ಸ್ವಿಗ್ಗಿಯಲ್ಲಿ ಸಿಕ್ತು ಅಪ್ಪನಿಗೆ ಕೆಲಸ: ಮಗಳ ಸಂಭ್ರಮ ನೋಡಿ... ವಿಡಿಯೋ ವೈರಲ್

By Anusha Kb  |  First Published Oct 20, 2022, 1:15 PM IST

ಪುಟಾಣಿ ಬಾಲಕಿ ಅಪ್ಪನಿಗೆ ಕೆಲಸ ಸಿಕ್ಕಿತ್ತು ಎಂದು ಖುಷಿಯಿಂದ ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 


ಬೆಂಗಳೂರು: ಅಪ್ಪ ಹಾಗೂ ಮಗಳ ನಡುವಿನ ಸಂಬಂಧವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಮಗನಿಗಿಂತ ಮಗಳೆಂದರೆ ತುಸು ಹೆಚ್ಚೇ ಪ್ರೀತಿ ತೋರುವ ಅಪ್ಪ, ಮಗಳ ಪಾಲಿನ ದೊಡ್ಡ ಹಾಗೂ ಮೊದಲ ಹೀರೋ. ಮಕ್ಕಳಿಗಾಗಿ ಅಪ್ಪ ಮಾಡುವ ತ್ಯಾಗವನ್ನು ತಮಗೆ ನೀಡಿದ ಬೆಂಬಲವನ್ನು ಅನೇಕ ಹೆಣ್ಣು ಮಕ್ಕಳು ಈಗಾಗಲೇ ಹಲವು ವೇದಿಕೆಗಳಲ್ಲಿ ಹೇಳಿಕೊಂಡಿದ್ದಿದೆ. ಅದೇ ರೀತಿ ಇಲ್ಲೊಂದು ಪುಟಾಣಿ ಬಾಲಕಿ ಅಪ್ಪನಿಗೆ ಕೆಲಸ ಸಿಕ್ಕಿತ್ತು ಎಂದು ಖುಷಿಯಿಂದ ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಇನ್ಸ್ಟಾಗ್ರಾಮ್‌ನಲ್ಲಿ (Instagram) ಈ ವಿಡಿಯೋವನ್ನು ಪೂಜಾ ಅವಂತಿಕಾ (Puja Avanthika) ಎಂಬುವವರು ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಕಾಣಿಸುವಂತೆ ಪುಟ್ಟ ಶಾಲಾ ಸಮವಸ್ತ್ರದಲ್ಲಿರುವ ಬಾಲಕಿಯೊಬ್ಬಳು ತನ್ನ ಕೈಗಳಿಂದ ಕಣ್ಣುಗಳನ್ನು ಮುಚ್ಚಿ ನಿಂತಿರುತ್ತಾಳೆ. ಆಕೆಯ ಮುಂದೆ ಆಕೆಯ ತಂದೆ (Father) ಸ್ವಿಗ್ಗಿಯ (Swiggy) ಟೀಶರ್ಟ್‌ ಒಂದನ್ನು ಹಿಡಿದು ನಿಂತುಕೊಂಡಿರುತ್ತಾರೆ. ಆಕೆಗೆ ಕಣ್ಣು ತೆರೆಯುವಂತೆ ಹೇಳಿದ್ದು, ಮುಚ್ಚಿದ ಕಣ್ಣುಗಳನ್ನು ತೆರೆದ ಈಕೆ ಫುಲ್ ಖುಷಿಯಾಗಿ ಅಪ್ಪನನ್ನು ಬಾಚಿ ತಬ್ಬಿಕೊಳ್ಳುತ್ತಾಳೆ. ಅಪ್ಪನಿಗೆ ಕೆಲಸ ಸಿಕ್ಕಿರುವುದಕ್ಕೆ ಮಗಳ (Daughter) ಖುಷಿಗೆ ಅನೇಕರು ಭಾವುಕರಾಗಿದ್ದಾರೆ.

 
 
 
 
 
 
 
 
 
 
 
 
 
 
 

Tap to resize

Latest Videos

A post shared by pooja avantika (@pooja.avantika.1987)

 

ಅಪ್ಪನ ಹೊಸ ಕೆಲ ಎಂದು ಬರೆದು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿತ್ತು. ಈ ವಿಡಿಯೋಗೆ ಸ್ವಿಗ್ಗಿ ಕೂಡ ಪ್ರತಿಕ್ರಿಯಿಸಿದೆ. ವಿಡಿಯೋ ತುಂಬಾ ಮುದ್ದಾಗಿದೆ. ಹೃದಯ ಭಾವುಕವಾಗಿದೆ ಎಂದು ಕಾಮೆಂಟ್ ಮಾಡಿದೆ. ಇದಕ್ಕೆ ಪ್ರತಿಯಾಗಿ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದು, ಸ್ವಿಗ್ಗಿ ಇವರಿಗೆ ಸ್ಯಾಲರಿ ಜಾಸ್ತಿ ಮಾಡಿ ಎಂದು ಹೇಳಿದ್ದಾರೆ. ದೇವತೆಯಂತ (Angel) ಮಗಳನ್ನು ಪಡೆದಿರುವ ನೀವು ಅದೃಷ್ಟವಂತರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಅನೇಕರು ಶುಭ ಹಾರೈಸಿ ಕಾಮೆಂಟ್ ಮಾಡಿದ್ದಾರೆ. 

ಆಹಾರ ಹಿಡಿದು ಲೇಟ್ ಆಗಿ ಬಂದ ಸ್ವಿಗ್ಗಿ ಬಾಯ್: ಅಸಮಾಧಾನದಿಂದ ಬಾಗಿಲು ತೆಗೆದವನಿಗೆ ಶಾಕ್‌

ತಂದೆ ತಾಯಿ ತಮ್ಮ ಮಕ್ಕಳ ಬೆಳವಣಿಗೆ, ಅವರ ಕನಸುಗಳನ್ನು ಪೂರೈಸುವ ಸಲುವಾಗಿ ತಮ್ಮ ಕನಸುಗಳನ್ನು ಬಲಿ ಕೊಡುತ್ತಾರೆ. ಮಕ್ಕಳ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಸಲುವಾಗಿ ಸಾಕಷ್ಟು ಶ್ರಮ ಪಡುತ್ತಾರೆ. ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಪೂರ್ಣಗೊಳಿಸಲು ನೋಡುತ್ತಾರೆ. 

ಯುವತಿಗೆ ಮಿಸ್‌ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಪ್ಲೇ ಮಾಡಿದ ಸ್ವಿಗ್ಗಿ

ಮದುವೆಯಾಗಿ ಮಕ್ಕಳಿರುವ ಮನೆಯ ಗಂಡಸಿಗೆ ಕೆಲಸವಿಲ್ಲದೇ ಇದ್ದರೆ ಆ ಮನೆಯ ಆರ್ಥಿಕ ಸ್ಥಿತಿ ಬಹಳ ದುಸ್ತರವಾಗಿರುತ್ತದೆ. ಒಂದು ವೇಳೆ ಪತ್ನಿಯೂ ದುಡಿಯುವವಳಾದರೆ ಅದ್ಹೇಗೋ ಕಷ್ಟ ಸುಖ ಸರಿ ತೂಗಿಸಬಹುದು. ಆದರೆ ಇಬ್ಬರಿಗೂ ಕೆಲಸವಿಲ್ಲದಿದ್ದರೆ, ಅದರಲ್ಲೂ ಮಹಾನಗರಿಗಳಲ್ಲಿ ವಾಸ ಮಾಡುತ್ತಿದ್ದರೆ ಆ ಕಷ್ಟವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಹೀಗಾಗಿಯೇ ಈ ತಂದೆ ಮಗಳ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. 

click me!