Covid Vaccine: ಇಂದಿನಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆ

By Girish Goudar  |  First Published Mar 16, 2022, 7:47 AM IST

*  ಗೊಂದಲವಾಗದಂತೆ ಪ್ರತ್ಯೇಕ ಸ್ಥಳ ನಿಗದಿಗೆ ಕೇಂದ್ರ ಸೂಚನೆ
*  ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ
*  60 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್‌ ಡೋಸ್‌
 


ನವದೆಹಲಿ(ಮಾ.16):  12-14ರ ವಯೋಮಾನದ ಮಕ್ಕಳು ಮತ್ತು ಯಾವುದೇ ಪೂರ್ವರೋಗ ಇಲ್ಲದ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡುವ ಅಭಿಯಾನಕ್ಕೆ ಇಂದಿನಿಂದ(ಮಾ.16) ದೇಶವ್ಯಾಪಿ ಚಾಲನೆ ಸಿಗಲಿದೆ. ಇದೇ ವೇಳೆ ವಿವಿಧ ವಯೋವರ್ಗಕ್ಕೆ ಬೇರೆ ಬೇರೆ ಲಸಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗುವುದನ್ನು ತಪ್ಪಿಸಲು 12-14ರ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಲು ಪ್ರತ್ಯೇಕ ಸ್ಥಳ ನಿಗದಿ ಮಾಡಿ ಮತ್ತು ಲಸಿಕಾಕರಣದಲ್ಲಿ ಭಾಗಿಯಾಗುವ ಸಿಬ್ಬಂದಿಗೆ ಈ ಬಗ್ಗೆ ತರಬೇತಿ ನೀಡಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.

ಈ ಲಸಿಕಾ ಅಭಿಯಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 12-14ರ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ ಮಾತ್ರ ನೀಡಲಾಗುತ್ತದೆ. ಮೂರನೇ ಡೋಸ್‌ಗೆ ಈ ಹಿಂದೆ ಪಡೆದ ಲಸಿಕೆಯನ್ನೇ ನೀಡಲಾಗುತ್ತದೆ.

Latest Videos

Covid 19 Crisis: ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ: ಭಾರತದಲ್ಲಿ ಕೇವಲ 2503 ಕೇಸು!

ಮಕ್ಕಳ ಲಸಿಕಾಕರಣ ಮಾರ್ಗಸೂಚಿ:

- 12-14ರ ವಯೋಮಾನದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ ಮಾತ್ರ ನೀಡಲಾಗುವುದು.
- ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ಲಸಿಕೆಗೆ ಹೆಸರು ನೋಂದಾಯಿಸಿಕೊಳ್ಳಬಹುದು.
- ಹೆಸರು ನೋಂದಾಯಿಸಿಕೊಂಡಿದ್ದರೂ, 12 ವರ್ಷ ತುಂಬಿರದಿದ್ದರೆ ಲಸಿಕೆ ನೀಡುವಂತಿಲ್ಲ.
- ಮೊದಲ ಡೋಸ್‌ ಪಡೆದ 28 ದಿನಗಳ ನಂತರ ಮಕ್ಕಳಿಗೆ 2ನೇ ಡೋಸ್‌ ನೀಡಲಾಗುವುದು.
- ಈ ವಯೋಮಾನದ ಮಕ್ಕಳಿಗೆ ನಿಗದಿತ ಕೇಂದ್ರಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು.
- ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ವಿತರಿಸಲಾಗುವುದು.

ಹಿರಿಯರ ಲಸಿಕಾಕರಣ ಮಾರ್ಗಸೂಚಿ:

- 60 ವರ್ಷದ ತುಂಬಿದ ಯಾವುದೇ ಪೂರ್ವ ರೋಗ ಇಲ್ಲದವರೂ ಲಸಿಕೆ ಪಡೆಯಬಹುದು
- ಮೊದಲ 2 ಡೋಸ್‌ ಯಾವ ಲಸಿಕೆ ಪಡೆಯಲಾಗಿತ್ತೋ ಈಗಲೂ ಅದನ್ನೇ ನೀಡಲಾಗುವುದು
- 2ನೇ ಡೋಸ್‌ ಪಡೆದು 9 ತಿಂಗಳು ಪೂರ್ಣಗೊಂಡವರಿಗೆ ಬೂಸ್ಟರ್‌ ಡೋಸ್‌ ಕೊಡಲಾಗುವುದು
- ಆನ್‌ಲೈನ್‌, ಆಫ್‌ಲೈನ್‌ ಮೂಲಕ ಇದಕ್ಕೆ ಹೆಸರು ನೋಂದಾಯಿಸಿಕೊಳ್ಳಬಹುದು.
- ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ವಿತರಿಸಲಾಗುವುದು

ಚೀನಾ ಸೇರಿ 6 ದೇಶದಲ್ಲಿ ಮತ್ತೆ ಕೋವಿಡ್‌ ಆರ್ಭಟ

ಬೀಜಿಂಗ್‌/ಸೋಲ್‌: ಚೀನಾ, ದಕ್ಷಿಣ ಕೊರಿಯಾ ಸೇರಿದಂತೆ ಆರು ದೇಶಗಳಲ್ಲಿ ಮತ್ತೆ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರತೊಡಗಿದೆ. ಚೀನಾದಲ್ಲಿ ಒಂದೇ ದಿನ ಕೇಸು ದ್ವಿಗುಣವಾಗಿದ್ದು, 13 ನಗರಗಳಲ್ಲಿ ಲಾಕ್‌ಡೌನ್‌ ಮಾಡಲಾಗಿದೆ. ಕೊರಿಯಾದಲ್ಲಿ ಒಂದೇ ದಿನ 3 ಲಕ್ಷಕ್ಕೂ ಹೆಚ್ಚು ಕೇಸು ಪತ್ತೆಯಾಗಿ, 293 ಜನ ಸಾವನ್ನಪ್ಪಿದ್ದಾರೆ. ವಿಯೆಟ್ನಾಂ, ಜರ್ಮನಿ, ಬ್ರಿಟನ್‌, ನೆದರ್‌ಲೆಂಡ್‌ನಲ್ಲೂ ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುತ್ತಿದೆ.

Coronavirus: ಖಾಸಗಿ ಆಸ್ಪತ್ರೆ ಕೋವಿಡ್‌ ಚಿಕಿತ್ಸೆ ದರ ಇಳಿಕೆ?

ಕರ್ನಾಟಕದಲ್ಲಿ ಒಮಿಕ್ರೋನ್‌ನ ಉಪತಳಿ ಹೆಚ್ಚಳ: ಮತ್ತೆ ಹೆಚ್ಚಿದ ಆತಂಕ

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 129 ಮಂದಿಯಲ್ಲಿ ಕೋವಿಡ್‌-19(Covid-19) ದೃಢಪಟ್ಟಿದೆ. ಇಬ್ಬರು ಮೃತರಾಗಿದ್ದಾರೆ. 206 ಮಂದಿ ಚೇತರಿಸಿಕೊಂಡಿದ್ದಾರೆ. ಈ ಮಧ್ಯೆ ಜಾಗತಿಕವಾಗಿ ಸೋಂಕು ಹೆಚ್ಚಲು ಕಾರಣವಾಗಿರುವ ಒಮಿಕ್ರೋನ್‌ನ(Omicron) ಉಪಪ್ರಬೇಧ ಬಿಎ2(BA2) ಭಾರಿ ಸಂಖ್ಯೆಯಲ್ಲಿ ಪತ್ತೆಯಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ(World Health Organization) ಈಗಾಗಲೇ ಬಿಎ2 ಪ್ರಬೇಧವನ್ನು ಆತಂಕಕಾರಿ ಎಂದು ಗುರುತಿಸಿದ್ದು ಚೀನಾ, ಡೆನ್ಮಾಕ್‌, ದಕ್ಷಿಣ ಕೊರಿಯಾ, ಬ್ರಿಟನ್‌ ಮುಂತಾದ ದೇಶಗಳಲ್ಲಿ ಮತ್ತೆ ಕೋವಿಡ್‌ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಒಮಿಕ್ರೋನ್‌ ನ ಬಿಎ1 ಉಪ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ರಾಜ್ಯದಲ್ಲಿ (Karnataka) ಜನವರಿ ತಿಂಗಳಲ್ಲೆ ಬಿಎ 2 ಪತ್ತೆ ಆಗಿದ್ದರೂ ಈಗ ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ ಒಟ್ಟು 1820 ಜಿನೊಮಿಕ್‌ ಸಿಕ್ವೆನ್ಸಿಂಗ್‌ ನಡೆದಿದ್ದು ಈ ಪೈಕಿ 1816 ಮಂದಿಯಲ್ಲಿ ಬಿಎ 2 ಪತ್ತೆಯಾಗಿದೆ. ಕೇವಲ 4 ಮಂದಿಯಲ್ಲಿ ಮಾತ್ರ ಬಿಎ1 ದೃಢ ಪಟ್ಟಿದೆ.
 

click me!