Terrorists Attack ರಜೆಯಲ್ಲಿ ಮನೆಗೆ ಬಂದ CRPF ಯೋಧನ ಮೇಲೆ ಉಗ್ರರ ದಾಳಿ, ಮುಗಿಲು ಮುಟ್ಟಿದ ಆಕ್ರಂದನ!

By Suvarna NewsFirst Published Mar 12, 2022, 9:40 PM IST
Highlights
  • ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಯೋಧನ ಮೇಲೆ ಉಗ್ರರ ದಾಳಿ
  • ರಜೆಯಲ್ಲಿ ಮನೆಗೆ ಬಂದಿದ್ದ CRPF ಯೋಧ ಮುಕ್ತಾರ್ ಅಹಮ್ಮದ್
  • ತೀವ್ರ ಗಾಯಗೊಂಡ ಯೋಧ, ಆಸ್ಪತ್ರೆ ಸಾಗಿಸುವ ಮಧ್ಯೆ ಹುತಾತ್ಮ

ಶ್ರೀನಗರ(ಮಾ.13): ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗುತ್ತಿದೆ. ಕಳೆದ 3 ದಿನಗಳಲ್ಲಿ ಇದೀಗ 4ನೇ ಬಾರಿ ಉಗ್ರರು ದಾಳಿ ನಡೆಸಿದ್ದಾರೆ. ಶೋಪಿಯಾನ್ ಜಿಲ್ಲೆಯಲ್ಲಿ ರಜೆ ಮೇಲೆ ಮನೆಗೆ ಬಂದಿದ್ದ CRPF ಯೋಧನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಯೋಧ ಮುಕ್ತಾರ್ ಅಹಮ್ಮದ್‌ನ್ನು ಆಸ್ಪತ್ರೆ ಸಾಗಿಸುವ ಮಧ್ಯೆ ಹುತಾತ್ಮರಾಗಿದ್ದಾರೆ.

CRPF ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಮುಕ್ತಾರ್ ಅಹಮ್ಮದ್ ಜಮ್ಮ ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬದಲ್ಲಿನ ಕಾರ್ಯಕ್ರಮ ನಿಮಿತ್ತ ರಜೆ ಮೇಲೆ ಮನೆಗೆ ಆಗಮಿಸಿದ್ದ ಮುಕ್ತಾರ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಆಯುಧ ರಹಿತ ಯೋಧನ ಮೇಲೆ ಗುಂಡು ಹಾರಿಸಿದ ಉಗ್ರರು ತಕ್ಷಣವೇ ಪರಾರಿಯಾಗಿದ್ದಾರೆ. ಇತ್ತ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

Latest Videos

ಕಳೆದ ಮೂರು ದಿನಗಳಲ್ಲಿ ನಾಲ್ಕು ಬಾರಿ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಕಾಶ್ಮೀರದ ಗ್ರಾಮ ಸರಪಂಚ್, ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಶಬ್ಬೀರ್ ಅಹಮ್ಮದ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಖನಮೊಹ್ ಗ್ರಾಮದ ಸರಪಂಚ್ ಬಶೀರ್ ಅಹಮ್ಮದ್ ಭಟ್ ಮೇಲೂ ಉಗ್ರು ದಾಳಿ ನಡೆಸಿ ಹತ್ಯೆ ಮಾಡಿದ್ದರು.

Border Talks ಲಡಾಖ್ ಸಮಸ್ಯೆ ಮಾತುಕತೆ ಮೂಲಕ ಬಗೆಹರಿಸಲು ಭಾರತ ಚೀನಾ ಒಪ್ಪಿಗೆ!

ಜೈಷ್‌ ಕಮಾಂಡರ್‌ ಸೇರಿ ಐವರು ಉಗ್ರರು ಸೇನೆಯ ಗುಂಡಿಗೆ ಬಲಿ
ಜಮ್ಮುಕಾಶ್ಮೀರದಲ್ಲಿ ಶನಿವಾರ ರಾತ್ರಿ ನಡೆದ 2 ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಕಮಾಂಡರ್‌ ಸೇರಿ ಐವರು ಉಗ್ರರು ಸೈನಿಕರ ಗುಂಡಿಗೆ ಬಲಿಯಾಗಿದ್ದಾರೆ. ಪುಲ್ವಾಮ ಮತ್ತು ಬದ್ಮಾಮ್‌ಗಳಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿಯ ಮೇಲೆ ಸೇನಾಪಡೆಗಳು ಕಾರ್ಯಾಚರಣೆ ನಡೆಸಿದ್ದವು.

Indian missile ಪಾಕ್ ಭೂಭಾಗ ಧ್ವಂಸಗೊಳಿಸಿದ ಭಾರತದ ಕ್ಷಿಪಣಿ, ಘಟನೆಗೆ ವಿಷಾದ ವ್ಯಕ್ತಪಡಿಸಿ ತನಿಖೆಗೆ ಆದೇಶ!

ಜೈಷ್‌ ಉಗ್ರ ಸಂಘಟನೆಯ ಮುಖ್ಯ ಕಮಾಂಡರ್‌ ಝಾಜಿದ್‌ ವಾನಿ ಈ ಕಾರ್ಯಾರಚಣೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪುಲ್ವಾಮ ಐಜಿಪಿ ತಿಳಿಸಿದ್ದಾರೆ. ವಾನಿ 2017ರಿಂದ ಉಗ್ರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಕಣಿವೆ ರಾಜ್ಯದಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತು ಯುವಕರನ್ನು ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದ. ಸಮೀರ್‌ ದಾರ್‌ ಅವರನ್ನು ಹತ್ಯೆ ಮಾಡಿದ ನಂತರ ಈತನನ್ನು ಜಿಲ್ಲಾ ಕಮಾಂಡರ್‌ ಆಗಿ ನೇಮಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಈ ತಿಂಗಳಲ್ಲಿ 11 ಎನ್‌ಕೌಂಟರ್‌ಗಳನ್ನು ಕಾಶ್ಮೀರದಲ್ಲಿ ನಡೆಸಲಾಗಿದೆ. ಇದರಲ್ಲಿ 8 ಪಾಕಿಸ್ತಾನೀಯರು ಸೇರಿದಂತೆ 21 ಉಗ್ರರು ಹತರಾಗಿದ್ದಾರೆ.

 

ಕಾಶ್ಮೀರದಲ್ಲಿ 13 ದಿನದಲ್ಲಿ 7 ವಿದೇಶಿಯರು ಸೇರಿ ಒಟ್ಟು 14 ಉಗ್ರರ ಹತ್ಯೆ
2022ರ ಜ.1ರಿಂದ ಆರಂಭದಿಂದ ಇಲ್ಲಿವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 7 ವಿದೇಶಿ ಉಗ್ರರು ಸೇರಿ 14 ಉಗ್ರರನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಗುರುವಾರ ಕುಪ್ವಾರದ ಗಡಿ ನಿಯಂತ್ರಣಾ ರೇಖೆ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಓರ್ವ ಉಗ್ರನೂ ಇದರಲ್ಲಿ ಸೇರಿದ್ದಾನೆ ಎಂದು ಕಾಶ್ಮೀರ ಐಜಿಪಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ. ಗುರುವಾರ ಜೈಷ್‌ -ಇ- ಮೊಹ್ಮದ್‌ ಜೊತೆ ಸಂಪರ್ಕ ಹೊಂದಿದ್ದ ಪಾಕ್‌ ಉಗ್ರ ಬಾಬರ್‌ ಭಾಯ್‌ನನ್ನು ಹತ್ಯೆ ಮಾಡಿದ ಬಳಿಕ ಕುಲ್‌ಗಾಂನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಳೆದ 13 ದಿನಗಳಲ್ಲಿ ಒಟ್ಟು 14 ಉಗ್ರರನ್ನು ಸದೆಬಡಿದಿರುವುದಾಗಿ ಮಾಹಿತಿ ನೀಡಿದರು.

2021ರಲ್ಲಿ ಜಮ್ಮು ಕಾಶ್ಮೀರದಲ್ಲಿ 184 ಉಗ್ರರ ಹತ್ಯೆ
ಜಮ್ಮು ಕಾಶ್ಮೀರದಲ್ಲಿ 2021ರಲ್ಲಿ ಭಾರತೀಯ ಸೇನೆ ಬರೋಬ್ಬರಿ 184 ಉಗ್ರರನ್ನು ಸದೆಬಡೆದಿದೆ. ಇದರಲ್ಲಿ 44 ಟಾಪ್‌ ಕಮಾಂಡರ್‌ಗಳು ಹಾಗೂ 20 ವಿದೇಶಿ ಭಯೋತ್ಪಾದಕರು ಸೇರಿದ್ದಾರೆ. ಉಗ್ರರ ವಿರುದ್ಧ ಗಡಿಯಲ್ಲಿ ಕೈಗೊಂಡ 100 ಕಾರ್ಯಾಚರಣೆಗಳು ಯಶಸ್ವಿಯಾಗಿವೆ ಎಂದು ಡಿಜಿಪಿ ದಿಲ್ಬೀರ್‌ಸಿಂಗ್‌ ತಿಳಿಸಿದ್ದಾರೆ. ವರ್ಷದ ಅಂತ್ಯದಲ್ಲಿ ಒಂದೇ ದಿನ 9 ಜೈಷ್‌-ಎ-ಮೊಹಮ್ಮದ್‌ ಉಗ್ರರನ್ನು ಹತ್ಯೆ ಮಾಡಲಾಗಿದೆ. 2021ರಲ್ಲಿ ಹತ್ಯೆಯಾದ 44 ಪ್ರಮುಖ ಭಯೋತ್ಪಾದಕರರಲ್ಲಿ 26 ಜನ ಲಷ್ಕರ್‌-ಎ-ತೊಯ್ಬಾ ಸಂಘಟನೆಯ ಉಗ್ರರು ಹಾಗೂ 10 ಮಂದಿ ಜೈಷ್‌-ಎ-ಮೊಹಮ್ಮದ್‌ ಹಾಗೂ 7 ಮಂದಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರು ಸಹ ಸೇರಿದ್ದಾರೆ. ಕಳೆದ ವರ್ಷ ಗಡಿದಾಟುವ ಉಗ್ರರ ಸಂಖ್ಯೆ ಇಳಿಮುಖವಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.

click me!