ಟಿಪ್ಸ್‌ ಹಣದಿಂದಲೇ 10 ಲಕ್ಷದ ಕಾರ್‌ ಖರೀದಿ ಮಾಡಿದ ವ್ಯಕ್ತಿ!

Published : Dec 08, 2025, 04:46 PM IST
Praveen Joshilkar Tips Car

ಸಾರಾಂಶ

ಅಂದಾಜು 10 ಲಕ್ಷ ರೂಪಾಯಿ ಮೌಲ್ಯದ ಕಾರ್‌ಅನ್ನು ಬರೀ ಟಿಪ್ಸ್‌ಗಳಿಂದ ಬಂದ ಹಣದಲ್ಲೇ ಖರೀದಿ ಮಾಡಿದ್ದಾನೆ. ಆತ ಕ್ರೂಸ್‌ ಹಡಗಿನಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ರೀಲ್ಸ್, ಕಂಟೆಂಟ್‌ ಮೂಲಕ ಇತರರರಿಗೆ ಕ್ರೂಸ್‌ ಶಿಪ್‌ನಲ್ಲಿ ಕೆಲಸ ಮಾಡಲು ಪ್ರೇರೇಪಿಸುತ್ತಿದ್ದಾರೆ. 

ನರು ಸೋಶಿಯಲ್‌ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಕಂಟೆಂಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದು ನಿಜವೋ? ಸುಳ್ಳೋ ಅನ್ನೋದನ್ನು ಪರಿಶೀಲಿಸಲು ಕೂಡ ಸಾಧ್ಯವಾಗೋದಿಲ್ಲ. ಅಂಥದ್ದೇ ಒಂದು ವಿಚಾರದಲ್ಲಿ, ಭಾರತೀಯ ವ್ಯಕ್ತಿಯೊಬ್ಬ ಕೆಲಸದ ವೇಳೆ ತನಗೆ ಸಿಕ್ಕ ಟಿಪ್ಸ್‌ ಹಣದ ಮೂಲಕವೇ 10 ಲಕ್ಷ ಮೌಲ್ಯದ ಕಾರ್‌ಅನ್ನು ಖರೀದಿಸಿದ್ದೇನೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಹಂಚಿಕೊಂಡಿದ್ದಾರೆ. ತಾನು ಕ್ರೂಸ್ ಹಡಗಿನಲ್ಲಿ ತಾನು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು, 10 ಲಕ್ಷದ ಮೌಲ್ಯದ ಕಾರ್‌ಅನ್ನು ಖರೀದಿ ಮಾಡಲು ಅತಿಥಿಗಳು ನೀಡಿದ ಟಿಪ್ಸ್‌ ಹಣವನ್ನೇ ಬಳಸಿದ್ದೇನೆ ಎಂದು ತಿಳಿಸಿದ್ದಾನೆ.

ಈ ಕ್ರೂಸ್‌ ಶಿಪ್‌ ವರ್ಕರ್‌ ಹಲವು ಹಡಗುಗಳಲ್ಲಿ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದು, ತಾವು ಕ್ರೂಸ್‌ ಶಿಪ್‌ ವ್ಲಾಗರ್‌ ಕೂಡ ಆಗಿದ್ದಾರೆ. ಕ್ರೂಸ್‌ ಶಿಪ್‌ನಲ್ಲಿ ಕಳೆದ ಕ್ಷಣಗಳನ್ನು ಆಗಾಗ್ಗೆ ಸೆರೆಹಿಡಿದು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಅಂಥ ಒಂದು ವಿಡಿಯೋದಲ್ಲಿ, ತಾವು ಕೆಲಸದ ವೇಳೆ ಅತಿಥಿಗಳಿಂದ ಸಿಕ್ಕ ಟಿಪ್ಸ್‌ನಿಂದ 10 ಲಕ್ಷ ರೂಪಾಯಿ ಮೌಲ್ಯದ ಕಾರ್‌ ಖರೀದಿ ಮಾಡಿರುವುದಾಗಿ ತಿಳಿಸಿಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ನಲ್ಲಿ @pravinjoshilkar_cruisevlogger ಹ್ಯಾಂಡಲ್‌ನಲ್ಲಿ ಚಿತ್ರವನ್ನು ಹಂಚಿಕೊಂಡ ಅವರು, ಕೇವಲ ಟಿಪ್ಸ್‌ ಹಣದಿಂದಲೇ ಕಾರನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಮೂಲಕ, ಕ್ರೂಸ್‌ ಶಿಪ್‌ನಲ್ಲಿ ಪ್ರಯಾಣ ಮಾಡುವ ಯುರೋಪಿಯನ್ ಮತ್ತು ಅಮೇರಿಕನ್ ಅತಿಥಿಗಳಿಗೆ ಧನ್ಯವಾದ ಹೇಳಿದ್ದಾರೆ. ಇವರು ನೀಡಿದ ಟಿಪ್ ಹಣದಿಂದಲೇ ತಾವು ಕಾರ್‌ ಖರೀದಿಸಿರುವುದಾಗಿ ತಿಳಿಸಿದ್ದಾರೆ.

ಪ್ರವೀಣ್ ಜೋಶಿಲ್ಕರ್ ಎಂಬ ಈ ವ್ಯಕ್ತಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, "ನೀವು ಕ್ರೂಸ್ ಹಡಗಿನಲ್ಲಿ ಕೆಲಸ ಮಾಡುವಾಗ, ನಿಮ್ಮ ಟಿಪ್ಸ್‌ ಹಣದಲ್ಲಿಯೇ ನೀವು ಎಲ್ಲವನ್ನೂ ಖರೀದಿಸಬಹುದು'' ಎಂದಿದ್ದಾರೆ. ನನಗೆ ಬರುವ ಎಲ್ಲಾ ಸಂಬಳವನ್ನು ಉಳಿಸುತ್ತೇನೆ ಎಂದು ಹೇಳಿದ್ದು, ಕೇವಲ ಟಿಪ್ಸ್‌ನಿಂದಲೇ ದಿನಗಳನ್ನು ಕಳೆಯುತ್ತಿದ್ದೇನೆ ಎಂದಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ವಿವರ ನೀಡಿರುವ ಪ್ರವೀಣ್‌, ವೇತನ ಅನ್ನೋದು ಭವಿಷ್ಯಕ್ಕಾಗಿ ಸಹೋದರ ಎಂದು ಬರೆದುಕೊಂಡಿದ್ದು, ಹಂಚಿಕೊಂಡಿರುವ ಫೋಟೋದಲ್ಲಿ ಅವರು ತಮ್ಮ ಕಾರ್‌ನ ಜೊತೆಯಲ್ಲಿಯೇ ನಿಂತಿದ್ದಾರೆ.

ಇಟಾಲಿಯನ್‌ ಕ್ರೂಸ್‌ ಶಿಪ್‌ನಲ್ಲಿ ಬಾಣಸಿಗ

ಪ್ರವೀಣ್ ಜೋಶಿಲ್ಕರ್ ಅವರ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಮಾಹಿತಿ ಪ್ರಕಾರ, ಅವರು ಕ್ರೂಸ್‌ ಶಿಪ್‌ನಲ್ಲಿ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದು, ಇಟಾಲಿಯನ್‌ ಕ್ರೂಸ್‌ ಶಿಪ್‌ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮಹಾರಾಷ್ಟ್ರ ಮೂಲದವರಾಗಿದ್ದು, ಹೋಟೆಲ್‌ ಮ್ಯಾನೇಜ್‌ಮೆಂಟ್‌ ಅಧ್ಯಯನ ಮಾಡಿದ್ದಾರೆ. ತನ್ನ ವಿಡಿಯೋ ಹಾಗೂ ರೀಲ್ಸ್‌ಗಳ ಮೂಲಕ ಇತರರಿಗೆ ಕ್ರೂಸ್‌ ಶಿಪ್‌ ಕೆರಿಯರ್‌ಅನ್ನು ಆಯ್ದುಕೊಳ್ಳಲು ಪ್ರೇರಣೆ ನೀಡುತ್ತಿದ್ದಾರೆ.

ಅವರ ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಒಬ್ಬ ವ್ಯಕ್ತಿ, 'ಅಭಿನಂದನೆಗಳು ಸಹೋದರ. ನಿಮ್ಮ ಜೀವನ ಹೀಗೇ ಮುಂದುವರಿಯಲಿ' ಎಂದು ಬರೆದಿದ್ದಾರೆ. ಇನ್ನೊಬ್ಬ 'ಯೂಸರ್‌ ವೆಲ್‌ ಡನ್‌, ಬ್ರದರ್‌' ಎಂದು ಬರೆದಿದ್ದರೆ, ಮತ್ತೊಬ್ಬ ವ್ಯಕ್ತಿ, ಇಂಥ ಕೆಲಸಗಳಿಗೆ ಸೇರಲು ನಾನು ಕೂಡ ಬಯಸುತ್ತೇನೆ' ಎಂದಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್