Kasaragod: ನೂರಾರು ಪಕ್ಷಿಗಳನ್ನು ಉಳಿಸಲು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತಾತ್ಕಾಲಿಕ ಸ್ಥಗಿತ

By BK AshwinFirst Published Sep 8, 2022, 9:16 PM IST
Highlights

ಕಾಸರಗೋಡಿನ ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದರಲ್ಲಿ ಸುಮಾರು 100ಕ್ಕೂ ಅಧಿಕ ಪಕ್ಷಿಗಳು ವಾಸವಾಗಿದ್ದು, ಪಕ್ಷಿಗಳ ಮರಿಗಳು ದೊಡ್ಡದಾಗುವವರೆಗೆ ಆ ಮರ ಕಡಿಯದಿರಲು ತೀರ್ಮಾನ ಮಾಡಲಾಗಿದೆ. 

ಪಕ್ಷಿಗಳ (Birds) ಗೂಡುಗಳನ್ನು ರಕ್ಷಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿಯನ್ನು ಸ್ಥಗಿತಗೊಳಿಸಿದ ಘಟನೆ ಕೇರಳದ (Kerala) ಕಾಸರಗೋಡಿನ (Kasaragod) ಚೆರ್ಕಳ ಪೇಟೆಯಲ್ಲಿ ನಡೆದಿದೆ. ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆ ಕಾಮಗಾರಿ ತಲಪಾಡಿಯಿಂದ ಚೆರ್ಕಳವರೆಗಿನ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ಪರಿಶೀಲನೆ ವೇಳೆ ಪಕ್ಷಿಗಳ ಗೂಡು ಅವರ ಕಣ್ಣಿಗೆ ಬಿದ್ದಿದೆ. ಚೆರ್ಕಳ ಜಂಕ್ಷನ್‍ನಲ್ಲಿರುವ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದರಲ್ಲಿ (Tree) ಸುಮಾರು 100ಕ್ಕೂ ಅಧಿಕ ಪಕ್ಷಿಗಳು ಗೂಡು ಕಟ್ಟಿಕೊಂಡು ವಾಸವಾಗಿವೆ. ಈ ಹಿನ್ನೆಲೆ ಪಕ್ಷಿಗಳ ಸಂರಕ್ಷಣೆಗಾಗಿ (Bird Conservation) ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು, 25 ದಿನಗಳ ಕಾಲ ಮಾತ್ರ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದೂ ತಿಳಿದುಬಂದಿದೆ. ಗುತ್ತಿಗೆದಾರರ ಸೊಸೈಟಿ, ಅರಣ್ಯ ಇಲಾಖೆ ಹಾಗೂ ಪಕ್ಷಿ ತಜ್ಞರು ಸಮಾಲೋಚಿಸಿ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗವು ಸೆಪ್ಟೆಂಬರ್ 5 ರಂದು ರಸ್ತೆ ಗುತ್ತಿಗೆದಾರರಿಗೆ ಮರವನ್ನು ಕಡಿಯುವುದನ್ನು ಕನಿಷ್ಠ 25 ದಿನಗಳೊಳಗೆ ನಿಲ್ಲಿಸುವಂತೆ ಮನವರಿಕೆ ಮಾಡಿತು. ಆ 25 ದಿನಗಳು ಕಳೆಯುವಷ್ಟರಲ್ಲಿ, ಆ ಮರಿಗಳಿಗೆ ಹಾರುವ ವಯಸ್ಸಾಗುತ್ತವೆ ಎಂದು ಭಾವಿಸಲಾಗಿದೆ. ಮಲಪ್ಪುರಂಗಿಂತ ಭಿನ್ನವಾಗಿ, ಕಾಸರಗೋಡಿನಲ್ಲಿ ಗುತ್ತಿಗೆದಾರರಾದ ಮೇಘಾ ಕನ್ಸ್ಟ್ರಕ್ಷನ್ಸ್ ನಿಗದಿತ ಮರ ಕಡಿಯುವ ಮೊದಲು ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ ಪಿ. ಧನೇಶ್ ಕುಮಾರ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಏಕೆಂದರೆ, ಸಾಮಾಜಿಕ ಅರಣ್ಯ ವಿಭಾಗಕ್ಕೆ ತಿಳಿಸುವುದು ಗುತ್ತಿಗೆದಾರರಿಗೆ ಕಡ್ಡಾಯವಾಗಿತ್ತು.

Namma Metro: ಮೆಟ್ರೋ ಯೋಜನೆಗೆ ಕಡಿದ ಮರಕ್ಕೆ ಪರ್ಯಾಯವಾಗಿ ನೆಟ್ಟ ಸಸಿ ಎಲ್ಲಿವೆ?: ಹೈಕೋರ್ಟ್‌

ಕಾಸರಗೋಡು ಬರ್ಡರ್ಸ್ ಕ್ಲಬ್ ಗೂಡುಕಟ್ಟುವ ಮರಗಳ ಪಟ್ಟಿಯನ್ನು ರಚಿಸಿತ್ತು ಮತ್ತು ಅದರಲ್ಲಿ ಚೆರ್ಕಳ ಜಂಕ್ಷನ್‌ನಲ್ಲಿರುವ ಇದೂ ಒಂದು. ಆದ್ದರಿಂದ, ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣಕ್ಕೆ ದಾರಿ ಮಾಡಿಕೊಡಲು ಕಡಿಯಲು ಗುರುತಿಸಲಾದ ಮರವು 18 ಭಾರತೀಯ ಕೊಳದ ಹೆರಾನ್ ಮತ್ತು 10 ಚಿಕ್ಕ ಕಾರ್ಮೊರೆಂಟ್ ಗೂಡುಗಳನ್ನು ಹೊಂದಿದೆ ಎಂದು ತಿಳಿದಿತ್ತು. ಅಂದರೆ, ಆ ಮರದ ಮೇಲೆ ತಮ್ಮ ಮರಿಗಳೊಂದಿಗೆ 28 ​​ನೀರಿನ ಪಕ್ಷಿಗಳ ಕುಟುಂಬಗಳು ವಾಸ ಮಾಡುತ್ತಿವೆ ಎಂದು ತಿಳಿದುಬಂದಿದೆ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದ್ದರೂ ಗುತ್ತಿಗೆದಾರರು ಗೂಡು ಕಟ್ಟಿದ ಮರವಾಗಿದ್ದರಿಂದ ಕಡಿಯುವ ಮುನ್ನ ಸಾಮಾಜಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕಿತ್ತು. ಅರಣ್ಯ ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವ ಧೈರ್ಯಶಾಲಿ ಪ್ರಯತ್ನಗಳಿಗಾಗಿ ಪ್ರತಿಷ್ಠಿತ ಅಭಯಾರಣ್ಯ ನೇಚರ್ ಫೌಂಡೇಶನ್ ಪ್ರಶಸ್ತಿ ಪಡೆದ ಅಧಿಕಾರಿ ಧನೇಶ್ ಅವರು ಈ ಮರ ಕಡಿಯಲು ಒಪ್ಪಲಿಲ್ಲ.

ಹಾಗೂ, ಪಕ್ಷಿಗಳಿಗೆ ಏನಾದರೂ ತೊಂದರೆಯಾದರೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ನಾನು ಅವರಿಗೆ ಹೇಳಿದ್ದೇನೆ ಎಂದೂ ಧನೇಶ್ ಹೇಳಿದರು. ಭಾರತೀಯ ಕೊಳದ ಬಕ ಮತ್ತು ಲಿಟಲ್ ಕಾರ್ಮೊರೆಂಟ್ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್‌ IV (Schedule IV) ಅಡಿಯಲ್ಲಿ ಬರುತ್ತವೆ. ಶೆಡ್ಯೂಲ್ IV ಜಾತಿಗಳು ಅಳಿವಿನಂಚಿನಲ್ಲಿಲ್ಲ. ಆದರೆ ಅವುಗಳಿಗೆ ಯಾವುದೇ ಹಾನಿ ಮಾಡಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಹಾಕಬಹುದು. ಇನ್ನು, ಗುತ್ತಿಗೆದಾರನಿಗೆ ನಿಗದಿತ ಸಮಯಕ್ಕೆ ಕೆಲಸವನ್ನು ಮುಗಿಸುವ ಒತ್ತಡವಿದ್ದರೂ ಈ ಜನರು ಬಹಳ ತಿಳುವಳಿಕೆ ತೋರುತ್ತಿದ್ದಾರೆ ಮತ್ತು ಅವರು ಗೂಡುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಹಾಗಾಗಿ ಕಾಸರಗೋಡು ಬರ್ಡರ್ಸ್ ಕ್ಲಬ್‌ನ ರಾಜು ಕಿದೂರ್ ಅವರೊಂದಿಗೆ ಮಾತನಾಡಲು ನಾನು ಅವರನ್ನು ಕೇಳಿದೆ ಎಂದೂ ಧನೇಶ್ ಹೇಳಿದ್ದಾರೆ.

Mangaluru: ಪೊಲೀಸ್ ಕ್ಯಾಂಪಸ್‌ನಲ್ಲೇ ಲಕ್ಷಾಂತರ ಮೌಲ್ಯದ ಮರಗಳು ಕಟ್!

ಕಳೆದ ವಾರ ಅಂದರೆ ಆಗಸ್ಟ್‌ 31 ರಂದು ಕೇರಳದ ಮಲಪ್ಪುರಂನಲ್ಲಿ (Malappuram) ರಸ್ತೆ ಕಾಮಗಾರಿಗೆ ಬೃಹತ್ ಮರ ಉರುಳಿಸಲಾಗಿತ್ತು. ಮರದಲ್ಲಿದ್ದ ನೂರಾರು ಪಕ್ಷಿಗಳು ಮೃತಪಟ್ಟಿದ್ದವು. ಆ ವಿಡಿಯೋ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿ ಪರಿಸರ ಪ್ರೇಮಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಪರಿಣಾಮ ಅಲ್ಲಿನ ಸರ್ಕಾರ ಆ ಘಟನೆ ಬಗ್ಗೆ ವರದಿ ನೀಡುವಂತೆ ಸೂಚಿಸಿತ್ತು. ಹೀಗಾಗಿ ಅಂಥ ಅನಾಹುತ ಇಲ್ಲಿಯೂ ಆಗದಿರಲಿ ಎಂದು ಕಾಸರಗೋಡಿನಲ್ಲಿ ಪಕ್ಷಿಗಳ ಗೂಡು ಸಂರಕ್ಷಣೆ ಗೆ ಕಾಮಗಾರಿ ಸ್ಥಗಿತಗೊಳಿಸಿ ಕ್ರಮ ಕೈಗೊಂಡಿರಬಹುದು ಎಂದು ಹೇಳಲಾಗಿದೆ. 

click me!