ಮನೆ ಮುಂದೆ ಬಿಚ್ಚಿಟ್ಟ ಲಕ್ಸುರಿ ಶೂಗಳೇ ಟಾರ್ಗೆಟ್: ನೈಟಿ ಧರಿಸಿ ಬರೋ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

Published : Feb 22, 2024, 03:33 PM IST
ಮನೆ ಮುಂದೆ ಬಿಚ್ಚಿಟ್ಟ ಲಕ್ಸುರಿ ಶೂಗಳೇ ಟಾರ್ಗೆಟ್:  ನೈಟಿ ಧರಿಸಿ ಬರೋ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಸಾರಾಂಶ

ಕಳ್ಳನೋರ್ವ ನೈಟಿ ಧರಿಸಿ ಶೂ ಕಳ್ಳತನ ಮಾಡುತ್ತಿರುವ ದೃಶ್ಯ ಬೆಂಗಳೂರಿನಲ್ಲಿ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮಹಿಳೆಯರು ಬಳಸುವ ನೈಟಿ ಧರಿಸಿ ಬರುವ ಕಳ್ಳ ಮೆಲ್ಲನೇ ಕಾಂಪೌಂಡ್ ಗೇಟ್ ಹಾರಿ ಮನೆಯ ಆವರಣ ಪ್ರವೇಶಿಸಿದ್ದಾನೆ. ಬಳಿಕ ಮನೆ ಮುಂದೆ ಬಿಚ್ಚಿಟ್ಟ ಶೂ ಕದ್ದು ಬಂದಷ್ಟೇ ವೇಗವಾಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.

ಬೆಂಗಳೂರು: ಕಳ್ಳನೋರ್ವ ನೈಟಿ ಧರಿಸಿ ಶೂ ಕಳ್ಳತನ ಮಾಡುತ್ತಿರುವ ದೃಶ್ಯ ಬೆಂಗಳೂರಿನಲ್ಲಿ ನಡೆದಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಮಹಿಳೆಯರು ಬಳಸುವ ನೈಟಿ ಧರಿಸಿ ಬರುವ ಕಳ್ಳ ಮೆಲ್ಲನೇ ಕಾಂಪೌಂಡ್ ಗೇಟ್ ಹಾರಿ ಮನೆಯ ಆವರಣ ಪ್ರವೇಶಿಸಿದ್ದಾನೆ. ಬಳಿಕ ಮನೆ ಮುಂದೆ ಬಿಚ್ಚಿಟ್ಟ ಶೂ ಕದ್ದು ಬಂದಷ್ಟೇ ವೇಗವಾಗಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಮನೆ ಮುಂದೆ ಅಳವಡಿಸಿದ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆ ಆಗಿದೆ.  

ಅನಿಲ್ ಕುಮಾರ್ ಎಂಬುವವರು ಈ ಸಿಸಿಟಿವಿ ದೃಶ್ಯಾವಳಿಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಬೆಂಗಳೂರು ಪೊಲೀಸರು ಕೂಡ ಪ್ರತಿಕ್ರಿಯಿಸಿದ್ದು, ಈ ಘಟನೆ ನಡೆದ ಸ್ಥಳದ ನಿಖರವಾದ ಲೋಕೇಷನ್ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಕಳ್ಳನ ಕೈ ಚಳಕದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

37 ಹಾಗೂ 27 ಸೆಕೆಂಡ್‌ಗಳ ಎರಡು ವೀಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು,  ಮೊದಲ ವೀಡಿಯೋದಲ್ಲಿ ತಲೆಗೆ ಬಟ್ಟೆ ಕವರ್ ಮಾಡಿಕೊಂಡು ನೈಟಿ ಧರಿಸಿರುವ ಕಳ್ಳ ಮನೆಯ ಕಾಂಪೌಂಡ್ ಹತ್ತಿ ಕೆಳಗೆ ರಸ್ತೆಗೆ ಹಾರುತ್ತಾನೆ. ಬಳಿಕ ರಸ್ತೆಯಲ್ಲಿ ಉದ್ದಕ್ಕೆ ನಡೆದುಕೊಂಡು ಹೋಗಿ ಇನ್ನೂ ಸ್ವಲ್ಪ ದೂರದಲ್ಲಿ ಇರುವ ಮತ್ತೊಂದು ಪಕ್ಕದ ಮನೆಯ ಕಾಂಪೌಂಡ್‌ನತ್ತ ಹೋಗುವುದನ್ನು ಕಾಣಬಹುದು. ಹಾಗೆಯೇ ಮತ್ತೊಂದು ವೀಡಿಯೋದಲ್ಲಿ ಸಿಸಿಟಿವಿ ಇರುವುದನ್ನು ಮೊದಲೇ ಗಮನಿಸಿದ ಈ ಕಳ್ಳ ತಲೆಗೆ ಸುತ್ತಿದ್ದ ಬಟ್ಟೆಯಿಂದ ಮುಖವನ್ನು ಮುಚ್ಚಿ ಹೆಗಲಿನಲ್ಲಿ ಏನೋ ತುಂಬಿರುವ ಚೀಲವನ್ನು ನೇತಾಡಿಸಿಕೊಂಡು ಕಟ್ಟಡದ ಮೆಟ್ಟಿಲುಗಳನ್ನು ಏರುವುದನ್ನು ಕಾಣಬಹುದು. 

ಆದರೆ ಬೆಂಗಳೂರಿನ ಯಾವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂಬುದರ ಉಲ್ಲೇಖವಿಲ್ಲ, ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸರು ಈ ಘಟನೆ ನಡೆದ ಪ್ರದೇಶದ ವಿವರ ನೀಡುವಂತೆ ವೀಡಿಯೋ ಪೋಸ್ಟ್ ಮಾಡಿದ ಅನಿಲ್ ಬಳಿ ಕೇಳಿದ್ದಾರೆ. ನೈಟಿ ಧರಿಸಿ ಕಳ್ಳತನದಲ್ಲಿ ತೊಡಗಿರುವ ಈ ಕಳ್ಳನ ಕೈ ಚಳಕ ಸೆರೆ ಆಗಿರುವ ಈ  ವೀಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ
Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್