India Fights Corona: ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ!

Published : Jan 18, 2022, 07:30 AM ISTUpdated : Jan 18, 2022, 09:14 AM IST
India Fights Corona: ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ!

ಸಾರಾಂಶ

* ಕೇಸ್‌ ಇಳಿಕೆ, ಪಾಸಿಟಿವಿಟಿ ಏರಿಕೆ * 2.58 ಲಕ್ಷ ಕೇಸು, 385 ಸಾವು * ಪಾಸಿಟಿವಿಟಿ ದರ ಶೇ.19.65ಕ್ಕೇರಿಕೆ * ಸಕ್ರಿಯ ಕೇಸು 16.5 ಲಕ್ಷಕ್ಕೆ: 7.5 ತಿಂಗಳ ಗರಿಷ್ಠ * 466 ಒಮಿಕ್ರೋನ್‌ ಪ್ರಕರಣ ದಾಖಲು

ನವದೆಹಲಿ(ಜ.18): ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 2,58,089 ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದು ಭಾನುವಾರದ 2.71 ಲಕ್ಷಕ್ಕಿಂತ 13 ಸಾವಿರದಷ್ಟುಕಡಿಮೆ ಆದರೂ ಪಾಸಿಟಿವಿಟಿ ದರ ಶೇ.3ರಷ್ಟುಏರಿದೆ.

ಭಾನುವಾರ ಶೇ.16.28ರಷ್ಟಿದ್ದ ಪಾಸಿಟಿವಿಟಿ ದರ ಸೋಮವಾರ ಶೇ. 19.65ಕ್ಕೆ ಏರಿದೆ. ಇದು ಆತಂಕಕಾರಿ ವಿಷಯ.

ಇದೇ ಅವಧಿಯಲ್ಲಿ ಕೇರಳದ 158 ಮತ್ತು ಪಶ್ಚಿಮ ಬಂಗಾಳದ 36 ಸೋಂಕಿತರು ಸೇರಿ 385 ಜನ ಸಾವೀಗೀಡಾಗಿದ್ದಾರೆ.

ಸಕ್ರಿಯ ಪ್ರಕರಣಗಳು 16.56 ಲಕ್ಷಕ್ಕೆ ಏರಿಕೆಯಾಗಿದ್ದು, ಇದು 230 ದಿನಗಳ ಗರಿಷ್ಠವಾಗಿದೆ. ಕಳೆದ 24 ಗಂಟೆಗಳಲ್ಲಿ 1.05 ಲಕ್ಷ ಸಕ್ರಿಯ ಪ್ರಕರಣಗಳು ಏರಿಕೆಯಾಗಿದೆ. ಗುಣಮುಖ ದರ ಶೇ.94.27ಕ್ಕೆ ಕುಸಿದಿದೆ.

ವಾರದ ಪಾಸಿಟಿವಿಟಿ ದರ ಶೇ.14.41ರಷ್ಟಿದೆ.ಒಟ್ಟು ಪ್ರಕರಣಗಳು 3.73 ಕೋಟಿಗೆ ಮತ್ತು ಒಟ್ಟು ಸಾವು 4.86 ಲಕ್ಷಕ್ಕೆ ಏರಿಕೆಯಾಗಿದೆ.

ದೇಶದಲ್ಲಿ ಈವರೆಗೆ 157.20 ಕೋಟಿ ಡೋಸ್‌ ವಿತರಿಸಲಾಗಿದೆ.

8209ಕ್ಕೇರಿದ ಒಮಿಕ್ರೋನ್‌ ಕೇಸು:

ಸೋಮವಾರ ದೇಶದಲ್ಲಿ 466 ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಒಮಿಕ್ರೋನ್‌ ಪ್ರಕರಣಗಳು 8,209ಕ್ಕೆ ಏರಿಕೆಯಾಗಿದೆ. 29 ರಾಜ್ಯಗಳಲ್ಲೂ ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 1,738 ಪ್ರಕರಣಗಳು ದಾಖಲಾಗಿದೆ. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ 1,672, ರಾಜಸ್ಥಾನದಲ್ಲಿ 1,276, ದೆಹಲಿಯಲ್ಲಿ 549, ಕರ್ನಾಟಕದಲ್ಲಿ 548 ಮತ್ತು ಕೇರಳದಲ್ಲಿ 536 ಪ್ರಕರಣಗಳು ದಾಖಲಾಗಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್