ರೈತ ಪ್ರತಿಭಟನೆ ಅಸಲಿಯತ್ತು ಬಯಲು, ಹರ್ಯಾಣ ಕಾಂಗ್ರೆಸ್ ಸೋಲಿಗೆ ಬಿಕೆಯು ಮುಖ್ಯಸ್ಥನ ಸ್ಫೋಟಕ ಹೇಳಿಕೆ!

By Chethan Kumar  |  First Published Oct 13, 2024, 9:56 PM IST

ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ಸೃಷ್ಟಿಸಿದ್ದು ನಾವು, ಆದರೆ ಭೂಪಿಂದರ್ ಹೂಡ ಮೂರ್ಖ, ಹೀಗಾಗಿ ಕಾಂಗ್ರೆಸ್ ಚುನಾವಣೆಯಲ್ಲಿ ಮುಗ್ಗಿಸಿದೆ ಎಂದು ರೈತ ಸಂಘಟನೆ ಮುಖ್ಯಸ್ಥ ಹೇಳಿದ್ದಾರೆ. ಆದರೆ ಈ ಹೇಳಿಕೆಯಿಂದ ರೈತ ಪ್ರತಿಭಟನೆ ಹಿಂದಿನ ಷಡ್ಯಂತ್ರ ಬಯಲಾಗಿದೆ.


ಹರ್ಯಾಣ(ಅ.13).  ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇ ಅನ್ನೋ ವಾತಾವರಣವಿತ್ತು. ಮತಗಟ್ಟೆ ಸಮೀಕ್ಷೆಗಳೂ ಇದನ್ನೇ ಹೇಳಿತ್ತು. ಆರಭಿಂಕ ಹಂತದ ಮತ ಎಣಿಕೆಯೂ ಇದೇ ದಾರಿಯಲ್ಲಿ ಸಾಗಿತ್ತು. ಆದರೆ ಫಲಿತಾಂಶ ಬಂದಾಗ ಕಾಂಗ್ರೆಸ್ ಮಕಾಲೆ ಮಲಗಿದ್ದರೆ, ಬಿಜೆಪಿ ಗೆದ್ದು ಬೀಗಿತ್ತು. ಇದೀಗ ಹರ್ಯಾಣ ಕಾಂಗ್ರೆಸ್ ಸೋಲಿಗೆ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ ಮುಖ್ಯಸ್ಥ ಗುರ್ನಾಮ್ ಸಿಂಗ್ ಚರುನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ಹರ್ಯಾಣ, ಪಂಜಾಬ್ ಸೇರಿದಂತೆ ದೇಶದಲ್ಲಿ ನಡೆದ ರೈತ ಪ್ರತಿಭಟನೆ ಹಿಂದಿನ ಷಡ್ಯಂತ್ರ ಬಯಲಾಗಿದೆ. ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ನಾವು ಸೃಷ್ಟಿಸಿದ್ದೆವು. ನಮ್ಮ ಹೋರಾಟದ ಮೂಲಕ ಕಾಂಗ್ರೆಸ್ ಅಲೆ ಸೃಷ್ಟಿಸಿದ್ದೆವು. ಆದರೆ ಕಾಂಗ್ರೆಸ್ ನಾಯಕ ಭೂಪಿಂದರ್ ಹೂಡ ಮೂರ್ಖ. ಇದರಿಂದ ಕಾಂಗ್ರೆಸ್ ಸೋತಿತು ಎಂದಿದ್ದಾರೆ.

ಹರಿಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಎಲ್ಲಾ ನಿರೀಕ್ಷೆಗಳ ನಡುವೆಯೂ ಕಾಂಗ್ರೆಸ್ ಸೋತಿದೆ. 90 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 37 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 48 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದೆ. ಕಾಂಗ್ರೆಸ್ ಸೋಲಿಗೆ ಕಾರಣವೇನು? ಈ ಪ್ರಶ್ನೆ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಾಮ್ ಸಿಂಗ್ ಚಾರುಣಿ ಅವರು ಸುದ್ದಿ ಸಂಸ್ಥೆ IANS ಜೊತೆ ಮಾತನಾಡಿ, ಇದಕ್ಕೆ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹುಡ್ಡಾ ಅವರನ್ನೇ ಹೊಣೆಗಾರರೆಂದು ಹೇಳಿದ್ದಾರೆ.

Tap to resize

Latest Videos

ಹರಿಯಾಣ ಸೋಲು ತೀವ್ರ ಬೇಸರ: ಮಲ್ಲಿಕಾರ್ಜುನ ಖರ್ಗೆ

ಭೂಪಿಂದರ್ ಹುಡ್ಡಾ ಮಹಾ ಮೂರ್ಖ

ಭೂಪಿಂದರ್ ಹುಡ್ಡಾ ಮಹಾ ಮೂರ್ಖ ಎಂದಿದ್ದಾರೆ. ಹರಿಯಾಣದಲ್ಲಿ ಕಾಂಗ್ರೆಸ್ ಪರವಾಗಿ ವಾತಾವರಣ ನಿರ್ಮಾಣ ಮಾಡಿದ್ದು ನಾವು. ಅದನ್ನು ರೈತ ವರ್ಗ ನಿರ್ಮಾಣ ಮಾಡಿತ್ತು ಎಂದು ಗುರ್ನಾಮ್ ಹೇಳಿದ್ದಾರೆ. ನನಗೆ (ಚುನಾವಣೆಗೆ ಸ್ಪರ್ಧಿಸಲು) ಟಿಕೆಟ್ ನೀಡಲಿಲ್ಲ. ಬೇರೆ ರೈತ ಮಿತ್ರರಿಗೆ ನೀಡಬಹುದಿತ್ತು. ಕನಿಷ್ಠ ಜನರಲ್ಲಿ ಬಿಜೆಪಿ ರೈತರ ಪರವಾಗಿಲ್ಲ ಎಂಬು ಭಾವನೆ ಮೂಡಿತ್ತು. ಇತ್ತ ಕಾಂಗ್ರೆಸ್ ಕೂಡ ರೈತರನ್ನು ಬೇರೆಡೆಗೆ ಸರಿಸುತ್ತಿದೆ ಎಂಬ ಭಾವನೆ ಮೂಡುತ್ತಿತ್ತು. ಆದ್ದರಿಂದ ನಾನು ಸ್ಪರ್ಧಿಸಲು ನಿಂತೆ, ಇತರ ಹಲವರು ಪ್ರಯತ್ನಿಸಿದರು, ಆದರೆ (ಚುನಾವಣೆಯಲ್ಲಿ ಗೆಲ್ಲಲು) ಸಾಧ್ಯವಾಗಲಿಲ್ಲ 

 

Kurukshetra, Haryana: Bhartiya Kisan Union President, Gurnam Singh Charuni says, "I believe that Bhupinder Hooda is quite foolish. The atmosphere created in Haryana in favor of the Congress was made by us...The biggest reason for the Congress's defeat, is that he did not make any… pic.twitter.com/WRNHmAr1Tw

— IANS (@ians_india)

 

 ಭೂಪಿಂದರ್ ಹುಡ್ಡಾ ಯಾರೊಂದಿಗೂ ಸಮನ್ವಯ ಮಾಡಿಕೊಳ್ಳಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡ ಗೆಲುವಿನ ವಿಶ್ವಾಸದಲ್ಲಿ ನಿರ್ಲಕ್ಷ್ಯ ಮಾಡಿತು. ಕಾಂಗ್ರೆಸ್ ಹೈಕಮಾಂಡ್‌ಗೆ ನಾನು ಹೇಳುವುದೇನೆಂದರೆ, ಭೂಪಿಂದರ್ ಹುಡ್ಡಾ ಅವರನ್ನು ಇನ್ನೂ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಡಿ. ಏಕೆಂದರೆ ಕಳೆದ 10 ವರ್ಷಗಳಲ್ಲಿ ಭೂಪಿಂದರ್ ಹುಡ್ಡಾ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಿಲ್ಲ. ರೈತ ಯೂನಿಯನ್ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸಿದೆ. ಮುಂದೆಯೂ ಹೀಗೆಯೇ ಮುಂದುವರಿದರೆ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ನಿರೀಕ್ಷಿಸಬೇಡಿ. ವಿರೋಧ ಪಕ್ಷದ ಉತ್ತಮ ಪಾತ್ರವನ್ನು ನಿರ್ವಹಿಸಬೇಕು. ಬಲಿಷ್ಠ ವಿರೋಧ ಪಕ್ಷ ಬೇಕು. ಹೋರಾಟಗಾರರನ್ನು ಮುಂದೆ ತರಬೇಕು ಎಂದು ಗುರ್ನಾಮ್ ಸಿಂಗ್ ಚುರಾನಿ ಹೇಳಿದ್ದಾರೆ. 

 ಹರ್ಯಾಣ ಚುನಾವಣೆ ಫಲಿತಾಂಶ ಅನಿರೀಕ್ಷಿತ: ರಾಹುಲ್‌ ಗಾಂಧಿ

click me!