RS 3,383 ಕೋಟಿ ಆಸ್ತಿ ಇದ್ದರೂ ರಸ್ತೆಯಲ್ಲಿ ಭಿಕ್ಷೆ ಬೇಡಿದ ಕೋಟ್ಯಾಧಿಪತಿ ಬಿಜೆಪಿ ಶಾಸಕ! ಆಮೇಲೆ ಏನಾಯ್ತು ಗೊತ್ತಾ?

Published : Sep 14, 2026, 09:22 PM IST
bjp mla parag shah

ಸಾರಾಂಶ

ಮಹಾರಾಷ್ಟ್ರದ ಬಿಜೆಪಿ ಶಾಸಕ ಹಾಗೂ 3,383 ಕೋಟಿ ರೂ. ಆಸ್ತಿಯ ಒಡೆಯ ಪರಾಗ್ ಶಾ, ಭಿಕ್ಷುಕನ ವೇಷದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ತಮ್ಮ ಗುರುಗಳ ಸಲಹೆಯಂತೆ ಸಾಮಾನ್ಯರ ಜೀವನವನ್ನು ಅರಿಯಲು ಅವರು ಈ ರೀತಿ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಹಾರಾಷ್ಟ್ರ ಬಿಜೆಪಿ ಶಾಸಕ ಪರಾಗ್ ಶಾ (Parag Shah) ಸದ್ಯ ಸೋಶಿಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದಾರೆ. ಕಾರಣ, ಬರೋಬ್ಬರಿ 3,383 ಕೋಟಿ ಆಸ್ತಿ ಹೊಂದಿದ್ದರೂ, ಪ್ರಮುಖ ನಗರಗಳಲ್ಲಿ ಭಿಕ್ಷುಕನ ವೇಷತೊಟ್ಟು ಭಿಕ್ಷಾಟನೆ ಮಾಡಿದ್ದಾರೆ. ಆದರೆ ಭಿಕ್ಷೆ ಬೇಡುವ ಸಂದರ್ಭದಲ್ಲಿ ಹಣ ನೀಡಿ ಸಂತೈಸಿದವರಿಗೆ ಇವರೊಬ್ಬ ಅಗರ್ಭ ಶ್ರೀಮಂತ, ನಾವೇ ಆರಿಸಿ ವಿಧಾನಸಭೆಗೆ ಕಳುಹಿಸಿದ ಜನನಾಯಕ ಎಂಬುದು ಯಾರಿಗೂ ತಿಳಿದಿಲ್ಲ!

ಹೌದು, ಪರಾಗ್ ಶಾ ಎಂಬ ರಾಜಕಾರಣಿ ರಸ್ತೆ ಬದಿಯಲ್ಲಿ ಕುಳಿತು, ಜನರೊಂದಿಗೆ ಹಣಕ್ಕಾಗಿ ಕೈಒಡ್ಡುತ್ತ ಸಂವಹನ ನಡೆಸುತ್ತಿದ್ದರೂ ಅದೆಷ್ಟೋ ಮಂದಿಗೆ ಈತ ಶಾಸಕ ಎಂದು ಗೊತ್ತಾಗಿಲ್ಲ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಜನರಿಂದ ಭಿಕ್ಷೆ ಬೇಡುತ್ತಿದ್ದಾರೆ. ಸಾಮಾನ್ಯ ನಿವಾಸಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ. ಸದ್ಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಇದೀಗ ತಾವು ನೋಡಿದ ಬೀದಿಯಲ್ಲಿ ನಿಂತಿದ್ದ ಭಿಕ್ಷುಕ ಪರಾಗ್ ಶಾ ಅವರಾ ಎಂದು ಜನ ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ. ಒಬ್ಬ ರಾಜಕಾರಣಿ ಅಸಮಾನ್ಯ ಪಾತ್ರ ತೊಟ್ಟಿದ್ದು ಏಕೆ ಎಂಬ ಪ್ರಶ್ನೆ ಶುರುವಾಗಿದೆ. ಅದಕ್ಕೆ ಕಾರಣ ಇಲ್ಲಿದೆ..

ಪರಾಗ್ ಮಾರುವೇಷ ತೊಟ್ಟಿದ್ದು ಯಾಕೆ?

ಶಾಸಕರ ಇಂಥ ನಿರ್ಧಾರಕ್ಕೆ ಕಾರಣ ಜೈನ ಆಧ್ಯಾತ್ಮಿಕ ಗುರು ನಮ್ರಮುನಿ ಮಹಾರಾಜ್. ಗುರುಗಳ ಸಲಹೆ ಮೇರೆಗೆ ಅವರು ಭಿಕ್ಷಾಟನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ.. ಶಾ ಅವರು ಭಿಕ್ಷಾಟನೆಗೆ ಹೊರಡುವ ಮೊದಲು ತಮ್ಮ ಭದ್ರತಾ ಸಿಬ್ಬಂದಿ, ವಾಹನ ಮತ್ತು ದುಬಾರಿ ವಸ್ತುಗಳನ್ನು ಬಿಟ್ಟು ಬಂದಿದ್ದರು. ಅವರು ಮುಂಬೈನ ಘಾಟ್ಕೋಪರ್ ಪ್ರದೇಶದ ಮೂಲಕ ಒಂದು ದಿನ ನಡೆದುಕೊಂಡು ಹೋಗುತ್ತಿದ್ದರು. ಯಾರಿಗೂ ತಿಳಿಯದಂತೆ ಅಪರಿಚಿತ ಎನ್ನುವ ರೀತಿಯಲ್ಲಿದ್ದುಕೊಂಡು ಜನರೊಂದಿಗೆ ಸಂಭಾಷಣೆ ನಡೆಸಿದ್ದರು. ಅವರು ಹೀಗೆ ಮಾಡಿರೋದು ಯಾವುದೇ ಸಂಪತ್ತು ಮತ್ತು ಸವಲತ್ತುಗಳಿಲ್ಲದೆ ಜನರು ಹೇಗೆ ಬದುಕುತ್ತಾರೆ. ಅವರ ದೃಷ್ಟಿಕೋನಗಳು ಏನೇನು ಎಂದು ತಿಳಿಯಲು ಹಾಗೆ ಮಾಡಿದ್ದರು ಎನ್ನಲಾಗಿದೆ.

ಇನ್ನು ಪರಾಗ್ ಶಾ ಅವರು ಮಹಾರಾಷ್ಟ್ರದ ಅತ್ಯಂತ ಶ್ರೀಮಂತ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರು. 2024 ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಅಫಿಡವಿಟ್‌ ಪ್ರಕಾರ, ಶಾ ಬರೋಬ್ಬರಿ 3,383 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಬಿಎಂಸಿ ಕಾರ್ಪೊರೇಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಾಲ್ಕು ವರ್ಷ ಸಂಸಾರ, ಇದ್ದಕ್ಕಿದ್ದಂತೆ ಮನೆಬಿಟ್ಟ ಚೆಲುವೆ, ತಿಂಗಳ ಬಳಿಕ ಪತ್ನಿ ಸ್ಥಿತಿ ಕಂಡು ಎದೆ ಬಡಿದುಕೊಂಡ ಪತಿ
ದುರ್ಗಾ ಪೂಜೆಗೂ ಮೊದಲು ದೇಶ ರಾಜಕೀಯದಲ್ಲಿ ಕೋಲಾಹಲ, 17 ಸಂಸದರು ಬಿಜೆಪಿ ಸೇರ್ಪಡೆ ಸುಳಿವು