ಮುಂಬೈ(ಮೇ.16): ಭಾರತ ಹವಾಮಾನ ಇಲಾಖೆಯ (ಐಎಂಡಿ) ಎಚ್ಚರಿಕೆ ಹಿನ್ನೆಲೆಯಲ್ಲಿ ಮುಂಬೈನ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಕೆಲಸ ಮಾಡಿದೆ. 580 ರೋಗಿಗಳನ್ನು ಕೋವಿಡ್ -19 ಕೇಂದ್ರದಿಂದ ಸ್ಥಳಾಂತರಿಸುವುದರಿಂದ ಹಿಡಿದು ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಸ್ಥಗಿತಗೊಳಿಸುವ ಸಾಧ್ಯತೆಯ ಬಗ್ಗೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ.
ತೌಕ್ಟೇ ಚಂಡಮಾರುತವು ಮುಂಬೈ ಮೂಲಕ ಹಾದುಹೋಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬಿಎಂಸಿ ಬಿಕೆಸಿ (243), ದಹಿಸರ್ (183) ಮತ್ತು ಮುಲುಂಡ್ (154) ಜಂಬೊ ಕೋವಿಡ್ -19 ಕೇಂದ್ರಗಳಿಂದ 580 ರೋಗಿಗಳನ್ನು ಮುಂಬೈನ ರಾಜ್ಯ ಮತ್ತು ನಾಗರಿಕ ಆಸ್ಪತ್ರೆಗಳಿಗೆ ಸ್ಥಳಾಂತರಿಸಿದೆ.
undefined
ಕೊರೋನಾ ಚಿಕಿತ್ಸೆ, ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರ ಹೇಳಿದ್ದಿಷ್ಟು
ಹಾಸಿಗೆಗಳು ಮತ್ತು ಆಮ್ಲಜನಕದ ಸಾಧನಗಳ ಲಭ್ಯತೆಯ ಬಗ್ಗೆ ಗೊಂದಲವನ್ನು ತಪ್ಪಿಸಲು ನಾಗರಿಕ ಸಂಸ್ಥೆ ಶುಕ್ರವಾರವೇ ಆಸ್ಪತ್ರೆಗಳನ್ನು ಎಚ್ಚರಿಸಿದೆ. ಭಾನುವಾರ ಮತ್ತು ಸೋಮವಾರ ಭಾರಿ ಮಳೆ ಮತ್ತು ಬಿರುಸು ಗಾಳಿಯ ನಿರೀಕ್ಷೆಯಿರುವುದರಿಂದ ಮುಂಬೈ ಪೊಲೀಸರು ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಸ್ಥಗಿತಗೊಳಿಸುವ ಆಯ್ಕೆಯನ್ನು ನೋಡಿದ್ದಾರೆ.
ಪರಿಸ್ಥಿತಿಗೆ ಅನುಗುಣವಾಗಿ, ಐಎಮ್‌ಡಿಯ ಸೂಚನೆ ಅನುಸರಿಸಿ, ಭಾನುವಾರ ಬಾಂದ್ರಾ-ವರ್ಲಿ ಸೀ ಲಿಂಕ್‌ನಲ್ಲಿ ಸಂಚಾರವನ್ನು ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.