ಒಡತಿಯೊಂದಿಗೆ ವ್ಯಾಯಾಮದ ಜೊತೆ ಡಾನ್ಸ್‌ ಮಾಡುವ ಮುದ್ದು ಶ್ವಾನ

Suvarna News   | Asianet News
Published : Jan 26, 2022, 12:25 PM ISTUpdated : Jan 26, 2022, 12:26 PM IST
ಒಡತಿಯೊಂದಿಗೆ ವ್ಯಾಯಾಮದ ಜೊತೆ ಡಾನ್ಸ್‌  ಮಾಡುವ ಮುದ್ದು ಶ್ವಾನ

ಸಾರಾಂಶ

ಡಾನ್ಸ್‌ ಜೊತೆ ವ್ಯಾಯಾಮ ಮಾಡುವ ಶ್ವಾನ ಮುದ್ದಾದ ವಿಡಿಯೋ ವೈರಲ್‌

ಶ್ವಾನಗಳು ಬುದ್ಧಿವಂತ ಪ್ರಾಣಿಗಳು, ಮನುಷ್ಯರೊಂದಿಗೆ ಅವುಗಳ ಒಡನಾಟ ತುಂಬಾ ಆತ್ಮೀಯವಾದುದು. ನೀವು ಈಗಾಗಲೇ ಶ್ವಾನಗಳ ಅನೇಕ ಮುದ್ದಾದ ವಿಡಿಯೋಗಳನ್ನು ನೋಡಿರಬಹುದು. ಹಾಗೆಯೇ ಇಲ್ಲೊಂದು ಶ್ವಾನ  ತನ್ನ ಮನೆಯ ಒಡತಿಯೊಂದಿಗೆ ಆಟ, ವ್ಯಾಯಾಮದ ಜೊತೆ ಡಾನ್ಸ್‌ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಆಗಿದ್ದು, ನೋಡುಗರ ಕಣ್ಣು ತಂಪು ಮಾಡುವ ಜೊತೆ ಮುಖದಲ್ಲಿ ನಗು ತರಿಸುತ್ತಿದೆ. 

ಈ ವಿಡಿಯೋ ಟ್ರಿಕ್‌ಸ್ಟಾರ್‌ ಎಂಬ ಇನ್ಸ್ಟಾಗ್ರಾಮ್‌ ಖಾತೆಯಿಂದ ಶೇರ್ ಆಗಿದೆ. ಈ ಟ್ರಿಕ್‌ಸ್ಟಾರ್‌ ಬ್ರಿಟನ್‌ನ ಖ್ಯಾತ ರಿಯಾಲಿಟಿ ಶೋ ಬ್ರಿಟನ್‌ ಗಾಟ್‌  ಟಾಲೆಂಟ್‌  ಶೋದಲ್ಲಿ ಫೈನಲ್‌ನಲ್ಲಿದ್ದ ಸ್ಪರ್ಧಿಯೊಬ್ಬರ ಖಾತೆಯಾಗಿದೆ. ಈ ವಿಡಿಯೋದಲ್ಲಿ ಮಹಿಳೆ ಹಾಗೂ ಸಣ್ಣ ಶ್ವಾನವೊಂದಿದ್ದು, ವಿಡಿಯೋ ಮುಂದುವರಿದಂತೆ ಶ್ವಾನವೂ ಮಹಿಳೆಯ ಜೊತೆ ಹಲವು ಸಾಹಸ ಪ್ರದರ್ಶನಗಳನ್ನು ಮಾಡುವುದನ್ನು ಕಾಣಬಹುದು. ಮಹಿಳೆಯ ಕೈಗಳ ಮಧ್ಯೆ ನುಸುಳುವ ನಾಯಿ ಮೇಲೆ ಹಾರಿ ಆಕೆಯ ಬೆನ್ನಿಗೇರಿ ಡಾನ್ಸ್‌ ಮಾಡುತ್ತದೆ. 

 

ಜನವರಿ 12 ರಂದು ಈ ವಿಡಿಯೋ ಪೋಸ್ಟ್‌ ಆಗಿದ್ದು, ಸಾವಿರಾರು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅಲ್ಲದೇ ಶ್ವಾನ ಪ್ರಿಯರು ಇದಕ್ಕೆ ಅನೇಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಡಿಯೋ ನನ್ನನ್ನು ಖುಷಿಗೊಳಿಸಿತು ಎಂಥಹಾ ಸುಂದರವಾದ ವಿಡಿಯೋ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. 

ನಾಯಿಗಳ ಜೊತೆ ಮಕ್ಕಳು ಸೇರಿದಂತೆ ಮನುಷ್ಯರ ಸಂಬಂಧ ತುಂಬಾ ಅವಿನಾಭಾವವಾದುದು. ಅದರಲ್ಲೂ ಮಕ್ಕಳೊಂದಿಗೆ ಕೆಲವು ನಾಯಿಗಳು ಬೆರೆಯುವ ರೀತಿ ನೋಡಿದರೆ ಇದು ಯಾವುದೋ ಜನ್ಮದ ನಂಟೆಂಬಂತೆ ಭಾಸವಾಗುತ್ತದೆ. ಮೂಕ ಜೀವಿಯೊಂದು ಮನುಷ್ಯರೊಂದಿಗೆ ಅಂತಹ ಅನುಬಂಧವನ್ನು ಹೊಂದಿದೆ. ನಾಯಿಗಳು ಮನುಷ್ಯನ ನಡುವಿನ ಈ ಪ್ರೀತಿಯ ಬಗ್ಗೆ ಈಗಾಗಲೇ ಸಾಕಷ್ಟು ಉದಾಹರಣೆಗಳನ್ನು ನೀವು ಕೇಳಿರಬಹುದು. ನಾವೀಗ ಇಲ್ಲಿ ಹೇಳ ಹೊರಟಿರುವುದು ಮಗು ಹಾಗೂ ನಾಯಿಯ ನಡುವಿನ ಜುಗಲ್‌ಬಂಧಿ. ಹೌದು ನಾಯಿಯೊಂದು ಪುಟ್ಟ ಬಾಲಕಿಯೊಂದಿಗೆ ಸಾಹಸ ಮಾಡುವ ದೃಶ್ಯವಿದು. 

ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಮರಿಯನ್ನು ರಕ್ಷಿಸಿದ ಮುದ್ದು ಶ್ವಾನ

ಪುಟ್ಟ ಬಾಲಕಿಯೊಬ್ಬಳು ತನ್ನ ಸಾಕು ನಾಯಿಯೊಂದಿಗೆ ಸಾಹಸ ಪ್ರದರ್ಶಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣ (social Media)ದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು 2 ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 1 ನಿಮಿಷದ ಈ ವೀಡಿಯೊದಲ್ಲಿ, ಚಿಕ್ಕ ಹುಡುಗಿ ತನ್ನ ಸಾಕು ನಾಯಿಯೊಂದಿಗೆ ಕೆಲವು ಅದ್ಭುತ ಸಾಹಸಗಳನ್ನು ಮಾಡುವುದನ್ನು ಕಾಣಬಹುದು. ಬಾಲಕಿಯ ಜೊತೆ ನಾಯಿಯು ಚುರುಕಾಗಿದ್ದು, ಮಗುವೂ ನೀಡುವ ಎಲ್ಲಾ ಸೂಚನೆಗಳನ್ನು ಆಗಲೇ ಗಮನಿಸಿ ಅಳವಡಿಸಿಕೊಳ್ಳುತ್ತದೆ.  ಮತ್ತು ಬಾಲಕಿಯೊಂದಿಗೆ ಒಂದು ಹೆಜ್ಜೆಯೂ ತಪ್ಪಾಗದಂತೆ ಸಾಹಸಗಳನ್ನು ಮಾಡುತ್ತದೆ. ಈ ವಿಡಿಯೋ ನೋಡಿದರೆ ಇಬ್ಬರೂ ಈ ಸಾಹಸಗಳನ್ನು ಅಭ್ಯಾಸ ಮಾಡಲು ಸಾಕಷ್ಟು ಸಮಯವನ್ನು ತೆಗೆದುಕೊಂಡಿರಬಹುದು ಎಂದು ಎನಿಸುತ್ತದೆ. ಶ್ವಾನ(Dog) ಮತ್ತು ಬಾಲಕಿ ಇಬ್ಬರೂ ಈ ವಿಡಿಯೋವನ್ನು ಮತ್ತಷ್ಟು ಅದ್ಭುತವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಣುತ್ತದೆ. 

Pet birthday: ನಾಯಿ ಸಾಕಲು ಬಿಡದ್ದಕ್ಕೆ ಮನೆ ಬಿಟ್ಟು ಬಂದರು..! ಶ್ವಾನದ ಬರ್ತ್‌ಡೇಗೆ ಸ್ಪೆಷಲ್ ಬಿರಿಯಾನಿ

ಇಂಟರ್ನೆಟ್‌(Internet) ಬಳಕೆದಾರರು ಈ ಪುಟ್ಟ ಬಾಲಕಿ ಹಾಗೂ ಆಕೆಯ ಪ್ರೀತಿಯ ನಾಯಿ ಜೊತೆಯಾಗಿ ಮಾಡುತ್ತಿರುವ ಈ ಸಾಹಸಕ್ಕೆ ಭೇಷ್‌ ಎಂದಿದ್ದಾರೆ. ಇದಂತೂ ನಿಜವಾಗಿಯೂ ಮನೋರಂಜನೆ ನೀಡುತ್ತಿದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

15 ವರ್ಷಗಳಿಂದ ನಾಪತ್ತೆ: ವಿಡಿಯೋ ವೈರಲ್ ಬಳಿಕ ಮರಳಿ ಕುಟುಂಬ ಸೇರಿದ ಮಾಜಿ ಯೋಧ
ಪೌರತ್ವ ಸಿಗುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು, ಸೋನಿಯಾ ಗಾಂಧಿಗೆ ನೋಟಿಸ್‌ ಕೊಟ್ಟ ದೆಹಲಿ ಕೋರ್ಟ್!