
ನವದೆಹಲಿ/ಅಹಮದಾಬಾದ್(ಸೆ.30): ಒಡಿಶಾ(Odisha) ಮತ್ತು ಆಂಧ್ರಪ್ರದೇಶ(Andhra Pradesh) ರಾಜ್ಯಗಳನ್ನು ಬಾಧಿಸಿರುವ ಗುಲಾಬ್ ಚಂಡಮಾರುತವು(Gulab Cyclone) ಸೆ.30ರಂದು ಅರಬ್ಬೀ ಸಮುದ್ರವನ್ನು ಪ್ರವೇಶಿಸಲಿದ್ದು, ಆ ಬಳಿಕ ಪ್ರಬಲ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ.
ಈ ಚಂಡಮಾರುತಕ್ಕೆ ಶಹೀನ್(Cyclone Shaheen) ಎಂದು ಹೆಸರಿಡಲಾಗಿದ್ದು, ಅದು ಗುಜರಾತ್ ಕರಾವಳಿಯಯಿಂದ ಪಾಕಿಸ್ತಾನದತ್ತ ಚಲಿಸಲಿದೆ. ಹೀಗಾಗಿ ಭಾರತದಲ್ಲಿ ಹೊಸ ಚಂಡಮಾರುತದಿಂದ ಯಾವುದೇ ಅಪಾಯ ಇಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಬುಧವಾರ ಹೇಳಿದೆ.
ಪಶ್ಚಿಮ-ವಾಯುವ್ಯ ದಿಕ್ಕಿನೆಡೆಗೆ ಚಲಿಸಬಹುದಾದ ಗುಲಾಬ್ ಈಶಾನ್ಯ ಅರಬ್ಬೀ ಸಮುದ್ರದಲ್ಲಿ ದುರ್ಬಲಗೊಳ್ಳಲಿದೆ. ಆದರೆ ಮುಂದಿನ 24 ಗಂಟೆಗಳಲ್ಲಿ ಅರಬ್ಬೀ ಸಮುದ್ರದಲ್ಲಿ ಪ್ರಬಲ ಚಂಡಮಾರುತವಾಗಿ ರೂಪುಗೊಂಡು ಪಶ್ಚಿಮ-ವಾಯುವ್ಯ ದಿಕ್ಕಿನೆಡೆಗೆ ಅಂದರೆ ಪಾಕಿಸ್ತಾನದ ಮ್ಯಾಕ್ರಾನ್ ಕರಾವಳಿಗಳತ್ತ ತೆರಳಲಿದೆ ಎಂದು ಐಎಂಡಿ(IMD) ಹೇಳಿದೆ.
ಇದಕ್ಕೂ ಮುನ್ನ ಈ ಚಂಡಮಾರುತವು ಭಾರತದ ಗುಜರಾತ್ ಪ್ರಾಂತ್ಯ, ದೀಯು-ದಮನ್ ಮತ್ತು ನಗರಹವೇಲಿ, ಉತ್ತರ ಕೊಂಕಣ್ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಸುವ ಸಾಧ್ಯತೆಯಿದೆ.
ಎಚ್ಚರಿಕೆ: ಶಹೀನ್ ಚಂಡಮಾರುತದಿಂದ ಗುಜರಾತ್‌ನ ಕಡಿಮೆ ಒತ್ತಡದ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಅ.2ರವರೆಗೆ ಮೀನುಗಾರರು ಅರಬ್ಬೀ ಸಮುದ್ರಕ್ಕೆ ಇಳಿಯದಂತೆ ಮತ್ತು ಅಲ್ಲಿಯವರೆಗೆ ಮೀನುಗಾರಿಕೆ ಚಟುವಟಿಕೆಗಳನ್ನು ಕೈಬಿಡುವಂತೆ ಐಎಂಡಿ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ