ಒಂದು ಕಾಗೆ ಮದ್ಯ ಸೇವಿಸಿ ಗೋಡೆಗೆ ಡಿಕ್ಕಿ ಹೊಡೆದಂತೆ ತೋರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಎಡಿಟ್ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ, ಕಾಗೆಯ ಕುಡಿತದ ಚಟ ಮತ್ತು ಅದರ ಪರಿಣಾಮಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ನವದೆಹಲಿ: ಬಾಲ್ಯದಲ್ಲಿ ಎಲ್ಲರೂ ಜಾಣ ಕಾಗೆ ಕಥೆ ಕೇಳಿರುತ್ತೀರಿ. ಬೇಸಿಗೆಯಲ್ಲಿ ದಾಹದಿಂದ ಬಳಲಿದ ಕಾಗೆಯೊಂದು ನೀರು ಹುಡುಕುತ್ತಾ ಬರುತ್ತದೆ. ನಂತರ ಹೂಜಿಯೊಂದು ಕಾಣಿಸುತ್ತದೆ. ಆದ್ರೆ ಸಮೀಪ ಬಂದು ನೋಡಿದಾಗ ಹೂಜಿಯಲ್ಲಿ ನೀರು ಕೆಳಗೆ ಬರುತ್ತದೆ. ನಂತರ ಜಾಣ ಕಾಗೆ ಪಕ್ಕದಲ್ಲಿದ್ದ ಕಲ್ಲುಗಳನ್ನು ಬಾಯಿಯಿಂದ ತಂದು ಹೂಜಿಯೊಳಗೆ ಹಾಕುತ್ತದೆ. ಕಲ್ಲು ಹಾಕಿದ್ದರಿಂದ ಹೂಜಿಯಲ್ಲಿದ್ದ ನೀರು ಮೇಲೆ ಬರುತ್ತದೆ. ಜಾಣ ಕಾಗೆ ನೀರು ಕುಡಿದು ಅಲ್ಲಿಂದ ಹಾರಿ ಹೋಗುತ್ತದೆ. ಈ ಕಥೆಯನ್ನ ಎಲ್ಲರೂ ಕೇಳಿರುತ್ತಾರೆ. ಇಂದಿನ ಮಕ್ಕಳಿಗೆ ಈ ಕಥೆ ಪಾಠದಲ್ಲಿರುತ್ತದೆ.
ಇಂದು ನಾವು ಹೇಳುತ್ತಿರುವ ಕಾಗೆ ಕಥೆಯೇ ಬೇರೆಯಾಗಿದೆ. ಈ ಕಾಗೆಯ ವಿಡಿಯೋ ನೋಡಿದ ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದು ಎಣ್ಣೆಪ್ರಿಯ ಕಾಗೆ, ಅದು ಒಳಗಿರೋ ಮದ್ಯದ ಆಟ. ಮದ್ಯ ಕುಡಿದ ನಂತರ ಕೆಲ ಪುರುಷರು ತಮ್ಮ ಮನೆ ದಾರಿಯನ್ನೇ ಮರೆಯುತ್ತಾರೆ. ಅಂತಹದರಲ್ಲಿ ಕಾಗೆ ಯಾವ ಲೆಕ್ಕಾ? ಮದ್ಯ ಕುಡಿದ ಬಳಿಕ ಇದು ಹಾರೋದನ್ನು ಮರೆತಿರಬೇಕು. ಪಾಪಾ, ಅದು ಯಾವಾಗ ಹಾರಿ ಹೋಯ್ತು ಎಂದು ನೆಟ್ಟಿಗರು ಕೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವೈರಲ್ ಆಗಿರುವ ಎಡಿಟೆಡ್ ವಿಡಿಯೋದಲ್ಲಿ ಕಾಗೆಯೊಂದು ಟೇಬಲ್ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಅದಕ್ಕೆ ಓರ್ವ ವ್ಯಕ್ತಿ ಗ್ಲಾಸ್‌ನಲ್ಲಿ ಮದ್ಯ ಹಾಕುತ್ತಾನೆ. ಕಾಗೆ ಸಹ ಮದ್ಯವನ್ನು ಕುಡಿಯುತ್ತದೆ. ನಂತರ ಕಾಗೆ ಹಾರುತ್ತಾ ಗೋಡೆಗೆ ಡಿಕ್ಕಿಯಾಗೋದನ್ನು ತೋರಿಸಲಾಗುತ್ತದೆ. ಈ ವಿಡಿಯೋ aaky_don ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ 50 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ನೂರಾರು ಕಮೆಂಟ್‌ಗಳು ಬಂದಿವೆ. ಕೆಲವರು ಇದು ಎಡಿಟ್ ವಿಡಿಯೋ ಆಗಿದೆ. ಕಾಗೆ ಮದ್ಯ ಸೇವಿಸುವ ವಿಡಿಯೋ ತುಂಬಾ ಹಳೆಯದು. ಆದ್ರೆ ಈ ವಿಡಿಯೋ ಮೂಲಕ ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದುಕೊಳ್ಳಬಹುದು.