ಕೋಪಗೊಂಡ ಹೆಂಡತಿಯೊಂದಿಗೆ ಬದುಕೋದು ಚಿತ್ರಹಿಂಸೆಯಂತೆ ಎಂದ ಹೈಕೋರ್ಟ್‌: ವಿಚ್ಛೇದನಕ್ಕೆ ಒಪ್ಪಿಗೆ

By BK AshwinFirst Published Jan 5, 2023, 11:46 PM IST
Highlights

ಮದುವೆಯಾದ ಕೆಲವು ದಿನಗಳ ನಂತರ, ತನ್ನ ಹೆಂಡತಿಯ ಕೋಪದ ವರ್ತನೆಯು ಬೆಳಕಿಗೆ ಬರಲು ಪ್ರಾರಂಭಿಸಿತು. ಮತ್ತು ಸಮಯ ಕಳೆದಂತೆ ತನ್ನ ಹೆಂಡತಿಯ ಕೋಪವು ಹೆಚ್ಚಾಗುತ್ತಾ ಹೋಯ್ತು. ತನ್ನ ಮಗಳು ಹುಟ್ಟಿದ ನಂತರ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು ಎಂದೂ ಅರ್ಜಿದಾರರು ಅವಲತ್ತುಕೊಂಡಿದ್ದರು.

ಪಂಜಾಬ್-ಹರ್ಯಾಣ ಹೈಕೋರ್ಟ್ (Punjab - Haryana High Court) ಇತ್ತೀಚೆಗೆ ವಿಚ್ಛೇದನ ಪ್ರಕರಣವೊಂದರ (Divorce Case) ವಿಚಾರಣೆಯ ಸಂದರ್ಭದಲ್ಲಿ 'ಮನೋರೋಗಿಯಂತೆ ಕೋಪಗೊಂಡ ಹೆಂಡತಿಯೊಂದಿಗೆ ಬದುಕುವುದು ಜೀವಮಾನದ ಚಿತ್ರಹಿಂಸೆಯಂತೆ (Suffering)' ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ಪತಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸಹ ಅಂಗೀಕರಿಸಿದೆ. 'ಪತಿ ಪರವಾಗಿ ವಿಚ್ಛೇದನ ಪ್ರಕರಣ ದಾಖಲಿಸಿದ ಕೂಡಲೇ ಪತ್ನಿ ವರದಕ್ಷಿಣೆಗೆ ಸಂಬಂಧಿಸಿದಂತೆ ಎಫ್‌ಐಆರ್‌ (FIR) ದಾಖಲಿಸಿರುವುದು ಆಕೆಯ ವರ್ತನೆಯನ್ನು ತೋರಿಸುತ್ತದೆ' ಎಂದೂ ನ್ಯಾಯಾಲಯ (Court) ಅಭಿಪ್ರಾಯಪಟ್ಟಿದೆ.

ಅರ್ಜಿಯಲ್ಲಿ, ಪತಿ ತಾನು ಅಮೃತಸರ ನಿವಾಸಿಯಾಗಿದ್ದು, 2011 ರಲ್ಲಿ ವಿವಾಹವಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಮದುವೆಯಾದ ಕೆಲವು ದಿನಗಳ ನಂತರ, ತನ್ನ ಹೆಂಡತಿಯ ಕೋಪದ ವರ್ತನೆಯು ಬೆಳಕಿಗೆ ಬರಲು ಪ್ರಾರಂಭಿಸಿತು. ಮತ್ತು ಸಮಯ ಕಳೆದಂತೆ ತನ್ನ ಹೆಂಡತಿಯ ಕೋಪವು ಹೆಚ್ಚಾಗುತ್ತಾ ಹೋಯ್ತು. ತನ್ನ ಮಗಳು ಹುಟ್ಟಿದ ನಂತರ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು ಎಂದೂ ಅರ್ಜಿದಾರರು ಅವಲತ್ತುಕೊಂಡಿದ್ದರು.

ಇದನ್ನು ಓದಿ: ಸತ್ಯ ಅಡಗಿಸಲಾಗದು: ಡಿವೋರ್ಸ್ ರೂಮರ್ ಮಧ್ಯೆ ಸಾನಿಯಾ ಪೋಸ್ಟ್ ವೈರಲ್

ಮೊದಲು ತನ್ನ ಹೆಂಡತಿ ಮನೆ ಕೆಲಸ ಮಾಡಲು ನಿರಾಕರಿಸಿದರು. ಕ್ರಮೇಣ ಆಕೆ ಸಾರ್ವಜನಿಕವಾಗಿ ಅರ್ಜಿದಾರ ಮತ್ತು ಅವರ ಕುಟುಂಬವನ್ನು ಕಪಾಳಮೋಕ್ಷ ಹಾಗೂ ಅವಮಾನ ಮಾಡಲು ಪ್ರಾರಂಭಿಸಿದರು. ಪತ್ನಿಯ ಈ ಕೃತ್ಯದಿಂದ ಬೇಸತ್ತ ಅರ್ಜಿದಾರರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ, ಪತ್ನಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದಾಗಿ ಎಫ್‌ಐಆರ್ ದಾಖಲಿಸಿದ್ದರು. ಇದಾದ ಬಳಿಕ ಇಬ್ಬರ ನಡುವೆ ಒಪ್ಪಂದ ಏರ್ಪಟ್ಟು ಎಫ್‌ಐಆರ್ ರದ್ದುಗೊಳಿಸಲಾಗಿತ್ತು. ಆದರೆ ನಮ್ಮ ಕುಟುಂಬವು ಮದುವೆಯ ಸಮಯದಲ್ಲಿ ಯಾವುದೇ ರೀತಿಯ ವರದಕ್ಷಿಣೆ ತೆಗೆದುಕೊಂಡಿಲ್ಲ ಎಂಬುದು ಪತಿಯ ವಾದವಾಗಿತ್ತು.

ಅಲ್ಲದೆ, ರಾಜಿಯಾದ ನಂತರವೂ ನನ್ನ ಹೆಂಡತಿಯ ನಡವಳಿಕೆ ಬದಲಾಗಲಿಲ್ಲ, ಮತ್ತು ಸಮಯ ಕಳೆದಂತೆ ಆಕೆ ಹೆಚ್ಚು ಹೆಚ್ಚು ಕ್ರೂರಳಾದಳು. ಒಂದು ದಿನ ಹೆಂಡತಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟು ತನ್ನ ತಾಯಿಯ ಮನೆಗೆ ಹೋಗಿದ್ದರು. ಅದರ ನಂತರ ಮತ್ತೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ ಮತ್ತು ಅವರ ಪತ್ನಿ ಮತ್ತೊಮ್ಮೆ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದರು ಎಂದೂ ಪತಿ ಕೋರ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ವಿಚ್ಛೇದನಕ್ಕೆ ಮುಂದಾದ ಕಿರುತೆರೆ ನಟಿ ರಚಿತಾ ಮಹಾಲಕ್ಷ್ಮಿ; ಹೆಣ್ಣು ಮಗು ದತ್ತು ಸುಳಿವು ಕೇಳಿ ನೆಟ್ಟಿಗರು ಶಾಕ್

ಹೆಂಡತಿ ಹೇಳಿದ್ದೇನು..?
ಮತ್ತೊಂದೆಡೆ, ಪತಿ ಮಾಡಿದ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಪತ್ನಿ, ಅರ್ಜಿದಾರರು ವರದಕ್ಷಿಣೆಗಾಗಿ ತನ್ನನ್ನು ಅವಮಾನಿಸುತ್ತಿದ್ದರು ಎಂದು ಹೇಳಿದ್ದಾರೆ. ಅಲ್ಲದೆ, ತಂದೆಯ ಆಸ್ತಿಯಲ್ಲಿ ಪಾಲು ನೀಡುವಂತೆ ಒತ್ತಡ ಹೇರುತ್ತಿದ್ದರು ಎಂದೂ ಆರೋಪಿಸಿದ್ದಾರೆ. ಬಳಿಕ, ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಪತ್ನಿ ಈ ರೀತಿ ಮಾಡುವುದು ಆಕೆಗೆ ಚಿಕಿತ್ಸೆ ನೀಡಬಹುದಾದ ಮಾನಸಿಕ ಕಾಯಿಲೆ ಇದೆ, ಆದರೆ ಗುಣಪಡಿಸಲು ಸಾಧ್ಯವಿಲ್ಲ ಎಂದು ಇಬ್ಬರು ವೈದ್ಯರು ನಂಬಿದ್ದಾರೆ.ಈ ಹಿನ್ನೆಲೆ, ಅಂತಹ ಮನೋವಿಕೃತ ಮತ್ತು ಕೋಪಗೊಂಡ ಸಂಗಾತಿಯೊಂದಿಗೆ ಬದುಕಲು ಅರ್ಜಿದಾರರನ್ನು ಒತ್ತಾಯಿಸುವುದು ಅವರ ಜೀವನದುದ್ದಕ್ಕೂ ಅವರನ್ನು ಹಿಂಸಿಸಿದಂತೆ ಎಂದು ಪಂಜಾಬ್‌ - ಹರ್ಯಾಣ ಹೈಕೋರ್ಟ್‌  ಹೇಳಿದೆ.

ಅಲ್ಲದೆ, ಎಲ್ಲರ ಮುಂದೆ ಪತಿ ಮತ್ತು ಅತ್ತೆಯನ್ನು ಅವಮಾನಿಸುವುದು ಕ್ರೌರ್ಯ. ಮತ್ತೊಂದೆಡೆ, ವಿಚ್ಛೇದನ ಅರ್ಜಿ ಸಲ್ಲಿಸಿದ ತಕ್ಷಣ ತನ್ನ ಹೆಂಡತಿಯ ವರದಕ್ಷಿಣೆಗಾಗಿ ಎಫ್‌ಐಆರ್ ದಾಖಲಿಸಿರುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: ಈ ಮೊಬೈಲ್‌ನಿಂದ ಮಕ್ಕಳು ಮಾತ್ರವಲ್ಲ, ದಾಂಪತ್ಯವೂ ಹಾಳು!

click me!