Oxfam India: ಟಾಪ್‌ 10 ಧನಿಕರ ಆಸ್ತಿಯಲ್ಲಿ ಎಲ್ಲ ಮಕ್ಕಳಿಗೆ 25 ವರ್ಷ ಉಚಿತ ಶಿಕ್ಷಣ!

By Kannadaprabha News  |  First Published Jan 18, 2022, 1:45 AM IST

ದೇಶವನ್ನು ಕೋವಿಡ್‌ ಸಾಂಕ್ರಾಮಿಕ ಆಕ್ರಮಿಸಿಕೊಂಡ 2 ವರ್ಷದಲ್ಲಿ ಭಾರತದಲ್ಲಿ ಬಿಲಿಯನೇರ್‌ಗಳ ಆಸ್ತಿ ಡಬಲ್‌ ಆಗಿದೆ. ಜೊತೆಗೆ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಶೇ.39ರಷ್ಟುಏರಿಕೆಯಾಗಿ 142ಕ್ಕೆ ತಲುಪಿದೆ.


ನವದೆಹಲಿ (ಜ.18): ದೇಶವನ್ನು ಕೋವಿಡ್‌ (COVID-19) ಸಾಂಕ್ರಾಮಿಕ ಆಕ್ರಮಿಸಿಕೊಂಡ 2 ವರ್ಷದಲ್ಲಿ ಭಾರತದಲ್ಲಿ (India) ಬಿಲಿಯನೇರ್‌ಗಳ (Billionaires) ಆಸ್ತಿ ಡಬಲ್‌ ಆಗಿದೆ. ಜೊತೆಗೆ ಬಿಲಿಯನೇರ್‌ಗಳ ಸಂಖ್ಯೆಯಲ್ಲಿ ಶೇ.39ರಷ್ಟುಏರಿಕೆಯಾಗಿ 142ಕ್ಕೆ ತಲುಪಿದೆ. ಭಾರತದ ಟಾಪ್‌ 10 ಶ್ರೀಮಂತರ ಆಸ್ತಿಯಲ್ಲಿ 25 ವರ್ಷಗಳ ಕಾಲ ದೇಶದ ಎಲ್ಲಾ ಮಕ್ಕಳಿಗೆ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು (Free Education) ನೀಡಬಹುದು ಎಂದು ಆಕ್ಸ್‌ಫಾಮ್‌ (Oxfam India) ಬಿಡುಗಡೆ ಮಾಡಿದ ವರದಿ ಹೇಳಿದೆ.

ದಾವೋಸ್‌ ಶೃಂಗದ (Davos Agenda Summit) ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿರುವ ವರದಿ ಅನ್ವಯ, ದೇಶದ 142 ಬಿಲಿಯನೇರ್‌ಗಳು ಒಟ್ಟು 53 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ. ಈ ಪೈಕಿ ಟಾಪ್‌ 98 ಜನರ ಆಸ್ತಿಯು, ದೇಶದ 55.5 ಕೋಟಿ ಕಡು ಬಡವರ ಆಸ್ತಿ (49 ಲಕ್ಷ ಕೋಟಿ ರು.)ಗೆ ಸಮ. ಇನ್ನು 142 ಬಿಲಿಯನೇರ್‌ಗಳ ಪೈಕಿ ಶೇ.10ರಷ್ಟು ಜನರಿಗೆ ಹೆಚ್ಚುವರಿ ಶೇ.1ರಷ್ಟು ತೆರಿಗೆ ವಿಧಿಸಿದರೆ ಅದು ದೇಶಕ್ಕೆ 17.7 ಲಕ್ಷ ಆಕ್ಸಿಜನ್‌ ಸಿಲಿಂಡರ್‌ಗಳನ್ನು ಒದಗಿಸಬಲ್ಲದು. ಇನ್ನು 98 ಅತಿ ಶ್ರೀಮಂತರ ಮೇಲೆ ಶೇ.1ರಷ್ಟು ತೆರಿಗೆ ಹಾಕಿದರೆ, ಅದು ವಿಶ್ವದಲ್ಲೇ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾದ ಆಯುಷ್ಮಾನ್‌ ಭಾರತ್‌ ಯೋಜನೆಯ (Ayushman Bharat) ಮುಂದಿನ 7 ವರ್ಷಗಳ ಆರ್ಥಿಕ ಅಗತ್ಯವನ್ನು ಪೂರೈಸಬಲ್ಲದು.

Tap to resize

Latest Videos

undefined

Mukesh Ambani: ಅಮೆರಿಕದಲ್ಲಿ ಅಂಬಾನಿ ಸಾಮ್ರಾಜ್ಯ, ಐಷಾರಾಮಿ ಹೋಟೆಲ್ ತೆಕ್ಕೆಗೆ!

ದೇಶದ ಟಾಪ್‌ 10 ಶ್ರೀಮಂತರು ನಿತ್ಯ 7.5 ಕೋಟಿ ರು.ನಂತೆ ವೆಚ್ಚ ಮಾಡಿದರೂ, ಅವರ ಪೂರ್ಣ ಆಸ್ತಿ ಕರಗಲು 84 ವರ್ಷ ಬೇಕಾಗುತ್ತದೆ ಎಂದು ವರದಿ ಹೇಳಿದೆ. ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಟಾಪ್‌ 10ರಷ್ಟು ಶ್ರೀಮಂತರು ಒಟ್ಟು ಆದಾಯದಲ್ಲಿ ಶೇ.45ರಷ್ಟು ಪಾಲು ಪಡೆದುಕೊಂಡರೆ, ಒಟ್ಟು ಜನಸಂಖ್ಯೆಯಲ್ಲಿ ಶೇ.50 ರಷ್ಟಿರುವ ಕಡುಬಡವರ ಸೇರಿದ್ದು ಶೇ.6ರಷ್ಟು ಆದಾಯ ಮಾತ್ರ ಎಂದು ವರದಿ ಹೇಳಿದೆ. ಇನ್ನು ಕೋವಿಡ್‌ ಅವಧಿಯಲ್ಲಿ ಉಂಟಾದ ಉದ್ಯೋಗ ನಷ್ಟದಲ್ಲಿ ಮಹಿಳೆಯರ ಪಾಲು ಶೇ.28 ರಷ್ಟಿತ್ತು. ಇವರು ತಮ್ಮ ಆದಾಯದಲ್ಲಿ ಶೇ.70ರಷ್ಟು ಕಳೆದುಕೊಂಡರು.

ಬೆಂಗ್ಳೂರಿನ ಆಕ್ಸ್‌ಫಾಮ್‌ ಸೇರಿ 6,000ಕ್ಕೂ ಹೆಚ್ಚು ಸಂಸ್ಥೆಗಳ ವಿದೇಶಿ ದೇಣಿಗೆ ಲೈಸೆನ್ಸ್‌ ರದ್ದು: ಬೆಂಗಳೂರಿನಲ್ಲಿ ಭಾರತೀಯ ಘಟಕದ ಕೇಂದ್ರ ಕಚೇರಿ ಹೊಂದಿರುವ ಆಕ್ಸ್‌ಫಾಮ್‌,ಭಾರತೀಯ ವೈದ್ಯಕೀಯ ಸಂಸ್ಥೆ (IMA), ಐಐಟಿ ದೆಹಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನೆಹರು ಮೆಮೋರಿಯಲ್‌ ಮ್ಯೂಸಿಯಂ ಮತ್ತು ಗ್ರಂಥಾಲಯ ಸೇರಿದಂತೆ 6000ಕ್ಕೂ ಹೆಚ್ಚು ಸರ್ಕಾರೇತರ ಲಾಭರಹಿತ ಸಂಸ್ಥೆಗಳ (NGO) ವಿದೇಶಿ ದೇಣಿಗೆ ಪಡೆಯುವ ಲೈಸೆನ್ಸ್‌ ರದ್ದುಪಡಿಸಲಾಗಿದೆ.

ಈ ಪೈಕಿ 5789 ಎನ್‌ಜಿಒಗಳು (NGO's) ನವೀಕರಣಕ್ಕೆ ಅರ್ಜಿ ಸಲ್ಲಿಸದ ಕಾರಣ ಅವುಗಳ ಮಾನ್ಯತೆ ರದ್ದಾಗಿದ್ದರೆ, 179 ಎನ್‌ಜಿಒಗಳ ಮಾನ್ಯತೆಯನ್ನು ಸರ್ಕಾರವೇ ರದ್ದುಗೊಳಿಸಿದೆ. ಆಕ್ಸ್‌ಫಾಮ್‌ ಇಂಡಿಯಾ (Oxfam India) ಭಾರತದಲ್ಲಿ (India) ದಲಿತರು (Dalit), ಮಹಿಳೆಯರು (Woman), ಮುಸ್ಲಿಮರ (Muslim) ಏಳ್ಗೆಗೆ ಕುರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಬ್ರಿಟನ್‌ (Britain) ಮೂಲದ ಈ ಸಂಸ್ಥೆ ಬಡತನ ಕುರಿತ ಜಾಗತಿಕ ವರದಿಯನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ.

ಬೆಜೋಸ್‌, ಮಸ್ಕ್‌ ಸಾಲಿಗೆ ರಿಲಯನ್ಸ್‌ ಒಡೆಯ: 100 ಶತಕೋಟಿ ಡಾಲರ್‌ ಕ್ಲಬ್‌ಗೆ ಅಂಬಾನಿ!

ವಿದೇಶಿ ದೇಣಿಗೆ ನಿರ್ಬಂಧ ಕಾಯ್ದೆ (FCRA) ಯ ಅನುಸಾರ ಯಾವುದೇ ಸಂಸ್ಥೆಗಳು ಅಥವಾ ಎನ್‌ಜಿಒಗಳು ವಿದೇಶಿ ದೇಣಿಗೆ ಪಡೆಯಲು ಪರವಾನಗಿ ಹೊಂದಿರುವುದು ಮತ್ತು ಅವಧಿಯ ನಂತರ ಅದನ್ನು ನವೀಕರಣ ಮಾಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಮಾನ್ಯತೆ ಅವಧಿ ಮುಗಿದಿದ್ದ ಎನ್‌ಜಿಒಗಳಿಗೆ ಸರ್ಕಾರ ಪೂರ್ವ ಮಾಹಿತಿ ರವಾನಿಸಿತ್ತು. ಅದರ ಹೊರತಾಗಿಯೂ ಅವುಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವುಗಳಿಗೆ ನೀಡಿದ್ದ ಮಾನ್ಯತೆ ಸ್ವಯಂ ರದ್ದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.  ದೇಶದಲ್ಲಿ 22,762 ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿ ನೋಂದಣಿಯಾಗಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 16,829ಕ್ಕೆ ಕುಸಿದಿದೆ.

click me!