ದೇಗುಲ ಸ್ವಚ್ಛಗೊಳಿಸಿದ ಪವನ್‌ ಕಲ್ಯಾಣ್‌- ಇತ್ತ ಕ್ಷಮೆ ಯಾಚಿಸಿದ ನಟ ಕಾರ್ತಿ

By Kannadaprabha News  |  First Published Sep 25, 2024, 7:56 AM IST

11 ದಿನದ ಉಪವಾಸ ವ್ರತದಲ್ಲಿರುವ ಪವನ್ ಕಲ್ಯಾಣ್ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಇತ್ತ ತಮಿಳು ನಟ ಕಾರ್ತಿ ಕ್ಷಮೆ ಕೇಳಿದ್ದಾರೆ.


ವಿಜಯವಾಡ: ತಿರುಪತಿ ಲಡ್ಡು ಪ್ರಸಾದದ ಕಲಬೆರೆಕೆ ವಿವಾದದ ಬಳಿಕ ಶುದ್ಧೀಕರಣಕ್ಕಾಗಿ 11 ದಿನಗಳ ಉಪವಾಸ ವ್ರತ ಕೈಗೊಂಡಿರುವ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮಂಗಳವಾರ ವಿಜಯವಾಡದಲ್ಲಿರುವ ಕನಕ ದುರ್ಗಾ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.

ಬಳಿಕ ಮಾತನಾಡಿದ ಜನಸೇನಾ ಪಕ್ಷದ ಮುಖ್ಯಸ್ಥ, ‘ನಾನು ಸನಾತನ ಧರ್ಮವನ್ನು ಬಲವಾಗಿ ಪಾಲಿಸುತ್ತೇನೆ. ನಾವು ರಾಮಭಕ್ತರು, ನಮ್ಮ ಮನೆಯಲ್ಲಿ ರಾಮ ಜಪ ಮಾಡುತ್ತೇವೆ. ಭಾರತವು, ಮುಸ್ಲಿಂ, ಕ್ರೈಸ್ತ, ಝರತುಷ್ಟ್ರ ಸೇರಿದಂತೆ ಎಲ್ಲ ಧರ್ಮದವರಿಗೆ ಅವಕಾಶಗಳನ್ನು ನೀಡಿದೆ. ಜಾತ್ಯತೀತತೆ ಎನ್ನುವುದು ಒಂದು ಮಾರ್ಗವಾಗಬಾರದು. ಎಲ್ಲ ನಂಬಿಕೆಗಳಿಗೆ ಅವಕಾಶ ನೀಡುವ ದ್ವಿಮುಖ ಮಾರ್ಗವಾಗಿರಬೇಕು’ ಎಂದರು.

Tap to resize

Latest Videos

ಕ್ಷಮೆ ಯಾಚಿಸಿದ ತಮಿಳು ನಟ ಕಾರ್ತಿ

ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಆಂಧ್ರ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ ಅವರಲ್ಲಿ ತಮಿಳು ನಟ ಕಾರ್ತಿ ಅವರು ಕ್ಷಮೆ ಯಾಚಿಸಿದ್ದಾರೆ. ಸಮಾರಂಭವೊಂದರಲ್ಲಿ ತಿರುಪತಿ ಲಾಡು ಬಗ್ಗೆ ಪ್ರಸ್ತಾಪ ಆದಾಗ ಕಾರ್ತಿ ಅವರು ‘ಇಲ್ಲಿ ಆ ಬಗ್ಗೆ ಪ್ರಸ್ತಾಪ ಬೇಡ. ಸೂಕ್ಷ್ಮ ವಿಚಾರದ ಬಗ್ಗೆ ಇಲ್ಲಿ ಚರ್ಚೆ ಬೇಡ’ ಎಂದಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಪವನ್ ಕಲ್ಯಾಣ್, ‘ತಿರುಪತಿ ಬಗ್ಗೆ ಯಾವುದೇ ನಕಾರಾತ್ಮಕ ‌ಹೇಳಿಕೆ ಸಹಿಸಲ್ಲ‌.‌ ಒಂದೋ ನಟರು ಸುಮ್ಮನಿರಬೇಕು. ಇಲ್ಲವೇ ದೇಗುಲವನ್ನು ‌ಬೆಂಬಲಿಸಬೇಕು’ ಎಂದಿದ್ದರು. ಇದರ ಬೆನ್ನಲ್ಲೇ ಪವನ್‌‌ ಕಲ್ಯಾಣ್ ಅವರಲ್ಲಿ ಕಾರ್ತಿ ಕ್ಷಮೆ ಕೋರಿದ್ದಾರೆ.

ನಮಗೆ 4ನೇ ಬಾರಿ ಅಧಿಕಾರ ಅನುಮಾನ: ಗಡ್ಕರಿ ‘ತಮಾಷೆ’!

ಎಲ್ಲಾ ಬಾಣಸಿಗರಿಗೆ ಮಾಸ್ಕ್, ಗ್ಲೌಸ್ ಕಡ್ಡಾಯ

ಉತ್ತರ ಪ್ರದೇಶದಲ್ಲಿನ ಎಲ್ಲ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಬಾಣಸಿಗರು ಮತ್ತು ಸಪ್ಲೈಯರ್‌ಗಳು ಕೆಲಸದ ಅವಧಿಯಲ್ಲಿ ಮಾಸ್ಕ್ ಮತ್ತು ಕೈಗೆ ಗ್ಲೌಸ್‌ ಧರಿಸಬೇಕು’ ಎಂದು ಯೋಗಿ ಆದಿತ್ಯನಾಥ ಸರ್ಕಾರ ಆದೇಶಿಸಿದೆ. ತಿರುಪತಿ ದೇವಸ್ಥಾನದ ಲಡ್ಡು ಕಲಬೆರಕೆ ವಿವಾದ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ.

ಹೊಸ ಸೂಚನೆಯಲ್ಲಿ, ‘ಹೋಟೆಲ್‌ಗಳಲ್ಲಿ ಬಾಣಸಿಗರು ಮತ್ತು ಸಪ್ಲೈಯರ್‌ಗಳು ಕೈಗೆ ಕಡ್ಡಾಯವಾಗಿ ಗ್ಲೌಸ್‌ ಮತ್ತು ಮಾಸ್ಕ್‌ ಧರಿಸಬೇಕು ಹೋಟೆಲ್‌ನಲ್ಲಿ ಸಿಸಿಟೀವಿಗಳನ್ನು ಅಳವಡಿಸಬೇಕು. ಬಾಣಸಿಗರು ಮತ್ತು ಸಪ್ಲೈಯರ್‌ಗಳ ಜೊತೆಗೆ ನಿರ್ವಾಹಕರು, ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಹೆಸರುಗಳನ್ನು ಮತ್ತು ವಿಳಾಸಗಳನ್ನು ಹೋಟೆಲ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದು ಸೂಚಿಸಿದೆ.

ಮಾತಾಡೋ ಮುನ್ನ ಯೋಚಿಸು; ಹಿಂದೂಗಳ ವಿರುದ್ಧ ನಾಲಗೆ ಹರಿಬಿಟ್ಟ ಪ್ರಕಾಶ ರಾಜ್‌ಗೆ ಡಿಸಿಎಂ ಪವನ್ ಕಲ್ಯಾಣ ಎಚ್ಚರಿಕೆ

click me!