ಹೊಸ ಸಂಸತ್ ನಿರ್ಮಾಣ ಕಾರ್ಮಿಕರಿಗೆ ಲಸಿಕೆ, ಮಾಸಿಕ ಆರೋಗ್ಯ ತಪಾಸಣೆ ಕಡ್ಡಾಯ; ಪ್ರಧಾನಿ ಮೋದಿ!

By Suvarna News  |  First Published Sep 27, 2021, 6:28 PM IST
  • ಹೊಸ ಸಂಸತ್ ಕಟ್ಟಡ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದ ಮೋದಿ
  • ಭದ್ರತೆಗೆ ಪೂರ್ವ ಸೂಚನೆ ಇಲ್ಲದೆ ಕಾಮಾಗಾರಿ ಸ್ಥಳಕ್ಕೆ ಮೋದಿ ಭೇಟಿ
  • ನಿರ್ಮಾಣದಲ್ಲಿ ತೊಡಗಿರುವ ಎಲ್ಲಾ ಕಾರ್ಮಿಕರಿಗೆ ಕೋವಿಡ್‌ ಲಸಿಕೆ ಕಡ್ಡಾಯ
  • ಮಾಸಿಕ ಆರೋಗ್ಯ ತಪಾಸಣೆ ಖಾತರಿ ಪಡಿಸಲು ಪ್ರಧಾನಿ ಮೋದಿ ಸೂಚನೆ

ನವದೆಹಲಿ(ಸೆ.27): ಅಮೆರಿಕ ಪ್ರವಾಸದಿಂದ ಭಾರತಕ್ಕೆ ಮರಳಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಸೆ.26ರ ಸಂಜೆ ಅಚ್ಚರಿ ನೀಡಿದ್ದರು. ಯಾವುದೇ ಭದ್ರತೆಗೆ ಪೂರ್ವ ಸೂಚನೆ ನೀಡದೆ ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನ ಕಟ್ಟಡ(new Parliament building) ಕಾಮಾಗಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಮೋದಿ ಭೇಟಿ ಕಟ್ಟಡ ಕಾರ್ಮಿಕರಿಗೂ ಅಚ್ಚರಿ ನೀಡಿತ್ತು. ಸುಮಾರು ಒಂದು ಗಂಟೆಗಳ ಕಾಲ ಕಾಮಾಗಾರಿ ಸ್ಥಳದಲ್ಲಿ ಇದ್ದು, ಎಲ್ಲಾ ಮಾಹಿತಿ ಪಡೆದುಕೊಂಡರು. ಈ ಭೇಟಿ ಬಳಿಕ ಪ್ರಧಾನಿ ಮೋದಿ ಕಾರ್ಮಿಕರ(Workers) ಆರೋಗ್ಯ ಕುರಿತು ಅತೀವ ಕಾಳಜಿ ವಹಿಸಿದ್ದಾರೆ. ಇದಕ್ಕಾಗಿ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.

 

Prime Minister conducts on-site inspection and reviews ongoing construction work of new Parliament building

Digital archive to recognize the contribution of the workers towards the construction of the new building must be set up: PM

Read: https://t.co/vIryWfTl0M pic.twitter.com/56SvDCdkhb

— PIB India (@PIB_India)
ಭದ್ರತೆ ಇಲ್ಲದೆ ಹೊಸ ಸಂಸತ್ ಭವನ ಜಾಗಕ್ಕೆ ಪ್ರಧಾನಿ ಮೋದಿ ವಿಸಿಟ್! ಪೋಟೋಗಳು

Latest Videos

undefined

ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಕಾರ್ಮಿಕರೂ ಕೋವಿಡ್ ಪ್ರತಿರೋಧ ಲಸಿಕೆ(Covid Vaccine) ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಸೂಚನೆ ನೀಡಿದರು. ಎಲ್ಲಾ ಕಾರ್ಮಿಕರಿಗೆ ಮಾಸಿಕ ಆರೋಗ್ಯ ತಪಾಸಣೆ(health check ups) ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಕಾಮಗಾರಿಯಲ್ಲಿ ತೊಡಗಿರುವ ಎಲ್ಲಾ ನಿರ್ಮಾಣ ಕಾರ್ಮಿಕರ ಡಿಜಿಟಲ್ ಆರ್ಕೈವ್ ಅನ್ನು ಸ್ಥಾಪಿಸಬೇಕು, ಇದು ಅವರ ಹೆಸರು, ಅವರ ಮೂಲ ಸ್ಥಳದ ಹೆಸರು, ಅವರ ಚಿತ್ರ ಸೇರಿದಂತೆ ಅವರ ವೈಯಕ್ತಿಕ ವಿವರಗಳನ್ನು ಪ್ರತಿಬಿಂಬಿಸಬೇಕು ಮತ್ತು ನಿರ್ಮಾಣ ಕೆಲಸಕ್ಕೆ ಅವರ ಕೊಡುಗೆಯನ್ನು ಗುರುತಿಸಬೇಕು ಎಂದು ಪ್ರಧಾನಿ ಹೇಳಿದರು. ಇದಲ್ಲದೆ, ಈ ಚಾರಿತ್ರಿಕ ಕಾರ್ಯದಲ್ಲಿ ಕಾರ್ಮಿಕರ ಪಾತ್ರ ಮತ್ತು ಪಾಲ್ಗೊಳ್ಳುವಿಕೆಯ ಬಗ್ಗೆ ವಿವಿರಿಸುವ ಪ್ರಮಾಣಪತ್ರವನ್ನು ಎಲ್ಲಾ ಕಾರ್ಮಿಕರಿಗೆ ನೀಡಬೇಕು ಎಂದರು.

 

ಭದ್ರತೆ ಇಲ್ಲದೆ ಪ್ರಧಾನಿ ಮೋದಿ ದಿಢೀರ್ ಹೊಸ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಭೇಟಿ!
ರಾತ್ರಿ 8.45ಕ್ಕೆ ಪ್ರಧಾನಿ ಮೋದಿ ಹೊಸ ಸಂಸತ್ ಭವನ ನಿರ್ಮಾಣ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಭದ್ರತೆಗೆ ಯಾವುದೇ ಪೂರ್ವ ಸೂಚನೆ ನೀಡದೆ ದಿಢೀರ್ ಭೇಟಿ ನೀಡಿದ್ದಾರೆ. pic.twitter.com/4qpJoY13EK

— Asianet Suvarna News (@AsianetNewsSN)

ಅಮೆರಿಕಾದಲ್ಲಿ ಮೋದಿ ಮೋಡಿ, ಭಾರತ - ಅಮೆರಿಕಾ ಸ್ನೇಹ ನೋಡಿ ಪಾಕ್‌-ಚೀನಾಗೆ ಉರಿ!

 ಕಾಮಗಾರಿ ಪ್ರಗತಿಯನ್ನು ಖಚಿತಪಡಿಸಿಕೊಂಡ ಪ್ರಧಾನಮಂತ್ರಿಯವರು, ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಒತ್ತು ನೀಡುವಂತೆ ಸೂಚಿಸಿದರು. ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಅವರ ಯೋಗಕ್ಷೇಮವನ್ನು ಪ್ರಧಾನಿ ವಿಚಾರಿಸಿದರು. ಕಾರ್ಮಿಕರು ಪವಿತ್ರ ಮತ್ತು ಐತಿಹಾಸಿಕ ಕೆಲಸದಲ್ಲಿ ತೊಡಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದರು.

click me!