ಘಜ್ವಾ-ಎ-ಹಿಂದ್ ಫತ್ವಾ ಹೊರಡಿಸಿದ ದಾರುಲ್ ಉಲೂಮ್, ತಾಲಿಬಾನಿಸ್ತಾನ ಒಪ್ಪೋದಿಲ್ಲ ಎಂದ ಬಿಜೆಪಿ!

By Santosh NaikFirst Published Feb 22, 2024, 4:47 PM IST
Highlights

darul uloom deoband fatwa ಸಹರಾನ್‌ಪುರ ಮೂಲದ ದಾರುಲ್ ಉಲುಮ್ ದಿಯೋಬಂದ್ ಘಜ್ವಾ-ಎ-ಹಿಂದ್ (Ghazwa e Hind) ಮಾನ್ಯ ಮಾಡಿ ಫತ್ವಾ ಹೊರಡಿಸಿದೆ. ಇದರ ಬೆನ್ನಲ್ಲಿಯೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಕಳುಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ದಿನೇಶ್ ಚಂದ್ರ ಸಿಂಗ್ ತಿಳಿಸಿದ್ದಾರೆ.

ನವದೆಹಲಿ (ಫೆ.22): ರಾಷ್ಟ್ರರಾಜಧಾನಿ ನವದೆಹಲಿಯಿಂದ ಕೇವಲ 100 ಕಿಲೋಮೀಟರ್‌ ದೂರದಲ್ಲಿರುವ ದಾರುಲ್‌ ಉಲುಮ್‌ ದಿಯೋಬಂದ್‌ ತನ್ನ ವೆಬ್‌ಸೈಟ್‌ನಲ್ಲಿ ಘಜ್ವಾ-ಎ-ಹಿಂದ್ (Ghazwa e Hind) ಅಥವಾ ಭಾರತವನ್ನು ಆಕ್ರಮಿಸಿಕೊಂಡು ಕ್ಯಾಲಿಫೇಟ್ ರಚಿಸುವ ಇಸ್ಲಾಮಿಸ್ಟ್ ಯೋಜನೆಯನ್ನು ಮಾನ್ಯ ಮಾಡುವ ಫತ್ವಾ (ಇಸ್ಲಾಮಿಕ್ ಆಜ್ಲೆ) ಹೊರಡಿಸಿದೆ. "ಭಾರತದ ಆಕ್ರಮಣಕ್ಕಾಗಿ ತ್ಯಾಗ ಮಾಡುವವರನ್ನು ಮಹಾನ್ ಹುತಾತ್ಮರೆಂದು ಪರಿಗಣಿಸಲಾಗುತ್ತದೆ" ಎಂದು ಈ ಫತ್ವಾದಲ್ಲಿ ತಿಳಿಸಲಾಗಿದೆ. ದೆಹಲಿಯಿಂದ ಕೆಲವೇ ಕಿಲೋಮೀಟರ್‌ ದೂರದಲ್ಲಿರುವ ದಿಯೋಬಂದ್‌ನಲ್ಲಿರುವ ದಾರುಲ್‌ ಉಲುಮ್‌ ನೀಡಿರುವ ಈ ಫತ್ವಾದ ಬಗ್ಗೆ ಬಿಜೆಪಿ ಕಿಡಿಕಾರಿದ್ದು, ಭಾರತವನ್ನು ತಾಲಿಬಾನಿಸ್ತಾನ ಮಾಡುವ ಯಾವುದೇ ಪ್ರಯತ್ನವನ್ನು ನಾವು ಒಪ್ಪಿಕೊಳ್ಳೋದಿಲ್ಲ ಎಂದು ಹೇಳಿದೆ. ದಾರುಲ್ ಉಲೂಮ್ ದಿಯೋಬಂದ್, ಭಾರತದಲ್ಲಿನ ಅತಿದೊಡ್ಡ ಇಸ್ಲಾಮಿಕ್ ಸೆಮಿನರಿಯಾಗಿದ್ದು, ಲಕ್ಷಾಂತರ ಮಕ್ಕಳು ಕಲಿಯುವ ದೇಶದಲ್ಲಿ ಹಲವಾರು ಮದರಸಾಗಳನ್ನು ನಡೆಸುತ್ತಿದೆ. ಇಂತಹ ದೇಶದ್ರೋಹಿ ವಿಚಾರಗಳಿಂದ ಮಕ್ಕಳು ಪ್ರಭಾವಿತರಾಗುತ್ತಾರೆ ಎಂದು ಎನ್‌ಸಿಪಿಸಿಆರ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ತಾಲಿಬಾನ್, ಎಲ್ಇಟಿ ಮತ್ತು ಇತರ ಇಸ್ಲಾಮಿ ಭಯೋತ್ಪಾದಕ ಗುಂಪುಗಳು ದಾರುಲ್ ಉಲೂಮ್ ದಿಯೋಬಂದ್‌ನ ಆಲೋಚನೆಗಳಿಂದ ಪ್ರಭಾವಿತವಾಗಿವೆ. ಧಾರ್ಮಿಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ದಾರುಲ್ ಉಲೂಮ್ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ. ದಾರುಲ್ ಉಲೂಮ್ ದಿಯೋಬಂದ್ ಘಜ್ವಾ-ಎ-ಹಿಂದ್ ಫತ್ವಾ ಸುದ್ದಿಯಾದ ಬೆನ್ನಲ್ಲಿಯೇ ಎನ್‌ಸಿಪಿಸಿಆರ್‌ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಸೂಚನೆಗಳನ್ನು ಸ್ವೀಕರಿಸಿದ ಬೆನ್ನಲ್ಲಿಯೇ< ಸಹರಾನ್‌ಪುರದ ಜಿಲ್ಲಾ ಅಧಿಕಾರಿ ಎಸ್‌ಡಿಎಂ ಮತ್ತು ಎಸ್‌ಐಒ ದೇವಬಂದ್‌ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು, ನಂತರ ಅಧಿಕಾರಿಗಳು ಸ್ಥಳಕ್ಕೆ ತಲುಪಿದರು.

ಎನ್‌ಸಿಪಿಸಿಆರ್‌ನಿಂದ ಸೂಚನೆಗಳು ಬಂದಿದ್ದು, ನಂತರ ಈ ಬಗ್ಗೆ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿನೇಶ್ ಚಂದ್ರ ಸಿಂಗ್ ತಿಳಿಸಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ದೇವಬಂದ್ ಸಿಒ ಎಸ್‌ಡಿಎಂಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಇದು ಮಕ್ಕಳ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಎನ್‌ಸಿಪಿಸಿಆರ್ ಹೇಳಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕ್ರಮಕ್ಕೆ ಪತ್ರ ಕಳುಹಿಸಲಾಗಿದ್ದು, ಅದನ್ನು ಸ್ವೀಕರಿಸಿ ಕ್ರಮಕ್ಕೆ ಆದೇಶಿಸಲಾಗಿದೆ. 

ಬೆಚ್ಚಿ ಬೀಳಿಸುತ್ತೆ ಇಂಡಿಯಾ 2047 ಪುಸ್ತಕ: ಮಲೆನಾಡ ಮಡಿಲಲ್ಲಿ ತಣ್ಣಗೆ ಫ್ರಿಬ್ಲಾಸ್ಟ್

ತಾಲಿಬಾನಿಸ್ತಾನ ಒಪ್ಪೋದಿಲ್ಲ ಎಂದ ಬಿಜೆಪಿ:  ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರೇಮ್ ಶುಕ್ಲಾ, ಘಜ್ವಾ-ಎ-ಹಿಂದ್ ಅನ್ನು ಅನುಮೋದಿಸುವ ದಾರುಲ್ ಉಲೂಮ್‌ನ ಫತ್ವಾ ಸಂವಿಧಾನ ವಿರೋಧಿ ಮತ್ತು ಪಾಕಿಸ್ತಾನದ ಪರವಾಗಿದೆ ಎಂದು ಹೇಳಿದ್ದಾರೆ. "ದಾರುಲ್ ಉಲೂಮ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ಭಾರತದ ಸಂವಿಧಾನದಲ್ಲಿ ನಂಬಿಕೆ ಹೊಂದಿಲ್ಲ ಎಂದು ಇದು ಸ್ಪಷ್ಟವಾಗಿ ಸೂಚಿಸುತ್ತದೆ" ಎಂದು ಪ್ರೇಮ್ ಶುಕ್ಲಾ ಹೇಳಿದ್ದಾರೆ.  ದಾರುಲ್ ಉಲೂಮ್ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.  ದಾರುಲ್ ಉಲೂಮ್, ದಿಯೋಬಂದ್‌ ಮದ್ರಸಾದಲ್ಲಿ ಮಕ್ಕಳಿಗೆ ಭಾರತ ವಿರೋಧಿ ಬೋಧನೆಗಳನ್ನು ನೀಡುತ್ತಿದೆ, ಇಸ್ಲಾಮಿಕ್ ಮೂಲಭೂತವಾದವನ್ನು ಉತ್ತೇಜಿಸುತ್ತಿದೆ ಎಂದು NCPCR ಹೇಳಿದೆ. ಆಯೋಗವು ಇದನ್ನು ಬಾಲಾಪರಾಧಿ ಕಾಯ್ದೆಯ ಸೆಕ್ಷನ್ 75 ರ ಉಲ್ಲಂಘನೆ ಎಂದು ಘೋಷಿಸಿದೆ.

Ghazwa-e-Hind: 2047ರ ಕನಸಿಗೆ ಕೊಳ್ಳಿ ಇಟ್ಟರಾ ಮೋದಿ-ಶಾ?

click me!