ಚಿತೆಗೆ ಬೆಂಕಿ ಇಡುವ ಮೊದಲು ಸರಯು ನದಿಯಲ್ಲಿ ಮುಳುಗಿದವನ ಎಳೆದೊಯ್ದ ಮೊಸಳೆ, ವಿಡಿಯೋ

Published : May 21, 2026, 09:54 PM IST
Crocodile Attack in Saryu River

ಸಾರಾಂಶ

ಅತ್ತೆ ನಿಧನ ಸುದ್ದಿ ಕೇಳಿ ಕುಟುಂಬ ಸಮೇತ ಊರಿಗೆ ತೆರಳಿದ 30ರ ಹರೆಯದ ವ್ಯಕ್ತಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ. ಚಿತೆಗೆ ಬೆಂಕಿ ಇಡುವ ಮೊದಲು ನದಿಯಲ್ಲಿ ಮುಳುಗೆಳಲು ನೀರಿಗೆ ಇಳಿದ ಬೆನ್ನಲ್ಲೇ ಮೊಸಳೆ ಎಳೆದೊಯ್ದಿದೆ. 

ಲಖನೌ (ಮೇ.21) ಪತ್ನಿ, ನಾಲ್ಕು ವರ್ಷದ ಮಗಳ ಜೊತೆ ನಗರದಲ್ಲಿ ಕೆಲಸ ಮಾಡುತ್ತಾ ಸಂಸಾರ ನಡೆಸುತ್ತಿದ್ದ 30ರ ಹರೆಯದ ದೀಪಕ್ ಶರ್ಮಾ, ಅತ್ತೆ ಸಾವಿನ ಸುದ್ದಿ ತಿಳಿದು ಊರಿಗೆ ತೆರಳಿದ್ದ. ಅತ್ತೆಯ ಚಿತೆಗೆ ಬೆಂಕಿ ಇಡಲು ಸಂಪ್ರದಾಯದಂತೆ ನೀರಿನಲ್ಲಿ ಮುಳುಗಿ ಒದ್ದೆ ಬಟ್ಟೆಯಲ್ಲಿ ಬರಬೇಕಿತ್ತು. ಸರಯು ನದಿ ತಟದಲ್ಲಿನ ಚಿತಾ ಘಾಟ್‌ನಲ್ಲಿ ಚಿತೆಯಲ್ಲಿ ಪಾರ್ಥೀವ ಶರೀರ ಇಡಲಾಗಿದೆ. ಹೀಗಾಗಿ ಎರಡೇ ಹೆಜ್ಜೆ ಪಕ್ಕದಲ್ಲಿರುವ ನದಿಯಲ್ಲಿ ನೀರಿನಲ್ಲಿ ಮುಳುಗೆದ್ದ ಬರಲು ಹೋದ ದೀಪಕ್ ಶರ್ಮಾರನ್ನು ಮೊಸಳೆ ಎಳೆಯೊದ್ದು ತಿಂದ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.

ಅಂತ್ಯಸಂಸ್ಕಾರದಲ್ಲಿ ನಡೆದ ದುರಂತ

ಗ್ರೇಟರ್ ನೋಯ್ಡಾದಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಶರ್ಮಾ ಪತ್ನಿ ರೇಖಾ ಹಾಗೂ ನಾಲ್ಕು ವರ್ಷಗ ಮಗಳು ನಿಕ್ಕಿ ಜೊತೆ ವಾಸವಾಗಿದ್ದರು. ಪತ್ನಿ ರೇಖಾ ಖಾಯಿ ನಿಧನ ಸುದ್ದಿ ತಿಳಿದು ಕುಟುಂಬ ಸಮೇತ ಪತ್ನಿ ಊರಿಗೆ ತೆರಳಿದ್ದರು. ಗೊಂಡಾ ಜಿಲ್ಲೆಯ ಉಮ್ರಿ ಗ್ರಾಮಕ್ಕೆ ಆಗಮಿಸಿದ ದೀಪಕ್ ಶರ್ಮಾ ಹಾಗೂ ಕುಟುಂಬ, ಅತ್ತೆಯ ಅಂತಿಮ ವಿಧಿವಿಧಾನದಲ್ಲಿ ತೊಡಗಿದ್ದರು. ಉಮ್ರಿ ಗ್ರಾಮದಲ್ಲಿ ಹರಿಯುವ ಸರಯು ನದಿಯ ಚಿತಾ ಘಾಟ್‌ನಲ್ಲಿ ಅಂತಿಮ ವಿಧಿವಿಧಾನ ಪೂರೈಸಿ ಅಗ್ನಿಸ್ಪರ್ಶ ಮಾಡಲು ಎಲ್ಲಾ ತಯಾರಿ ಮಾಡಲಾಗಿತ್ತು.

ಕುಟುಂಬಸ್ಥರು, ಪತ್ನಿ, ಮಗಳು ಸೇರಿದಂತೆ ಆಪ್ತರು ಎಲ್ಲರು ಚಿತಾ ಘಾಟ್‌ನಲ್ಲಿ ನೆರೆದಿದ್ದರು. ಸಂಪ್ರದಾಯದಂತೆ ಒದ್ದೆ ಬಟ್ಟೆಯಲ್ಲಿ ಬಂದು ಚಿತೆಗೆ ಅಗ್ನಿಸ್ಪರ್ಶ ಮಾಡಬೇಕಿತ್ತು. ಇದರ ನಡುವೆ ಕೆಲ ಅಂತಿಮ ವಿಧಿವಿಧಾನಗಳನ್ನು ಪೂರೈಸಬೇಕಿತ್ತು. ಹೀಗಾಗಿ ಸರಯು ನದಿ ದಂಡೆಯ ಮೆಟ್ಟಿಲುಗಳಲ್ಲಿ ಇಳಿದು ಸ್ನಾನ ಮಾಡಿ ಬರಲು ದೀಪಕ್ ಶರ್ಮಾ ನದಿಗೆ ಇಳಿದಿದ್ದಾನೆ.

ಪತ್ನಿ, ಮಗಳ ಮುಂದೆ ನಡೆದ ಘಟನೆ

ಕುಟುಂಬಸ್ಥರು ಎಲ್ಲರೂ ಮೇಲೆ ನಿಂತಿದ್ದರೆ, ಕೆಲವರು ದೀಪಕ್ ಶರ್ಮಾ ಪಕ್ಕದಲ್ಲೇ ನೀರ ಬಳಿ ನಿಂತಿದ್ದರು. ದೀಪಕ್ ಶರ್ಮಾ ಒಂದೆರೆಡು ಹೆಜ್ಜೆ ಮುಂದೆ ತೆರಳಿ ನೀರಿನಲ್ಲಿ ಮುಳುಗವ ಪ್ರಯತ್ನ ಮಾಡಿದ್ದಾರೆ. ಇನ್ನೇನು ದೀಪಕ್ ಶರ್ಮಾ ನೀರಿನಲ್ಲಿ ಮುಳುಗಬೇಕು ಅನ್ನುವಷ್ಟರಲ್ಲೇ ದೈತ್ಯ ಮೊಸಳೆಯೊಂದು ದಾಳಿ ಮಾಡಿದೆ. ದೀಪಕ್ ಶರ್ಮಾ ಹಿಡಿದು ಎಳೆದೊಯ್ದಿದೆ. ನೀರ ಮಧ್ಯಕ್ಕೆ ಎಳೆದೊಯ್ದಿದೆ. ಕುಟುಂಬಸ್ಥರು ಚೀರಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇತ್ತ ದೀಪಕ್ ಶರ್ಮಾ ಮೊಸಳೆಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಕೆಲವೇ ನಿಮಿಷಗಳಲ್ಲಿ ನದಿಯ ಮಧ್ಯಭಾಗಕ್ಕೆ ಮೊಸಳೆ ದೀಪಕ್ ಶರ್ಮಾ ಎಳೆದೊಯ್ದು ತಿಂದು ಹಾಕಿದೆ.

 

 

ಚೀರಾಟದಿಂದ ಅಲ್ಲೇ ಇದ್ದ ಬೋಟ್ ಮೂಲಕ ಗ್ರಾಮಸ್ಥರು ನದಿಯಲ್ಲಿ ಒಂದಷ್ಟು ದೂರ ತೆರಳಿದ್ದಾರೆ. ಆದರೆ ಭಾರಿ ಸಂಖ್ಯೆಯಲ್ಲಿ ಮೊಸಳೆ ಇದ್ದ ಕಾರಣ ಏನು ಮಾಡಲು ಸಾಧ್ಯವಾಗಲಿಲ್ಲ. ನೋಡ ನೋಡುತ್ತಲೇ ಎಲ್ಲರ ಮುಂದೆ ದೀಪಕ್ ಶರ್ಮಾನನ್ನ ಮೊಸಳೆ ತಿಂದು ಹಾಕಿದೆ. ಈ ದೃಶ್ಯ ಸ್ಥಳೀಯ ಮೊಬೈಲ್‌ನಲ್ಲಿ ಸೆರೆಯಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಕಲ್ಯಾಣ ಫಿಕ್ಸ್.. ಸನ್‌ ರೈಸರ್ಸ್‌ ಹೈದರಾಬಾದ್ ಓನರ್-‌ಮ್ಯೂಸಿಕ್ ಡೈರೆಕ್ಟರ್‌ 'ಏನಿಲ್ಲ' ಅಂದಿದ್ದು ಸುಳ್ಳು?
Melody ಚಾಕ್ಲೇಟ್ ವಿವಾದ ನಡುವೆ ಇಟಲಿ ಪ್ರಧಾನಿ ಜೊತೆಗಿನ ಹೊಸ ರೀಲ್ ಹಂಚಿಕೊಂಡ ಮೋದಿ