UP Elections: ಸೈಕಲ್ ಹಿಯಾಳಿಸಿ, ದೇಶಕ್ಕೇ ಅವಮಾನ, ಮೋದಿಗೆ ಅಖಿಲೇಶ್ ತಿರುಗೇಟು!

By Suvarna News  |  First Published Feb 21, 2022, 10:50 AM IST

* "ಭಯೋತ್ಪಾದಕರು ಸೈಕಲ್ ಆಯ್ಕೆ ಮಾಡುತ್ತಾರೆ" ಎಂದ ಹೇಳಿಕೆ

* ಸೈಕಲ್ ಹಿಯಾಳಿಸಿ, ದೇಶಕ್ಕೇ ಅವಮಾನ: ಮೋದಿಗೆ ಅಖಿಲೇಶ್ ತಿರುಗೇಟು!

* ಉತ್ತರ ಪ್ರದೇಶ ಚುನವಣಾ ಕಣದಲ್ಲಿ ಚಿಹ್ನೆಗಳ ಭರಾಟೆ


ಲಕ್ನೋ(ಫೆ.21): "ಭಯೋತ್ಪಾದಕರು ಸೈಕಲ್ ಆಯ್ಕೆ ಮಾಡುತ್ತಾರೆ" ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ತಿರುಗೇಟು ನೀಡಿದ್ದಾರೆ. "ಸೈಕಲ್ ಅನ್ನು ಅವಮಾನಿಸುವುದು ಇಡೀ ದೇಶಕ್ಕೆ ಮಾಡಿದ ಅವಮಾನ" ಎಂದು ಹೇಳಿದ್ದಾರೆ. ಪ್ರಧಾನಿಯವರ ದಾಳಿಗೆ ಪ್ರತಿಕ್ರಿಯೆಯಾಗಿ, ಅಖಿಲೇಶ್ ಅವರು ತಮ್ಮ ಪಕ್ಷದ ಚುನಾವಣಾ ಚಿಹ್ನೆಯ ಸೈಕಲ್‌ ಬಗ್ಗೆ ಹಿಂದಿಯಲ್ಲಿ ಕವಿತೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದು ಸಾಮಾನ್ಯ ಮನುಷ್ಯನ ಸವಾರಿ" ಮತ್ತು ಹಳ್ಳಿಗಳ ಹೆಮ್ಮೆ ಎಂದು ವಿವರಿಸಿದ್ದಾರೆ.

ಈ ಬಗ್ಗೆ ಬರೆದಿರುವ ಅಖಿಲೇಶ್ ಯಾದವ್ "ಕೃಷಿ ಮತ್ತು ರೈತನನ್ನು ಸಂಪರ್ಕಿಸುವ ಮೂಲಕ, ಅವನ ಏಳಿಗೆಗೆ ಅಡಿಪಾಯ ಹಾಕುತ್ತದೆ ನಮ್ಮ ಸೈಕಲ್, ಸಾಮಾಜಿಕ ಬಂಧಗಳನ್ನು ಮುರಿದು ಹುಡುಗಿಯನ್ನು ಶಾಲೆಗೆ ಬಿಡುತ್ತದೆ ನಮ್ಮ ಸೈಕಲ್, ಹಣದುಬ್ಬರವು ಅದರ ಮೇಲೆ ಪರಿಣಾಮ ಬೀರುವುದಿಲ್ಲ, ನಾಗಾಲೋಟದಲ್ಲಿ ಓಡುತ್ತದೆ ನಮ್ಮ ಸೈಕಲ್, ಸೈಕಲ್ ಸಾಮಾನ್ಯ ಜನರ ವಿಮಾನ, ಗ್ರಾಮೀಣ ಭಾರತದ ಹೆಮ್ಮೆ, ಸೈಕಲ್ ಅವಮಾನ ಇಡೀ ದೇಶಕ್ಕೆ ಅಪಮಾನ ಎಂದಿದ್ದಾರೆ.

Latest Videos

undefined

ಯುಪಿಯಲ್ಲಿ ಮೂರನೇ ಹಂತದ ಚುನಾವಣೆಯ ದಿನವಾದ ಭಾನುವಾರ (ಫೆಬ್ರವರಿ 20), 2008ರ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಅಪರಾಧಿಗಳಾಗಿರುವ 49 ಜನರನ್ನು ಉಲ್ಲೇಖಿಸಿ ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆಯ ಸೈಕಲ್ ಅನ್ನು ಭಯೋತ್ಪಾದಕರಿಗೆ ಹೋಲಿಸುವ ಮೂಲಕ ಪಿಎಂ ಮೋದಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.

ಹರ್ದೋಯ್‌ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, "ಇಂದು ನಾನು ಇದನ್ನು ಪ್ರಸ್ತಾಪಿಸುತ್ತಿದ್ದೇನೆ ಏಕೆಂದರೆ ಕೆಲವು ರಾಜಕೀಯ ಪಕ್ಷಗಳು ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತೋರುತ್ತಿವೆ. ಎರಡು ರೀತಿಯಲ್ಲಿ ಸ್ಫೋಟಗಳನ್ನು ನಡೆಸಲಾಯಿತು. ಮೊದಲನೆಯದು ನಗರದ 50-60 ಸ್ಥಳಗಳಲ್ಲಿ ಮತ್ತು ನಂತರ ಎರಡು ಗಂಟೆಗಳ ನಂತರ, ಆಸ್ಪತ್ರೆಯಲ್ಲಿ ವಾಹನದಲ್ಲಿ ಸ್ಫೋಟ ಸಂಭವಿಸಿತು, ಅದರಲ್ಲಿ ಸಂಬಂಧಿಕರು, ಅಧಿಕಾರಿಗಳು ಮತ್ತು ರಾಜಕಾರಣಿಗಳು ಗಾಯಗೊಂಡವರನ್ನು ನೋಡಲು ಅಲ್ಲಿಗೆ ಹೋಗುತ್ತಿದ್ದರು. ಆ ಸ್ಫೋಟದಲ್ಲಿ ಅನೇಕ ಜನರು ಸತ್ತರು ಎಂದಿದ್ದಾರೆ.

"ಆರಂಭಿಕ ಸ್ಫೋಟಗಳಲ್ಲಿ, ಬಾಂಬ್‌ಗಳನ್ನು ಸೈಕಲ್‌ಗಳ ಮೇಲೆ ಇರಿಸಲಾಗಿತ್ತು. ಅವರು (ಭಯೋತ್ಪಾದಕರು) ಏಕೆ ಸೈಕಲ್‌ಗಳನ್ನು ಆರಿಸಿಕೊಂಡರು ಎಂದು ನಾನು ಆಶ್ಚರ್ಯ ಪಡುತ್ತೇನೆ?" ಎಂದು ಪ್ರಧಾನಿ ಹೇಳಿದರು. ಅಷ್ಟೇ ಅಲ್ಲ, 2006ರಲ್ಲಿ ವಾರಣಾಸಿ ಮತ್ತು 2007ರಲ್ಲಿ ಅಯೋಧ್ಯೆ ಮತ್ತು ಲಖನೌ ಸ್ಫೋಟದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಸಮಾಜವಾದಿ ಪಕ್ಷ ಹಿಂಪಡೆದಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.

"ಯುಪಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ 14 ಪ್ರಕರಣಗಳಲ್ಲಿ, ಸಮಾಜವಾದಿ ಸರ್ಕಾರವು ಹಲವಾರು ಭಯೋತ್ಪಾದಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಆದೇಶಿಸಿದೆ. ಈ ಜನರು ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಮತ್ತು ಸಮಾಜವಾದಿ ಸರ್ಕಾರವು ಈ ಭಯೋತ್ಪಾದಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಅವಕಾಶ ನೀಡಲಿಲ್ಲ. ಇದು ಅವರಿಗೆ ಸಮಾಜವಾದಿ ಪಕ್ಷದಿಂದ ನೀಡಿದ ರಿಟರ್ನ್ ಗಿಫ್ಟ್ ಎಂದು ಅವರು ಹೇಳಿದ್ದಾರೆ.

ಪಂಕ್ಚರ್‌ ಸೈಕಲ್‌ ಬೇಕೇ? ಬುಲೆಟ್‌ ರೈಲೇ?: ಮತದಾರರಿಗೆ ಯೋಗಿ ಪ್ರಶ್ನೆ

 

ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ‘ನಿಮಗೆ ರಾಜ್ಯದಲ್ಲಿ ಬುಲೆಟ್‌ ಟ್ರೇನ್‌ ಅಭಿವೃದ್ಧಿ ಬೇಕೆ ಅಥವಾ ಪಂಕ್ಚರ್‌ ಆಗಿರುವ ಸೈಕಲ್‌ ಬೇಕೆ? ಎಂಬುದನ್ನು ಆಯ್ಕೆ ಮಾಡಿ ಜನರಿಗೆ ಕರೆ ಕೊಟ್ಟಿದ್ದಾರೆ.

ಸೋಮವಾರ ರಾಯ್‌ಬರೇಲಿಯಲ್ಲಿ ಪಕ್ಷದ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ಯೋಗಿ ‘ಸಮಾಜವಾದಿ, ಬಹುಜನ ಸಮಾಜವಾದಿ ಪಕ್ಷಗಳು ರಾಷ್ಟ್ರ ಹಾಗೂ ಸಮಾಜದ ಭದ್ರತೆಯೊಂದಿಗೆ ಆಟವಾಡುತ್ತಿದ್ದವು. ಕೇಂದ್ರದ ಕಾಶ್ಮೀರ ಸಂಬಂಧಿ ನೀತಿಯನ್ನು ರಾಹುಲ್‌ ಗಾಂಧಿ ಸಂಸತ್ತಿನಲ್ಲಿ ವಿರೋಧಿಸಿದ್ದರು. ದೇಶದ ಹಿತಾಸಕ್ತಿ ವಿರುದ್ಧ ರಾಜಕೀಯ ಮಾಡುವ ಇಂತಹ ಜನರನ್ನು ಬೆಂಬಲಿಸುತ್ತೀರಾ? ಎಂದು ಪ್ಈರಶ್ನಿಸಿದ್ದಾರೆ.

ಅಲ್ಲದೇ ಹಿಂದೆ ಹೋಳಿ, ದೀಪಾವಳಿ ಹಬ್ಬದಂದು ವಿದ್ಯುತ್‌ ಪೂರೈಕೆಯಿರುತ್ತಿರಲಿಲ್ಲ. ಅದೇ ಈದ್‌ ಮೊಹರಮ್‌ ಸಮಯದಲ್ಲಿ ಇರುತ್ತಿತ್ತು ಎಂದು ಕಿಡಿಕಾರಿದ್ದಾರೆ. ಅದೇ ರಾಜ್ಯದಲ್ಲಿ ಯೋಗಿ, ದೇಶದಲ್ಲಿ ಮೋದಿ ಬುಲೆಟ್‌ ಟ್ರೇನ್‌ ಗತಿಯಲ್ಲಿ ಅಭಿವೃದ್ಧಿ ತರುತ್ತಾರೆ’ ಎಂದು ಆಶ್ವಾಸನೆ ನೀಡಿದರು.

click me!