
ನವದೆಹಲಿ(ಜೂ.21): ಇತ್ತೀಚೆಗೆ ವಕೀಲರೊಬ್ಬರು ಬನಿಯನ್ ಧರಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್‌ಗೆ ಹಾಜರಾಗಿ ನ್ಯಾಯಾಧೀಶರಿಂದ ಬೈಸಿಕೊಂಡಿದ್ದಾಯಿತು. ಈಗ ಇನ್ನೊಬ್ಬ ವಕೀಲರು ಟೀ ಶರ್ಟ್ ಧರಿಸಿ ಮಂಚದ ಮೇಲೆ ಮಲಗಿಕೊಂಡು ಹಾಜರಾಗಿ ಸುಪ್ರೀಂ ಕೋರ್ಟ್‌ನಿಂದ ಛೀಮಾರಿಗೆ ಒಳಗಾಗಿದ್ದಾರೆ. ‘ಕನಿಷ್ಠ ಶಿಸ್ತು-ಶಿಷ್ಟಾಚಾರ ಪಾಲಿಸಿ’ ಎಂದು ವಕೀಲರಿಗೆ ಕೋರ್ಟ್ ಎಚ್ಚರಿಸಿದೆ.
ಕೊರೋನಾ ಹಿನ್ನೆಲೆಯಲ್ಲಿ ಹೆಚ್ಚು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಈಗ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಡೆಸುತ್ತಿದೆ. ಇಂಥದ್ದೇ ಒಂದು ಕಲಾಪವನ್ನು ನ್ಯಾ| ರವೀಂದ್ರ ಭಟ್ ನಡೆಸುತ್ತಿದ್ದರು. ಈ ವೇಳೆ ವಕೀಲರೊಬ್ಬರು ಟೀಶರ್ಟ್ ಧರಿಸಿ ಹಾಸಿಗೆಯ ಮೇಲೆ ಮಲಗಿ ಹಾಜರಾಗಿದ್ದು ಕಂಡುಬಂತು.
ರಥ ಯಾತ್ರೆಗೆ ಬ್ರೇಕ್, ಅನುಮತಿ ನೀಡಿದರೆ ಪುರಿ ಜಗನ್ನಾಥ ಕ್ಷಮಿಸಲ್ಲ ಎಂದ ಸುಪ್ರೀಂ ಕೋರ್ಟ್!
ಇದರಿಂದ ಕ್ರುದ್ಧರಾದ ನ್ಯಾ| ಭಟ್, ‘ಕೋರ್ಟ್‌ಗೆ ಈ ರೀತಿ ಹಾಜರಾಗುವುದು ಸೂಕ್ತವಲ್ಲ. ಕನಿಷ್ಠ ಸಂಹಿತೆಯನ್ನು ಪಾಲಿಸಬೇಕು. ಈ ರೀತಿಯ ವಸ್ತ್ರಧಾರಣೆಯನ್ನು ಖಾಸಗಿಯಾಗಿ ಸಹಿಸಿಕೊಳ್ಳಬಹುದು. ಆದರೆ ಇಲ್ಲಿ ಸಹಿಸಿಕೊಳ್ಳಲಾಗದು’ ಎಂದರು.
ಬಳಿಕ ತಪ್ಪಿನ ಅರಿವಾಗಿ ವಕೀಲರು ಕ್ಷಮೆ ಕೋರಿದರು. ಇದನ್ನು ನ್ಯಾ| ಭಟ್ ಒಪ್ಪಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ