ಇಂದು ತಮಿಳ್ನಾಡಿನ ಮೇಲೆ ದಿತ್ವಾ ದಾಳಿ : ಕರ್ನಾಟಕದಲ್ಲಿ ಗುಡುಗು ಸಹಿತ ಮಳೆ

Kannadaprabha News   | Kannada Prabha
Published : Nov 30, 2025, 07:12 AM IST
IMD Rain Alert

ಸಾರಾಂಶ

ಶ್ರೀಲಂಕಾದಲ್ಲಿ 151 ಮಂದಿ ಬಲಿಪಡೆದು, ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿರುವ ದಿತ್ವಾ ಚಂಡಮಾರುತ ಭಾನುವಾರ ಮುಂಜಾನೆ ಸುಮಾರಿಗೆ ತಮಿಳುನಾಡು-ಆಂಧ್ರ ಕರಾವಳಿ ಪ್ರವೇಶಿಸಲಿದೆ.

ಚೆನ್ನೈ: ಶ್ರೀಲಂಕಾದಲ್ಲಿ 151 ಮಂದಿ ಬಲಿಪಡೆದು, ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿರುವ ದಿತ್ವಾ ಚಂಡಮಾರುತ ಭಾನುವಾರ ಮುಂಜಾನೆ ಸುಮಾರಿಗೆ ತಮಿಳುನಾಡು-ಆಂಧ್ರ ಕರಾವಳಿ ಪ್ರವೇಶಿಸಲಿದೆ.

ಶ್ರೀಲಂಕಾವನ್ನು ದಾಟಿ ಬಂದ ಈ ಚಂಡಮಾರುತ ತನ್ನ ವೇಗಕಳೆದುಕೊಂಡಿದ್ದರೂ ತಮಿಳುನಾಡು, ಆಂಧ್ರ, ಪುದುಚೇರಿಯಲ್ಲಿ ಶನಿವಾರದಿಂದಲೇ ಭಾರೀ ಮಳೆ ಆರಂಭವಾಗಿದ್ದು, ಚೆನ್ನೈ ಏರೋರ್ಟ್‌ನಲ್ಲಿ ಹಲವು ವಿಮಾನಗಳ ಸಂಚಾರ ರದ್ದಾಗಿದೆ.

ಚೆನ್ನೈನಿಂದ ಬೆಂಗಳೂರು ಸೇರಿ ವಿವಿಧೆಡೆ ಸಂಚರಿಸುವ 54 ವಿಮಾನಗಳ ಸಂಚಾರ ಶನಿವಾರ ರದ್ದಾಗಿದ್ದು, ಪುದುಚೇರಿ ಮತ್ತು ತಮಿಳುನಾಡಿನ ಹಲವೆಡೆ ಶಾಲೆಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ. ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ರೈಲ್ವೆಯು ಹಲವು ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ ಮಾಡಿದೆ.

ಡಿ.3ರ ವರೆಗೆ ಭಾರೀ ಮಳೆ ಸಾಧ್ಯತೆ:

ದಿತ್ವಾ ಚಂಡಮಾರುತದ ಪರಿಣಾಮ ತಮಿಳುನಾಡು, ಆಂಧ್ರ, ಪುದುಚೇರಿಯಲ್ಲಿ ಡಿ.3ರ ವರೆಗೆ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ನೆರೆಯ ಕೇರಳ ಮತ್ತು ಕರ್ನಾಟಕದ ಮೇಲೂ ಇದರ ಪರಿಣಾಮ ಬೀರಲಿದೆ. ಕರ್ನಾಟಕ ಮತ್ತು ಕೇರಳದ ಕೆಲವೆಡೆಯೂ ಗುಡುಗು ಸಹಿತ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಿತ್ವಾ ಚಂಡಮಾರುತ ಅಬ್ಬರಕ್ಕೆ ಶ್ರೀಲಂಕಾದಲ್ಲಿ 123 ಮಂದಿ ಬಲಿ

ಕೊಲೊಂಬೋ: ದ್ವೀಪರಾಷ್ಟ್ರ ಶ್ರೀಲಂಕಾಗೆ ಅಪ್ಪಳಿಸಿರುವ ದಿತ್ವಾ ಚಂಡಮಾರುತದಲ್ಲಿ ಮೃತರ ಸಂಖ್ಯೆ 123 ದಾಟಿದ್ದು, ದೇಶದಲ್ಲಿ ಭಾರೀ ಆಸ್ತಿ-ಪಾಸ್ತಿ ಹಾನಿಯಾಗಿದೆ.

ಚಂಡಮಾರುತದ ಅಬ್ಬರಕ್ಕೆ ಈಗಾಗಲೇ 130 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಸದ್ಯ 50 ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಸರ್ಕಾರಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯಪಡೆದಿದ್ದಾರೆ. ಪರಿಹಾರ ಕಾರ್ಯಾಚರಣೆಗೆ ವೇಗ ನೀಡುವ ಉದ್ದೇಶದಿಂದಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಸದ್ಯ ಶ್ರೀಲಂಕಾವನ್ನು ದಾಟಿ ಸಾಗಿರುವ ಚಂಡಮಾರುತ ಭಾರತದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸುವ ನಿರೀಕ್ಷೆ ಇದೆ. ಇಷ್ಟಾದರೂ ಚಂಡಮಾರುತದ ಪರೋಕ್ಷ ಪರಿಣಾಮವಾಗಿ ಶ್ರೀಲಂಕಾದಲ್ಲಿ ಇನ್ನೂ ಕೆಲ ದಿನ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ಕಳೆದೊಂದು ವಾರದಿಂದ ಶ್ರೀಲಂಕಾದಲ್ಲಿ ಭಾರೀ ಗಾಳಿ, ಮಳೆಯಾಗುತ್ತಿದ್ದು, ಇದರ ಪರಿಣಾಮ ಹಲವು ಪ್ರದೇಶಗಳು ಜಲಾವೃತವಾಗಿವೆ. 1990ರ ಬಳಿಕದ ಶ್ರೀಲಂಕಾದಲ್ಲಿ ಈ ರೀತಿಯ ಪ್ರವಾಹ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಎಂದು ಸ್ಥಳೀಯರು ಹೇಳಿಕೊಂಡಿದ್ದಾರೆ. ಪ್ರವಾಹಪೀಡಿತ ಹಲವು ಪ್ರದೇಶ ತಲುಪುವುದು ಅಸಾಧ್ಯವೆನ್ನುವಂಥ ಸ್ಥಿತಿ ನಿರ್ಮಾಣವಾಗಿದ್ದು, ಕಲಾ ಓಯಾ ಪ್ರದೇಶದಲ್ಲಿ 68 ಮಂದಿ ಇದ್ದ ಬಸ್ಸೊಂದು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದು, ನೌಕಾ ಸೇನೆಯು ಅವರನ್ನು ರಕ್ಷಿಸಿದೆ. ಪ್ರವಾಹದ ನಡುವೆ ಬಸ್‌ ಸಿಕ್ಕಿಹಾಕಿಕೊಂಡಿದ್ದರಿಂದ ಪ್ರಯಾಣಿಕರು 29 ಗಂಟೆಗಳಷ್ಟು ಕಾಲ ಬಸ್‌ನ ಮೇಲೆ ಕೂತು ಜೀವ ಉಳಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ
India Latest News Live: 19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು - ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ