ನಾಲ್ಕು ವರ್ಷ ಸಂಸಾರ, ಇದ್ದಕ್ಕಿದ್ದಂತೆ ಮನೆಬಿಟ್ಟ ಚೆಲುವೆ, ತಿಂಗಳ ಬಳಿಕ ಪತ್ನಿ ಸ್ಥಿತಿ ಕಂಡು ಎದೆ ಬಡಿದುಕೊಂಡ ಪತಿ

Published : Sep 14, 2026, 07:37 PM IST
Woman Goes Missing

ಸಾರಾಂಶ

ಮುದ್ದಾಗಿದ್ದ ಸಂಸಾರವನ್ನು ತೊರೆದು ಪತ್ನಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಒಂದು ತಿಂಗಳ ಬಳಿಕ ಆಕೆ ಪತ್ತೆ ಆಗಿದ್ದಾಳೆ. ಪತಿ ಅಲ್ಲಿಗೆ ಹೋಗಿ 'ಮನೆಗೆ ಬಾ' ಎಂದು ಬೇಡಿಕೊಂಡ. ಆದರೆ ತಾನು ಬರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಅಷ್ಟಕ್ಕೂ ಆಕೆ ಯಾರ ಜೊತೆ ವಾಸಿಸುತ್ತಿದ್ದಾಳೆ ಗೊತ್ತಾ? ಲವರ್ ಜೊತೆಗೂ ಅಲ್ಲ, ಅಪ್ಪ-ಅಮ್ಮನ ಜೊತೆಗೂ ಅಲ್ಲ.

ಇದೊಂದು ವಿಚಿತ್ರ ಪ್ರಕರಣದಲ್ಲಿಯೇ ವಿಚಿತ್ರ ಕೇಸ್. ಆ ದಂಪತಿಗೆ ಮದುವೆ ಆಗಿ ನಾಲ್ಕು ವರ್ಷ ಆಗಿತ್ತು. ಕಳೆದ ಆಗಸ್ಟ್ 12 ರಂದು ಪತ್ನಿ ಇದ್ದಕ್ಕಿದ್ದಂತೆ ಪತಿಯನ್ನು ಬಿಟ್ಟು ದೂರವಾದಳು. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಪೊಲೀಸರಿಗೆ ದೂರು ನೀಡಿಯೂ ಆಗಿತ್ತು. ಸತತ ಪ್ರಯತ್ನಗಳ ನಂತರ ಆ ಮಹಿಳೆ ಪತ್ತೆಯಾಗಿದ್ದಾಳೆ. ಆದರೆ, ಮನೆಗೆ ಬಾ ಅಂದ್ರೆ ಇನ್ನೇನೋ ಕಾರಣ ಹೇಳ್ತಿದ್ದಾಳೆ..

ಏನಿದು ವಿಚಿತ್ರ ಕೇಸ್?

ಅಂದ್ಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ. ಆಗಿದ್ದೇನು ಅಂತಾ ನೋಡೋದಾದ್ರೆ, ಪ್ರಿಯಾ ಎಂಬ ಮಹಿಳೆಗೆ ನಾಲ್ಕು ವರ್ಷಗಳ ಹಿಂದೆ ಮದುವೆ ಆಗಿತ್ತು. ಆಗಸ್ಟ್‌ನಲ್ಲಿ ಪತಿ ಮತ್ತು ಪತ್ನಿ ನಡುವೆ ಜೋರಾಗಿ ಗಲಾಟೆ ಆಗಿದೆ. ಅಷ್ಟಕ್ಕೆ ಪತ್ನಿ ಮನೆಬಿಟ್ಟು ಪರಾರಿ ಆಗಿದ್ದಾಳೆ. ಎಲ್ಲಿಗೆ ಹೋದಳು? ಪತ್ತೆ ಇರಲಿಲ್ಲ.

ಪತ್ನಿ ಮನೆಯಲ್ಲಿ ಇಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಪತಿ ಗಾಬರಿ ಆಗಿದ್ದಾನೆ. ಸಂಬಂಧಿಕರಿಗೆ ತಿಳಿಸಿದ್ದಾನೆ. ಜೊತೆಗೆ ಗೊತ್ತಿರೋ ಕಡೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಸುಳಿವು ಸಿಗಲಿಲ್ಲ. ನಂತರ ಕುಟುಂಬಸ್ಥರೆಲ್ಲ ಸೇರಿ, ಇಕೋಟೆಕ್ ಪೊಲೀಸ್ ಠಾಣೆಗೆ ಓಡೋಡಿ ಬಂದಿದ್ದಾರೆ. ಪೊಲೀಸರ ಜೊತೆ ತಾವೂ ಕೂಡ ಆಕೆಯ ಹುಡುಕಾಟಕ್ಕೆ ಇಳಿದಿದ್ದಾರೆ.

ಪತ್ತೆ ಆಗಿದ್ದು ಹೇಗೆ?

ದೂರವಾಗಿದ್ದ ಪ್ರಿಯಾ ಸಿಕ್ಕಿಬಿದ್ದಿದ್ದು ಸೋಶಿಯಲ್ ಮೀಡಿಯಾ ಮೂಲಕ! ಸೋಶಿಯಲ್ ಮಿಡಿಯಾದಲ್ಲಿ ಒಬ್ಬರು ಪೋಸ್ಟ್ ಮಾಡಿದ್ದರು. ಒಂದೇ ಮನೆಯಲ್ಲಿ ಬಾಡಿಗೆ ಪಡೆದು ಇಬ್ಬರು ಮಹಿಳೆಯರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಬರೆಯಲಾಗಿತ್ತು. ನಂತರ ಪೊಲೀಸರೊಂದಿಗೆ ಹೋಗಿ ನೋಡಿದಾಗ ಪ್ರಿಯಾ ಅಲ್ಲಿರೋದು ಗೊತ್ತಾಗಿದೆ. ಇನ್ನು ಆಕೆ ಯಾರ ಜೊತೆ ಇದ್ದಳು ಅನ್ನೋದು ಕೂಡ ಇಂಟ್ರೆಸ್ಟಿಂಗ್.

ಆ ಮಹಿಳೆ ಬೇರೆ ಯಾವುದೋ ಪುರುಷನ ಜೊತೆ, ಪ್ರೇಮಿಯ ಜೊತೆ ಇರಲಿಲ್ಲ. ತಾನು ಕೆಲಸ ಮಾಡುವ ಸಹೋದ್ಯೋಗಿ ನೀಲಂ ಎಂಬಾಕೆಯ ಜೊತೆ ಒಂದೇ ರೂಮ್‌ನಲ್ಲಿ ಸಿಕ್ಕಿಬಿದ್ದಿದ್ದಾಳೆ. ಮನೆ ಬಿಟ್ಟು ಹೋಗಿ ಒಂದು ತಿಂಗಳ ಬಳಿಕ ಸಿಕ್ಕ ಬೆನ್ನಲ್ಲೇ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಗಂಡ, ಹೆಂಡತಿ ಜಗಳ ಸಾಮಾನ್ಯ. ಮನೆಗೆ ಬಂದು ಬಿಡು ಎಂದು ಕೇಳಿಕೊಂಡಿದ್ದಾರೆ.

ಪೊಲೀಸರ ಸಮ್ಮುಖದಲ್ಲೇ ನಡೆದ ರಾಜಿ ಸಂಧಾನಕ್ಕೆ ಪ್ರಿಯಾ ಒಪ್ಪಿಲ್ಲ. ಬದಲಾಗಿ ತನ್ನ ಪತಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದಾಳೆ. ಆತ ಮದುವೆಯಾದ ದಿನದಿಂದ ನನಗೆ ಹೊಡೆಯುತ್ತಾನೆ, ಬಡಿಯುತ್ತಾನೆ, ಬಾಯಿಗೆ ಬಂದಹಾಗೆ ಬಯ್ಯುತ್ತಾನೆ ಎಂದು ಆರೋಪಿಸಿದ್ದಾಳೆ. ಪೊಲೀಸರು, ಮನೆಯವರು ಎಷ್ಟೇ ಹೇಳಿದರೂ ಆಕೆಯನ್ನು ಬಿಟ್ಟು ಬರಲು ಪ್ರಿಯಾ ಒಪ್ಪಿಲ್ಲ. ಇದರಿಂದ ಸಪ್ಪೆ ಮುಖ ಹಾಕಿಕೊಂಡು ಮನೆಯವರು ವಾಪಸ್ ಆಗಿದ್ದಾರೆ.

ಕ್ರಮಕ್ಕೆ ಮುಂದಾದ ಪೊಲೀಸರು?

ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಆಕೆಯ ಕುಟುಂಬಸ್ಥರು ಆಕೆಯ ವಿರುದ್ಧ ಕ್ರಮ ತೆಗೆದುಕೊಳ್ತೀವಿ ಎಂದು ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು ಕ್ರಮ ತೆಗೆದುಕೊಳ್ಳುವುದಾಗಿ ಎಸಿಪಿ ಇಂದಿರಾಪುರಂ ಸೂರ್ಯಬಲಿ ಮೌರ್ಯ ತಿಳಿಸಿದ್ದಾರೆ. ಆದರೆ ಪ್ರಿಯಾ ನೀಲಂ ಜೊತೆಯೇ ಇರೋದಾಗಿ ಸ್ಪಷ್ಟವಾಗಿ ಹೇಳುತ್ತಿದ್ದು ಅವರಿಬ್ಬರ ಸಂಬಂಧಗಳ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದುರ್ಗಾ ಪೂಜೆಗೂ ಮೊದಲು ದೇಶ ರಾಜಕೀಯದಲ್ಲಿ ಕೋಲಾಹಲ, 17 ಸಂಸದರು ಬಿಜೆಪಿ ಸೇರ್ಪಡೆ ಸುಳಿವು
ಮತ್ತೆ ನಿಮ್ಮ ಜೇಬು ಸುಡೋದು ಗ್ಯಾರಂಟಿ, ಹಣದುಬ್ಬರ ಬಗ್ಗೆ ಆಘಾತಕಾರಿ ವರದಿ ರಿವೀಲ್ ಆಗಿದೆ