ಈಗ ದೇಶದಲ್ಲಿ ಕೋವಿಡ್ ಕಡಿಮೆ ಆಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬಂದಿದೆ. ಆದರೆ ದೆಹಲಿಯಲ್ಲಿ ಒಬ್ಬರು ಮಹಿಳೆ ಮಾತ್ರ ಈ ಕೋವಿಡ್ ದುರಂತದಿಂದ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ.
ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗವೂ ಹಲವರ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ಹಲವರ ಜೀವನ ಶೈಲಿಯೇ ಸಂಪೂರ್ಣ ಬದಲಾಗಿದೆ. ಈ ಸಾಂಕ್ರಾಮಿಕದ ವೇಳೆ ಹಲವರು ತಮ್ಮ ಪ್ರೀತಿಪಾತ್ರರನ್ನು ಬದುಕಿನ ಆಧಾರಸ್ತಂಭಗಳನ್ನು ಕಳೆದುಕೊಂಡು ಖಿನ್ನತೆಗೆ ಜಾರಿದ್ದರು. ಈಗ ದೇಶದಲ್ಲಿ ಕೋವಿಡ್ ಕಡಿಮೆ ಆಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬಂದಿದೆ. ಆದರೆ ದೆಹಲಿಯಲ್ಲಿ ಒಬ್ಬರು ಮಹಿಳೆ ಮಾತ್ರ ಈ ಕೋವಿಡ್ ದುರಂತದಿಂದ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ಅವರಿನ್ನು ಕೋವಿಡ್‌ಗೆ ಹೆದರುತ್ತಲೇ ಜೀವನ ಮಾಡುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕಕ್ಕೆ ಹೆದರಿ ಮಹಿಳೆಯೊಬ್ಬಳು ತನ್ನ 10 ವರ್ಷದ ಮಗನೊಂದಿಗೆ ಕಳೆದ ಮೂರು ವರ್ಷಗಳಿಂದ ಮನೆಯಲ್ಲೇ ಬಂಧಿಯಾದಂತಹ ವಿಚಿತ್ರ ಘಟನೆ ನಡೆದಿದೆ.
ಕೋವಿಡ್ ಬಗ್ಗೆ ತೀವ್ರವಾದ ಭಯವನ್ನು ಹೊಂದಿದ್ದ, ಗುರುಗ್ರಾಮದ (Gurugram) ಮಾರುತಿ ಕುಂಜ್ ( Maruti Kunj)ನಿವಾಸಿಯಾದ ಮಹಿಳೆ ಮುನ್‌ಮುನ್ ಮಝಿ (Munmun Majhi) ತನ್ನ 10 ವರ್ಷದ ಮಗನೊಂದಿಗೆ ಕಳೆದ ಮೂರು ವರ್ಷಗಳಿಂದ ಮನೆಯಲ್ಲೇ ಬಂಧಿಯಾಗಿ ವಾಸ ಮಾಡುತ್ತಿದ್ದಾಳೆ. ಅಲ್ಲದೇ ಈಕೆ ತನ್ನ ಗಂಡನಿಗೂ ತನ್ನ ಜೊತೆ ಇರುವುದಕ್ಕೆ ಕಳೆದ ಮೂರು ವರ್ಷಗಳಿಂದ ಅವಕಾಶ ಮಾಡಿಕೊಟ್ಟಿಲ್ಲ. ಕೋವಿಡ್ ಲಾಕ್‌ಡೌನ್ ತೆರವಾದ ನಂತರ ಕೆಲಸಕ್ಕೆ ದೂರ ಹೋದ ಗಂಡನನ್ನು ಆಕೆ ಹತ್ತಿರಕ್ಕೆ ಸೇರಿಸಿಕೊಂಡಿಲ್ಲ. ಈಕೆಯ ಗಂಡ ಸುಜನ್ ಮಾಝಿ ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿದ್ದು, ಅವರು ಹಲವು ಬಾರಿ ಪತ್ನಿಗೆ ತಿಳಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರ ಆಕೆ ಮಾತ್ರ ಅದೇ ಭಯದಲ್ಲಿ ಇದ್ದಿದ್ದರಿಂದ ಕೊನೆಗೆ ಗಂಡ ಸುಜನ್ ಪತ್ನಿಗೆ ಮನವರಿಕೆ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನೇ ಪತ್ನಿ ಇರುವ ಜಾಗಕ್ಕೆ ಕಳುಹಿಸಬೇಕಾಯಿತು.
undefined
'ಕೋವಿಡ್ ಫೈಲ್ಸ್' ರಿಲೀಸ್'ಗೆ ಸಿದ್ಧತೆ: ಬಿಜೆಪಿ ವಿರುದ್ಧ ಕಾಂಗ್ರೆಸ್ ಬ್ರಹ್ಮಾಸ್ತ್ರ
ಹೀಗಾಗಿ ಗಂಡ ಪತ್ನಿ ಇದ್ದ ಮನೆಯ ಸಮೀಪದಲ್ಲೇ ಬಾಡಿಗೆ ಮನೆಯೊಂದನ್ನು ಪಡೆದು ವಾಸವಿದ್ದರು. ಅಲ್ಲದೇ ಕೇವಲ ವಿಡಿಯೋ ಕಾಲ್‌ನಲ್ಲಿ ಮಾತ್ರವೇ ಗಂಡ ಹೆಂಡತಿ ಪರಸ್ಪರ ನೋಡಲು ಸಾಧ್ಯವಾಗಿತ್ತು. ಗಂಡ ಪತ್ನಿ ಹಾಗೂ ಮಗ ವಾಸವಿರುವ ಮನೆಯ ಬಾಡಿಗೆಯನ್ನು ಪಾವತಿಸುವ ಜೊತೆಗೆ ಅವರಿಗೆ ಅಗತ್ಯವಿದ್ದ ವಸ್ತುಗಳನ್ನು ತೆಗೆದುಕೊಂಡು ಬಂದು ಅವರ ಮನೆಯ ಬಾಗಿಲಿನ ಮುಂದೆ ಇರಿಸಿ ಹೋಗುತ್ತಿದ್ದರು. ಇಷ್ಟೇ ಅಲ್ಲದೇ ಗ್ಯಾಸ್ ಸಿಲಿಂಡರ್ ಮುಗಿದ ಮೇಲೆ ಗ್ಯಾಸ್ ಸಿಲಿಂಡರ್‌ನ್ನು ಕೂಡ ಬಳಸುವುದನ್ನು ನಿಲ್ಲಿಸಿದಳು. ಅದಕ್ಕೆ ಬದಲಾಗಿ ಇಂಡಕ್ಷನ್ ಸ್ಟವ್ (induction stove) ಅನ್ನು ಬಳಸಲು ಶುರು ಮಾಡಿದ್ದರು.
ಹೆಂಡತಿಯನ್ನು ಈ ಕೋವಿಡ್ ಭ್ರಮೆಯಿಂದ ಹೊರ ತರಲು ಪತಿ ಮಾಡಿದ ಹಲವು ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಪತಿ ಬೇರೆ ಯಾವುದೇ ಆಯ್ಕೆಗಳಿಲ್ಲದೇ ಅಧಿಕಾರಿಗಳ ನೆರವು ಪಡೆಯಲು ಬಯಸಿದರು ಸಹಾಯ ಪಡೆಯಲು ನಿರ್ಧರಿಸಿದರು.
ಕೋವಿಡ್‌ಗಿಂತ ಡೇಂಜರಸ್ ಕಾಯಿಲೆ ಪತ್ತೆ, ಮಾರ್ಬರ್ಗ್ ವೈರಸ್‌ನಿಂದ 9 ಮಂದಿ ಸಾವು
ಮಹಿಳೆಯ ಪತಿ ಮೊದಲಿಗೆ ಈ ವಿಚಾರದ ಬಗ್ಗೆ ಮನವಿ ಮಾಡಿದಾಗ ಇದು ಕೌಟುಂಬಿಕ ವಿಚಾರ ಎಂದು ನಾನು ಈ ಪ್ರಕರಣವನ್ನು ಮೊದಲಿಗೆ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಆ ವ್ಯಕ್ತಿ ತೀವ್ರ ಸಂಕಷ್ಟದಲ್ಲಿದ್ದನು. ಅವನು ನನ್ನ ಬಳಿ, ತನ್ನ ಹೆಂಡತಿ ಮತ್ತು ಮಗನೊಂದಿಗೆ ವೀಡಿಯೊ ಕರೆ ಮೂಲಕ ಮಾತನಾಡುವಂತೆ ಮನವಿ ಮಾಡಿದನು. ನಾನು ಮಗುವಿನೊಂದಿಗೆ ಮಾತನಾಡಿದ ನಂತರ ನನಗೆ ತುಂಬಾ ಬೇಸರವಾಯ್ತು ಏಕೆಂದರೆ ಆತ ಕಳೆದ ಮೂರು ವರ್ಷಗಳಿಂದ ಬಿಸಿಲಿನ ಮುಖ ನೋಡಿಲ್ಲ ಎಂದು ಚಕ್ಕರಪುರ ಪೊಲೀಸ್ ಹೊರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ (Praveen Kumar) ಹೇಳಿದರು.
ಪೊಲೀಸರು ಸ್ಥಳಕ್ಕೆ ಹೋದ ನಂತರವೂ ಮಹಿಳೆ ಹಲವು ಬಾರಿ ಮನವಿ ಮಾಡಿದರು ಬಾಗಿಲು ತೆರೆಯಲು ಒಪ್ಪಲಿಲ್ಲ. ಹೀಗಾಗಿ ಪೊಲೀಸರು ಬಾಗಿಲು ಮುರಿದು ಮಹಿಳೆ ಹಾಗೂ ಮಗುವನ್ನು ಹೊರ ತರಬೇಕಾಯಿತು.