ಅಂಕಿ ಅಂಶದ ಮುಂದೆ ಕೊರೋನಾ ಸಾವಿಗೆ ಬಲಿಯಾದವರ ಸಂಖ್ಯೆ ಕಡಿಮೆ ಕಾರಣ 2 ತಿಂಗಳಿಗೆ 1000. ಹೀಗಾಗಿ ಭಾರತ ಈ ಕುರಿತು ಚಿಂತಿಸಬೇಕಿದೆ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.

ಟಾಟಾ ಕಾಲಿಗೆ ಬಿದ್ದ ಮೂರ್ತಿ: ಇದು ಭಾರತದ ಸಂಸ್ಕೃತಿ!...

ಭಾರತದ 190 ಮಿಲಿಯನ್ ಜನರು ಉದ್ಯೋಗ ಅವಲಂಬಿಸಿದ್ದಾರೆ. ಆದರೆ ಲಾಕ್‌ಡೌನ್ ವಿಸ್ತರಣೆ ಮಾಡುತ್ತಿದ್ದರೆ. ಎಲ್ಲರ ಉದ್ಯೋಗಕ್ಕೆ ಕತ್ತರಿ ಬೀಳಲಿದೆ. ಹೀಗಾಗಿ ಹಸಿವಿನಿಂದ ಸಾಯುವವರ ಸಂಖ್ಯೆ, ಆತ್ಮಹತ್ಯೆಗಳು ಹೆಚ್ಚಾಗಲಿದೆ. ಹೀಗಾಗಿ ಲಾಕ್‌ಡೌನ್ ತೆರವುಗೊಳಿಸಿ ಜನರಿಗೆ ಉದ್ಯೋಗದ ಅವಕಾಶ ನೀಡಬೇಕು. ಕಾರ್ಖಾನೆಗಳು, ಇತರ ಎಲ್ಲಾ ಉದ್ಯೋಗ ಕ್ಷೇತ್ರಗಳು ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು ಎಂದಿದ್ದಾರೆ.

ಲಾಕ್‌ಡೌನ್ ಕಾರಣ ಬಹುತೇಕ ಕಂಪನಿಗಳು, ಕಾರ್ಖಾನೆಗಳು 15 ರಿಂದ 20% ನಷ್ಟ ಅನುಭವಸಿದೆ. ಇದರ ನಡುವೆ ಜನರಿಗೆ ಉದ್ಯೋಗ ಭದ್ರತೆ, ವೇತನ ನೀಡುತ್ತಿದೆ. ಇನ್ನೂ ಹೀಗಾಗಿ ಸರ್ಕಾರಕ್ಕೆ ತೆರಿಗೆ ಪಾವತಿ GST ಪಾವತಿ ಕಷ್ಟವಾಗಲಿದೆ. ಭಾರತದ ಜಿಡಿಪಿ ಸದ್ಯ 1.9%  ಕ್ಕೆ ಕುಸಿದಿದೆ. ಕಳೆದ ವರ್ಷ 4.5%  ರಷ್ಟಿತ್ತು. ಮತ್ತಷ್ಟು ಕುಸಿತ ಕಾಣುತ್ತಿರುವ ಆರ್ಥಿಕ ಚೇತರಿಕೆಗೆ ಲಾಕ್‌ಡೌನ್ ತೆರವು ಒಂದೇ ಮಾರ್ಗ. ಇನ್ನು ಭಾರತೀಯರು ಕೊರೋನಾ ವೈರಸ್ ಕಾಯಿಲೆಯಿಂದ ಎಚ್ಚರ ವಹಿಸಬೇಕು. ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ನಡೆಯುತ್ತಿದೆ. ಇತ್ತ ಭಾರತಕ್ಕೆ ವಕ್ಕರಿಸಿಕೊಂಡ ಹಲವು ರೋಗಗಳ ಪೈಕಿ ಇದು ಒಂದೂ ಎಂದು ನಾರಾಯಣ ಮೂರ್ತಿ ಹೇಳಿದ್ದಾರೆ.
 

click me!