'ಅಮಿತ್ ಶಾ ಕಾಣೆಯಾಗಿದ್ದಾರೆ': ನಾಪತ್ತೆ ದೂರು ಕೊಟ್ಟ ಕಾಂಗ್ರೆಸ್

By Suvarna NewsFirst Published May 13, 2021, 5:47 PM IST
Highlights
  • ಅಮಿತ್ ಶಾ ಕಾಣೆಯಾಗಿದ್ದಾರೆ ಎಂದು ಕಾಂಗ್ರೆಸ್ ವರದಿ
  • ಕೊರೋನಾ ನಂತ್ರ ಅಮಿತ್ ಶಾ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪ

ದೆಹಲಿ(ಮೇ.13): ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಣೆಯಾಗಿದ್ದಾರಾ..?ಇಲ್ಲ, ಆದರೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಮತ್ತು ಟ್ವಿಟರ್ ಪ್ರಕಾರ, ಅವರು 'ಕಾಣೆಯಾಗಿದ್ದಾರೆ'.

'ಅಮಿತ್ ಶಾ ಮಿಸ್ಸಿಂಗ್' ಎಂಬ ಹ್ಯಾಶ್‌ಟ್ಯಾಗ್ ಗುರುವಾರ ಬೆಳಗ್ಗೆ 5,000 ಕ್ಕೂ ಹೆಚ್ಚು ಟ್ವೀಟ್‌ಗಳೊಂದಿಗೆ ಟ್ವಿಟರ್‌ನಲ್ಲಿ ಟ್ರೆಂಡ್ ಆಗುತ್ತಿದೆ. ದೇಶವು COVID-19 ಎರಡನೇ ಅಲೆ ಎದುರಿಸುತ್ತಿರುವಾಗ ಗೃಹಸಚಿವರು ಕಾಣೆಯಾಗಿದ್ದಾರೆ ಎಂದು ಸೂಚಿಸಿ ಅನೇಕರು ಟ್ವೀಟ್ ಮಾಡಿದ್ದಾರೆ.

ಬರೋಬ್ಬರಿ 14 ಸಲ ಪ್ಲಾಸ್ಮಾ ದಾನ ಮಾಡಿದ ವ್ಯಕ್ತಿ..!

ಬುಧವಾರ ದೆಹಲಿ ಪೊಲೀಸರು ಎನ್‌ಎಸ್‌ಯುಐ ಕಚೇರಿಗೆ ಭೇಟಿ ನೀಡಿದ್ದು, ಅದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಅವರು ನೀಡಿದ ದೂರಿನ ಮೇರೆಗೆ ಅಮಿತ್ ಶಾ ಸಾಂಕ್ರಾಮಿಕ ರೋಗದ ನಡುವೆ ನಾಪತ್ತೆಯಾಗಿದ್ದಾರೆ ಮತ್ತು ನಾಗರಿಕರು ಬಿಕ್ಕಟ್ಟಿನಲ್ಲಿದ್ದಾರೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿ ಮುಖಂಡರು, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ರಾಜಕಾರಣಿಗಳು ರಾಷ್ಟ್ರದ ಸೇವೆ ಮಾಡಬೇಕಿದೆ ಮತ್ತು ಕಷ್ಟದ ಪರಿಸ್ಥಿತಿಯ್ಲಿ ಓಡಿಹೋಗಬಾರದು ಎಂದು ಹೇಳಿದ್ದಾರೆ.

click me!