ಇಂದಿನಿಂದ ಆಪ್‌ ಕಾ ಪಂಜಾಬ್: ಸಿಎಂ ಆಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕಾರ

Published : Mar 16, 2022, 07:41 AM IST
ಇಂದಿನಿಂದ  ಆಪ್‌ ಕಾ ಪಂಜಾಬ್: ಸಿಎಂ ಆಗಿ ಭಗವಂತ್‌ ಮಾನ್‌ ಪ್ರಮಾಣವಚನ ಸ್ವೀಕಾರ

ಸಾರಾಂಶ

*ಪಂಜಾಬ್‌ ಸಿಎಂ ಆಗಿ ಮಾನ್‌ ಪ್ರಮಾಣವಚನ ಸ್ವೀಕಾರ *ಭಗತ್‌ಸಿಂಗ್‌ ಹುಟ್ಟೂರಿನಲ್ಲಿ ಪ್ರಮಾಣ ವಚನ *ಚನ್ನಿ, ಇತರೆ ನಾಯರಿಗೆ ಆಹ್ವಾನವಿಲ್ಲ: 3 ಲಕ್ಷ ಜನ ಭಾಗಿ *ಕೇಜ್ರಿವಾಲ್‌, ಆಪ್‌ ನಾಯಕರಿಗೆ ಮಾತ್ರ ಆಹ್ವಾನ

ಚಂಡೀಗಢ (ಮಾ. 16) : ಸ್ವಾತಂತ್ರ್ಯ ಯೋಧ ಭಗತ್‌ಸಿಂಗ್‌ ಹುಟ್ಟೂರು ಖಾಟ್ಕರ್‌ ಕಾಲನ್‌ನಲ್ಲಿ ಆಮ್‌ ಆದ್ಮಿ ಪಕ್ಷದ ನಾಯಕ ಭಗವಂತ್‌ ಮಾನ್‌ ಬುಧವಾರ ಪಂಜಾಬಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇದರೊಂದಿಗೆ ಇದೇ ಮೊದಲ ಬಾರಿ ಸಿಖ್‌ ನಾಡಿನಲ್ಲಿ ಆಪ್‌ ಅಧಿಕಾರಕ್ಕೇರಲಿದ್ದಾರೆ. ಇವರ ಜತೆ 18 ಸಚಿವರೂ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು, 3 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದೆ. ರಾಜಧಾನಿಯ ಹೊರಗೆ ಸಮಾರಂಭ ನಡೆಯುತ್ತಿರುವುದು ವಿಶೇಷ.

ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೆಹಲಿಯ ಮುಖ್ಯಮಂತ್ರಿಯಾದ ಆಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಹಾಗೂ ಪಕ್ಷದ ಸ್ಥಳೀಯ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಇತರೆ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಿಗಾಗಲೀ, ಕೇಂದ್ರದ ಸಚಿವರಿಗಾಗಲೀ ಪ್ರಮಾಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿಲ್ಲ. ಪಂಜಾಬಿನ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಚರಣ್‌ಜಿತ್‌ ಸಿಂಗ್‌ ಚನ್ನಿಗೂ ಸಮಾರಂಭಕ್ಕೆ ಆಹ್ವಾನ ನೀಡಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿThe Kashmir Files: ಎಲ್ಲರೂ ಕಾಶ್ಮೀರ್‌ ಫೈಲ್ಸ್‌ ಸಿನಿಮಾ ನೋಡಿ: ಮೋದಿ

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಚುನಾವಣೆ ಗೆದ್ದ 117 ವಿಧಾನಸಭಾ ಸದಸ್ಯರು ಹಾಗೂ ಆಮ್‌ ಆದ್ಮಿ ಪಕ್ಷದ ಸ್ಥಳೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಇದನ್ನುಹೊರತುಪಡಿಸಿ ಭಗವಂತ್‌ ಮಾನ್‌ ಅವರ ಕುಟುಂಬಸ್ಥರು ಹಾಗೂ ಆಪ್ತರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಪಂಜಾಬ್‌ ಮೂಲದ ಕೆಲವು ಕಲಾವಿದರಿಗೂ ಸಮಾರಂಭದಲ್ಲಿ ವಿಶೇಷ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. ಸೋಮವಾರ ಈ ಕುರಿತು ಮಾನ್‌ ವಿಡಿಯೋ ಬಿಡುಗಡೆ ಮಾಡಿದ್ದು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಂಜಾಬಿನ 3 ಕೋಟಿ ಜನತೆ ಭಾಗವಹಿಸಬೇಕು ಎಂದು ಜನರಿಗೆ ಕರೆ ನೀಡಿದ್ದರು.

ಇಂದು ಗೋವಾ ನೂತನ ಸಿಎಂ ಆಯ್ಕೆ ಸಾಧ್ಯತೆ: ಬುಧವಾರ ಗೋವಾದ ಶಾಸಕಾಂಗ ಪಕ್ಷದ ಸಭೆ ನಡೆಯುವ ನಿರೀಕ್ಷೆಯಿದ್ದು, ಮುಂದಿನ ಮುಖ್ಯಮಂತ್ರಿಯ ಆಯ್ಕೆ ನಡೆಯಲಿದೆ. ಈಗಾಗಲೇ ಬಿಜೆಪಿ ಕೇಂದ್ರ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮತ್ತು ಎಲ್‌. ಮುರುಗನ್‌ ಅವರನ್ನು ಗೋವಾದ ವೀಕ್ಷರನ್ನಾಗಿ ಕೇಂದ್ರ ಬಿಜೆಪಿ ನಿಯೋಜಿಸಿದ್ದು ಅವರ ಸಮ್ಮುಖದಲ್ಲೇ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಹಾಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹಾಗೂ ಸಚಿವ ವಿಶ್ವಜಿತ್‌ ರಾಣೆ ನಡುವೆ ಸ್ಪರ್ಧೆಯಿದೆ.

ಈ ನಡುವೆ, ಚುನಾವಣೆ ಫಲಿತಾಂಶ ಬಂದು ಸುಮಾರು 5 ದಿನ ಕಳೆದರೂ ಸಿಎಂ ಯಾರೆಂದು ಘೋಷಣೆ ಆಗದ ಕಾರಣ ಪ್ರಮೋದ್‌ ಸಾವಂತ್‌ ಮತ್ತು ಬಿಜೆಪಿ ನಾಯಕರು ಮಂಗಳವಾರ ಸಂಜೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅಮಿತ್‌ ಶಾ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಸರ್ಕಾರ ರಚಿಸುವ ಕುರಿತು ಚರ್ಚಿಸಿದರು.

ಇದನ್ನೂ ಓದಿ: ಹೇಗಿದ್ದೀರಿ? ಹೇಗೆ ತಲುಪಿದಿರಿ? ಸೌಖ್ಯವೇ? ಯುದ್ಧ ಭೂಮಿಯಿಂದ ಬಂದ ಭಾರತೀಯರನ್ನ ವಿಚಾರಿಸಿದ ಉಕ್ರೇನ್‌ ವಿವಿಗಳು

ಹೋಳಿ ಹಬ್ಬದ ನಂತರ ಗೋವಾದಲ್ಲಿ ಸರ್ಕಾರ ರಚನೆಯಾಗುವ ಸಾಧ್ಯತೆ ಕೂಡ ಇದೆ. ಸರ್ಕಾರ ರಚಿಸಲು ಬಿಜೆಪಿಗೆ 21 ಸ್ಥಾನಗಳ ಅಗತ್ಯವಿದ್ದು ಬಿಜೆಪಿ ಇಗಾಗಲೇ 20 ಸ್ಥಾನಗಳ ಬಲ ಹೊಂದಿದೆ ಜೊತೆಗೆ ಬಿಜೆಪಿಗೆ ಎಂಜಿಪಿಯ ಇಬ್ಬರು ಶಾಸಕರು ಮತ್ತು ಮೂವರು ಪಕ್ಷೇತರ ಅಭ್ಯರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ನಡುವೆ, ಗೋವಾದ 40 ನೂತನ ಶಾಸಕರು ಮಂಗಳವಾರ ಸದಸ್ಯತ್ವದ ಪ್ರಮಾಣವಚನ ಸ್ವೀಕರಿಸಿದರು.

4 ರಾಜ್ಯಗಳ ಸರ್ಕಾರ ರಚನೆ: ಮೋದಿ ನಿವಾಸದಲ್ಲಿ ಸಭೆ:  4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವ ಕಾರಣ ಅಲ್ಲಿನ ಸರ್ಕಾರ ರಚನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಂಗಳವಾರ ಸಭೆ ನಡೆಯಿತು. ಸಭೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮೊದಲಾದವರು ಭಾಗಿಯಾಗಿದ್ದರು. ಗೋವಾ ಹಾಗೂ ಉತ್ತರಾಖಂಡದಲ್ಲಿ ಮುಖ್ಯಮಂತ್ರಿ ಆಯ್ಕೆ ಜಟಿಲ ಆಗಿರುವ ಕಾರಣ ಸಭೆ ಗಹನ ಸಮಾಲೋಚನೆ ನಡೆಸಿತು ಎಂದು ಮೂಲಗಳು ಹೇಳಿವೆ.

ಉತ್ತರಾಖಂಡ ಬಗ್ಗೆ ಸಭೆ: ಉತ್ತರಾಖಂಡದಲ್ಲಿ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರ ಬಿಜೆಪಿಯ ಹಿರಿಯ ನಾಯಕರು ರಾಜ್ಯದ ಬಿಜೆಪಿ ನಾಯಕರೊಂದಿಗೆ ಮಂಗಳವಾರ ಸರಣಿ ಸಭೆಗಳನ್ನು ನಡೆಸಿದ್ದಾರೆ. ಬಿಜೆಪಿ ಗೆದ್ದ ರಾಜ್ಯಗಳಿಗೆ ವೀಕ್ಷರನ್ನು ನೇಮಕ ಮಾಡಿದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಉತ್ತರಾಖಂಡದ ನಿರ್ಗಮಿತ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಮದನ್‌ ಕೌಶಿಕ್‌ ಅವರೊಂದಿಗೆ ಸುಮಾರು ಎರಡೂವರೆ ಗಂಟೆಗಳ ಧೀರ್ಘ ಸಭೆ ನಡೆಸಿದ್ದಾರೆ.

ಉತ್ತರಾಖಂಡದಲ್ಲಿ ಬಿಜಪಿ ಸತತ 2ನೇ ಬಾರಿಗೆ ಜಯಗಳಿಸಿದ್ದರೂ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಸೋಲನ್ನನುಭವಿಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಹಲವು ಸಚಿವರನ್ನು ನಾಲ್ಕು ರಾಜ್ಯಗಳಿಗೆ ವೀಕ್ಷಕರನ್ನಾಗಿ ಸೋಮವಾರ ಬಿಜೆಪಿ ನೇಮಕ ಮಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ನಾವು ದೇಶಕ್ಕಾಗಿ, ನೀವು ಚುನಾವಣೆಗಾಗಿ: ಬಿಜೆಪಿ. ಮೋದಿ ವಿರುದ್ದ ಪ್ರಿಯಾಂಕಾ ಗಾಂಧಿ ವಾಗ್ದಾಳಿ