ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್‌ಗೆ ಡಾಟಾ ಕ್ವೆಸ್ಟ್ ಐಟಿ ವರ್ಷದ ವ್ಯಕ್ತಿ ಪ್ರಶಸ್ತಿ

By Kannadaprabha News  |  First Published Jan 8, 2025, 9:16 AM IST

ನನಗೆ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಸೈಬರ್‌ಮೀಡಿಯಾ ಗ್ರೂಪ್ ಅಧ್ಯಕ್ಷ ಪ್ರದೀಪ್ ಗುಪ್ತಾ ಮತ್ತು ವಾಯ್ಸ್ ಹಾಗೂ ಡಾಟಾ ಸಂಪಾದಕ ಶುಭೇಂದು ಪಾರ್ಥ್ ಅವರಿಗೆ ಧನ್ಯವಾದಗಳು ಎಂದ ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಐಟಿ ಸಚಿವ ರಾಜೀವ್ ಚಂದ್ರಶೇಖರ್ 
 


ನವದೆಹಲಿ(ಜ.08):  ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಐಟಿ ಸಚಿವ ರಾಜೀವ್ ಚಂದ್ರಶೇಖರ್ ಅವರು ಡಾಟಾಕ್ವೆಸ್ಟ್‌ ನೀಡುವ 'ಐಟಿ ವರ್ಷದ ವ್ಯಕ್ತಿ-2023'ಗೆ ಭಾಜನರಾಗಿದ್ದಾರೆ. 

ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿರುವ ರಾಜೀವ್ ಚಂದ್ರಶೇಖರ್, 'ಐಟಿ ವರ್ಷದ ವ್ಯಕ್ತಿ ಪ್ರಶಸ್ತಿ- 2023'' ಪ್ರಶಸ್ತಿಗಾಗಿ ಡಾಟಾ ಕ್ವೆಸ್‌ಗೆ ಧನ್ಯವಾದಗಳು. ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ನಾನು ತಿರುವಂತಪುರಂನಲ್ಲಿ ನಿರತನಾಗಿದ್ದರಿಂದ ಈ ಮೊದಲು ಅದನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಇಂದು ಭೇಟಿ ಮಾಡಿ ನನಗೆ ಪ್ರಶಸ್ತಿಯನ್ನು ನೀಡಿದ್ದಕ್ಕಾಗಿ ಸೈಬರ್‌ಮೀಡಿಯಾ ಗ್ರೂಪ್ ಅಧ್ಯಕ್ಷ ಪ್ರದೀಪ್ ಗುಪ್ತಾ ಮತ್ತು ವಾಯ್ಸ್ ಹಾಗೂ ಡಾಟಾ ಸಂಪಾದಕ ಶುಭೇಂದು ಪಾರ್ಥ್ ಅವರಿಗೆ ಧನ್ಯವಾದಗಳು' ಎಂದಿದ್ದಾರೆ. 

Tap to resize

Latest Videos

ಹುದ್ದೆ ಇಲ್ಲದಿದ್ದರೂ ದೇಶದ ಬಗ್ಗೆ ಚಿಂತಿಸುತ್ತಿದ್ದ ದಾರ್ಶನಿಕ ಮನಮೋಹನ್ ಸಿಂಗ್: ರಾಜೀವ್ ಚಂದ್ರಶೇಖರ್‌

ಈ ಪ್ರಶಸ್ತಿ ನನಗಿಂತ ಪ್ರಧಾನಿಯವರ ದೂರ ದೃಷ್ಟಿ ಮತ್ತು ಭಾರತದ ಈ ಪ್ರಚಂಡ ಪರಿವರ್ತನೆಯನ್ನು ತಂದ ಪ್ರಧಾನಿ ನರೇಂದ್ರ ಮೋದಿ ಅವರ ಕಠಿಣ ಪರಿಶ್ರಮಕ್ಕೆ ಹೆಚ್ಚು ಸಲ್ಲಬೇಕು. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಈ ಡಿಜಿಟಲ್ ಮತ್ತು ನಾವೀನ್ಯತಾ ಆರ್ಥಿಕತೆಯನ್ನು ನಿರ್ಮಿಸುವಲ್ಲಿ, ಯಶಸ್ವಿ ಯುವ ಭಾರತೀಯರ ಜತೆ ಸಣ್ಣ ಪಾತ್ರ ವಹಿಸಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ' ಎಂದಿದ್ದಾರೆ.

click me!