By Election ನಾಲ್ಕು ರಾಜ್ಯಗಳ ಲೋಕಸಭಾ, ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಿಸಿದ ಆಯೋಗ!

By Suvarna News  |  First Published Mar 12, 2022, 7:55 PM IST
  • ನಾಲ್ಕು ರಾಜ್ಯಗಳ ಸಂಸತ್ ಹಾಗೂ ವಿಧಾನಸಭಾ ಉಪಚುನಾವಣೆ ಫಿಕ್ಸ್
  • ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಚತ್ತೀಸಘಡ
  • ಎಪ್ರಿಲ್ 12ಕ್ಕೆ ಮತದಾನ, ಎಪ್ರಿಲ್ 16ಕ್ಕೆ ಫಲಿತಾಂಶ

ನವದೆಹಲಿ(ಮಾ.12): ಪಂಚ ರಾಜ್ಯಗಳ ಚುನಾವಣೆಯನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಚುನಾವಣಾ ಆಯೋಗ ಇದೀಗ ನಾಲ್ಕು ರಾಜ್ಯಗಳ ಲೋಕಸಭಾ ಹಾಗೂ ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಿಸಿದೆ.ಬಿಹಾರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಚತ್ತೀಸಘಡದಲ್ಲಿನ ಸಂಸತ್ ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಎಪ್ರಿಲ್ 12 ರಂದು ಮತದಾನ ನಡೆಯಲಿದೆ. ಇನ್ನು ಎಪ್ರಿಲ್ 16 ರಂದು ಫಲಿತಾಂಶ ಹೊರಬೀಳಲಿದೆ.

ನಾಲ್ಕು ರಾಜ್ಯಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಮಾರ್ಚ್  17ರಿಂದ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ. ಮಾರ್ಚ್ 24 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಇನ್ನು ಮಾರ್ಚ್ 28ರೊಳಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ.

Tap to resize

Latest Videos

ಪಶ್ಚಿಮ ಬಂಗಾಳದ ಅಸನೋಲ್ ಸಂಸತ್ ಕ್ಷೇತ್ರ, ಚತ್ತೀಸಘಡದ ಕೈರಾಗ್ ವಿಧಾನಸಭಾ ಕ್ಷೇತ್ರ, ಬಿಹಾರದ ಬೊಚೆನ್ ವಿಧಾನಸಭಾ ಕ್ಷೇತ್ರ, ಮಹಾರಾಷ್ಟ್ರದ ಉತ್ತರ ಕೊಲ್ಹಾಪುರ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 

ಹಾನಗಲ್ ಬೈ ಎಲೆಕ್ಷನ್ ಸೋಲಿನ ಬಗ್ಗೆ ಶಿವಕುಮಾರ್ ಉದಾಸಿ ಅಚ್ಚರಿ ಹೇಳಿಕೆ

ಪಂಚ ರಾಜ್ಯ ಚುನಾವಣೆ ಫಲಿತಾಂಶ
ಮಾರ್ಚ್ 10 ರಂದು ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ, ಕಳೆದ ಕೆಲ ತಿಂಗಳುಗಳಿಂದ ನಡೆದ ಪಂಚ ರಾಜ್ಯ ಚುನಾವಣೆಗೆ ತೆರೆ ಬಿದ್ದಿದೆ. ಲೋಕಸಭೆ ಚುನಾವಣೆಯ ಸೆಮಿಫೈನಲ್‌ನಂತೆ ಬಿಂಬಿತವಾಗಿದ್ದ ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಚುನಾವಣೆ ಎದುರಿಸಿದ 5 ರಾಜ್ಯಗಳ ಪೈಕಿ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಗೋವಾದಲ್ಲಿ ಐದು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಆ ನಾಲ್ಕೂ ರಾಜ್ಯಗಳಲ್ಲೂ ವಿಜಯ ಪತಾಕೆ ಹಾರಿಸಿದೆ. ಇದರೊಂದಿಗೆ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯ ಹವಾ ಇನ್ನೂ ಇದೆ ಎಂಬುದು ಸ್ಪಷ್ಟವಾಗಿ ಸಾಬೀತಾಗಿದೆ.

ಮುಂದಿನ ಚುನಾವಣೆಯಲ್ಲಿ ಬಡ್ಡಿ ಸಮೇತ ತೀರಿಸಿಕೊಳ್ತೇವೆ: ಸಿದ್ದುಗೆ ಈಶ್ವರಪ್ಪ ಟಾಂಗ್​

ಎರಡು ಪಕ್ಷಗಳ ಆಡುಂಬೊಲವಾಗಿದ್ದ ಪಂಜಾಬ್‌ನಲ್ಲಿ ಪರಾರ‍ಯಯ ಶಕ್ತಿಯಾಗಿ ಆಮ್‌ ಆದ್ಮಿ ಪಕ್ಷ (ಆಪ್‌) ಭರ್ಜರಿಯಾಗಿ ಉದಯಿಸಿದ್ದು, ಐತಿಹಾಸಿಕ ದಿಗ್ವಿಜಯ ಸಾಧಿಸಿ ಗದ್ದುಗೆಗೆ ಏರಿದೆ. ಪರಂಪರಾಗತ ಎದುರಾಳಿಗಳಾದ ಕಾಂಗ್ರೆಸ್‌ ಹಾಗೂ ಅಕಾಲಿ ದಳ ಎರಡಕ್ಕೂ ಮಣ್ಣು ಮುಕ್ಕಿಸಿದೆ. ದೆಹಲಿಯಂತಹ ಮಹಾನಗರಕ್ಕೆ ಸೀಮಿತವಾಗಿದ್ದ ಆಪ್‌, ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ರಾಜ್ಯವೊಂದರಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರಿದೆ.

ಒಂದು ರಾಷ್ಟ್ರ ಒಂದು ಚುನಾವಣೆ’ ಅವಶ್ಯಕ
ಸಾಲು ಸಾಲು ಚುನಾವಣೆಗಳಿಂದ ಉಂಟಾಗುತ್ತಿರುವ ಆರ್ಥಿಕ ನಷ್ಟ, ಅಭಿವೃದ್ಧಿ ಚುಟುವಟಿಕೆ ಕುಂಟಿತ, ಮಾನವ ಸಂಪನ್ಮೂಲಗಳ ವ್ಯರ್ಥ ಬಳಕೆ ತಪ್ಪಿಸಲು ‘ಒಂದು ರಾಷ್ಟ್ರ ಒಂದು ಚುನಾವಣೆ’ ಪದ್ಧತಿಯ ಅವಶ್ಯಕವಾಗಿದೆ. ಜಾರಿಗೆ ಎದುರಾಗುವ ಸಾಧಕ-ಬಾಧಕಗಳ ಕುರಿತು ಸಾರ್ವಜನಿಕ ವಲಯದಲ್ಲಿ ಹೆಚ್ಚಿನ ಚರ್ಚೆಗಳಾಗಬೇಕು ಎಂದು ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಂಗಳವಾರ ‘ಭಾರತೀಯ ವಿಕಾಸ ವೇದಿಕೆ ಕರ್ನಾಟಕ’ ಹಮ್ಮಿಕೊಂಡಿದ್ದ ದುಂಡು ಮೇಜಿನ ಸಭೆಯಲ್ಲಿ ಕಾನೂನು, ಸಂವಿಧಾನ, ಉದ್ಯಮ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ನಿರಂತರವಾಗಿ ನಡೆಯುವ ಚುನಾವಣೆಗಳಲ್ಲಿಯೇ ರಾಜಕೀಯ ಪಕ್ಷಗಳು, ಸರ್ಕಾರ ಮಗ್ನವಾಗುವುದರಿಂದ ಅಭಿವೃದ್ಧಿ ಕೆಲಸಗಳು ನಿಂತ ನೀರಾಗುತ್ತವೆ. ಇತ್ತೀಚಿನ ಮೂರು ರಾಜ್ಯಗಳ ಚುನಾವಣೆಗೆ 60 ಸಾವಿರ ಕೋಟಿ ರು. ಚುನಾವಣೆ ವೆಚ್ಚವಾಗಿದೆ. ಒಮ್ಮೆಗೆ ಚುನಾವಣೆ ನಡೆಯುವುದರಿಂದ ಅವ್ಯವಹಾರ, ಹಣ, ಜಾತಿ ಬಲವನ್ನು ಕಡಿಮೆ ಮಾಡಬಹುದು. ಚುನಾವಣೆ ಸುಧಾರಣೆಗೆ ಮುಂದಾಗದಿದ್ದರೆ ಭವಿಷ್ಯದಲ್ಲಿ ಅಭಿವೃದ್ಧಿಯ ಅಧಃಪತನ ಕಾಣಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
 

click me!