ಕೇರಳದ ಶಾಲೆಯೊಂದರಲ್ಲಿ ಕಾಗೆಯೊಂದು ಧ್ವಜಾರೋಹಣ ಮಾಡಿದೆ ಎಂಬ ಶೀರ್ಷಿಕೆಯಡಿಯಲ್ಲಿ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಅಸಲಿ ಸತ್ಯ ಇಲ್ಲಿದೆ.
ಬೆಂಗಳೂರು: ಇಂಟರ್‌ನೆಟ್‌ನಲ್ಲಿ ಪಕ್ಷಿಯೊಂದು ಧ್ವಜಾರೋಹಣ ಮಾಡಿದೆ ಎನ್ನಲಾದ ವಿಡಿಯೋ ವೈರಲ್ ಆಗುತ್ತಿದೆ. ಒಂದು ಕ್ಯಾಮೆರಾ ಆಂಗಲ್ ನಲ್ಲಿ ಕಾಗೆ ಬಂದು ಧ್ವಜಾರೋಹಣ ಮಾಡಿದಂತೆಯೇ ಕಾಣಿಸುತ್ತದೆ. ಆಗಸ್ಟ್ 15ರಂದು ಭಾರತ ಸ್ವತಂತ್ರ ದಿನವನ್ನು ಅದ್ಧೂರಿಯಾಗಿ ಆಚರಿಸಿದೆ. ಸ್ವತಂತ್ರ ದಿನ ಅಂದ್ರೆ ಶಾಲಾ ಮಕ್ಕಳ ಸಂಭ್ರಮ ಹೆಚ್ಚಾಗುತ್ತದೆ. ವೈಟ್ ಯೂನಿಫಾರ್ಮ್ ಧರಿಸಿ ಬೆಳಗ್ಗೆಯೇ ಶಾಲೆಗೆ ಬಂದು ಎಲ್ಲರ ಜೊತೆ ಸೇರಿ ಧ್ವಜಾರೋಹಣ ಮಾಡುವ ಸಂಭ್ರಮವೇ ತುಂಬಾ ವಿಭಿನ್ನವಾದ್ದು. 78ನೇ ಸ್ವತಂತ್ರ ದಿನಾಚರಣೆಯನ್ನು ಭಾರತ ಆಚರಿಸುತ್ತಿದ್ದರೂ, ಕೆಲವಡೆ ತ್ರಿವರ್ಣ ಧ್ವಜವನ್ನು ಉಲ್ಟಾ ಹಾರಿಸುವ ಘಟನೆಗಳು ನಡೆಯುತ್ತಿತ್ತವೆ. ಕೆಲವು ಕಡೆ ಧ್ವಜ ಬಿಗಿಯಾಗಿ ಕಟ್ಟಿರುವ ಕಾರಣ, ಕೆಳಗೆ ದಾರದಿಂದ ಎಳೆದಾಗ ಅದು ಬಿಚ್ಚಿಕೊಳ್ಳಲ್ಲ. ಕೊನೆಗೆ ಧ್ವಜಸ್ತಂಭವನ್ನು ಏರಿಯೇ ಧ್ವಜಾರೋಹಣ ಮಾಡಲಾಗುತ್ತದೆ.
ತ್ರಿವರ್ಣ ಧ್ವಜವನ್ನು ಹೇಗೆ, ಯಾವಾಗ ಹಾರಿಸಬೇಕು ಎಂಬ ನಿಯಮಗಳಿವೆ. ಅದೇ ರೀತಿ ಧ್ವಜವನ್ನು ಹೇಗೆ ಮಡಿಚಬೇಕು ಎಂಬುದರ ಕುರಿತು ಸಹ ನಿಯಮಗಳಿವೆ. ಆ ನಿಯಮಗಳ ಪ್ರಕಾರವೇ ಧ್ವಜವನ್ನು ಕಟ್ಟಿದಾಗ ಮಾತ್ರ ಕೆಳಗಿನ ದಾರ ಎಳೆದಾಗ ಅದು ಬಿಚ್ಚಿಕೊಳ್ಳುತ್ತದೆ. ಇದೀಗ ಇಂತಹವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಶಾಲೆಯೊಂದರಲ್ಲಿ ಸ್ತಂಭದ ಮೇಲೆ ಕಟ್ಟಲಾಗಿದ್ದ ಬಾವುಟವನ್ನು ಪಕ್ಷಿಯೊಂದು ಬಿಚ್ಚಿದೆ. ಆರಂಭದಲ್ಲಿ ಶಿಕ್ಷಕರು ಧ್ವಜಕ್ಕೆ ಕಟ್ಟಿದ ದಾರವನ್ನು ಕೆಳಗಿನಿಂದ ಎಳೆಯುತ್ತಾರೆ. ಆದರೆ ಧ್ವಜ ಬಿಚ್ಚಿಕೊಳ್ಳಲ್ಲ. ಅಷ್ಟರಲ್ಲಿಯೇ ಧ್ವಜ ಕಂಬದ ಬಳಿ ಬರೋ ಪಕ್ಷಿ ಬಾವುಟ ಆರೋಹಣಕ್ಕೆ ಸಹಾಯ ಮಾಡಿದೆ.
undefined
ಶಿಲ್ಪಾ ಎಂಬವರು ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಧ್ವಜವನ್ನು ಹಾರಿಸಲು ಹಗ್ಗವನ್ನು ಎಳೆದ ತಕ್ಷಣ, ಧ್ವಜವು ಸಿಕ್ಕಿಹಾಕಿಕೊಳ್ಳುತ್ತದೆ. ಧ್ವಜವು ಮೇಲ್ಭಾಗದಲ್ಲಿ ಸಿಕ್ಕಿಹಾಕಿಕೊಂಡಾಗ, ಕಾಗೆ ಧ್ವಜ ಬಿಚ್ಚಿಕೊಳ್ಳಲು ಸಹಾಯ ಮಾಡುತ್ತದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೆಲವರು ಇದನ್ನು ಅಧ್ಭುತ ಎಂದು ಕಮೆಂಟ್ ಮಾಡಿದ್ದಾರೆ. ಕೇರಳದ ಶಾಲೆಯಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದೆ.
Kerala - National Flag got stuck at the top while hoisting. A bird came from nowhere and unfurled it!! ✨ pic.twitter.com/lRFR2TeShK
— Shilpa (@shilpa_cn)ಫ್ಯಾಕ್ಟ್ ಚೆಕ್
ಈ ವಿಡಿಯೋ ಫ್ಯಾಕ್ಟ್ ಚೆಕ್ ಮಾಡಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ವೈರಲ್ ಆಗಿರುವ ಮತ್ತು ಒರಿಜಿನಲ್ ಅಂತ ಎರಡು ವಿಡಿಯೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪಕ್ಷಿ ಬಂದು ಧ್ವಜಾರೋಹಣ ಮಾಡಿಲ್ಲ. ಕ್ಯಾಮೆರಾ ಆಂಗಲ್‌ನಿಂದ ನಮಗೆ ಆ ರೀತಿ ಕಾಣಿಸುತ್ತಿದೆ. ಧ್ವಜಾರೋಹಣ ಸಮಯದಲ್ಲಿ ಧ್ವಜಸ್ತಂಭಕ್ಕೆ ನೇರವಾಗಿರುವ ತೆಂಗಿನ ಮರದ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಧ್ವಜ ಹಾರುತ್ತಿದ್ದಂತೆ ಪಕ್ಷಿಯೂ ಮರದಿಂದ ಹಾರಿ ಹೋಗುವದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ಪ್ಲೀಸ್, ಒಬ್ಬೊಬ್ಬರಾಗಿ ರೇಪ್ ಮಾಡಿ… ಬಾಂಗ್ಲಾದೇಶದ ಹಿಂದೂ ತಾಯಿಯ ಅಸಹಾಯಕತೆ ನಿಮಗೆ ಕಣ್ಣೀರು ತರಿಸುತ್ತೆ!