ಕೊರೋನಾ ವೈರಸ್, ಲಾಕ್‌ಡೌನ್ ಬಗ್ಗೆ ಇಷ್ಟೆಲ್ಲಾ ಚರ್ಚೆಯಾಗುತ್ತಿದ್ದರೂ ಗೃಹ ಸಚಿವ ಅಮಿತ್ ಶಾ ಮಾತ್ರ ಮಾಧ್ಯಮದೆದುರು ಕಾಣಿಸುತ್ತಿಲ್ಲ. ಏನು ಮಾಡುತ್ತಿರಬಹುದು ಎಂಬ ಸಹಜವಾದದ್ದು! ಏನ್ಮಾಡ್ತಿದ್ದಾರೆ ನೋಡಿ!
ಮೋದಿ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಆರ್ಟಿಕಲ್ 370 ತಿದ್ದುಪಡಿ, ನಾಗರಿಕ ಕಾಯ್ದೆ ತಿದ್ದುಪಡಿ ಹೀಗೆ ಯಾವುದೇ ವಿವಾದಾತ್ಮಕ ವಿಷಯದಲ್ಲಿ ಸರ್ಕಾರದ ಮುಖ ಆಗಿದ್ದವರು ಛೋಟಾ ಭಾಯಿ ಅಮಿತ್ ಶಾ.
ಆದರೆ ಕೊರೋನಾ ಬಂದಿದ್ದೇ ಬಂದಿದ್ದು ಒಮ್ಮೆಲೇ ಅಮಿತ್ ಶಾ ತೆರೆಯ ಹಿಂದೆ ಸರಿದು ಕೆಲಸ ಮಾಡುತ್ತಿದ್ದರೆ, ಏಕ್‌ದಂ ಮೋದಿ ಮಾತ್ರ ತೆರೆಯ ಮುಂದೆ ಬಂದಿದ್ದಾರೆ. ಜನತಾ ಕರ್ಫ್ಯೂ ಇರಲಿ, ಲಾಕ್‌ಡೌನ್ ಇರಲಿ, ಡಾಕ್ಟರ್ ಹಾಗೂ ನರ್ಸ್ ಸೇರಿದಂತೆ ಕೊರೋನಾ ಸಾಹಸಿಗಳ ಜೊತೆ ನೇರ ಸಂವಾದ ನಡೆಸುವುದಿರಲಿ ಎಲ್ಲ ಸಂದರ್ಭದಲ್ಲೂ ಕಾಣಿಸಿಕೊಳ್ಳುತ್ತಿರುವವರು ಸ್ವಯಂ ಮೋದಿ ಅವರೇ.
21 ದಿನದ ಲಾಕ್‌ಔಟ್ ನಂತರ ಮುಂದೇನು? ಮೋದಿ ಮುಂದಿನ ಅಸ್ತ್ರವೇನು?
ಹಾಗೆ ನೋಡಿದರೆ ಅಮಿತ್ ಶಾ ಹಗಲು-ರಾತ್ರಿ ಕೆಲಸ ಮಾಡುತ್ತಾ ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರ ಜೊತೆ ಸಂಪರ್ಕದಲ್ಲಿದ್ದಾರೆ. ಆದರೆ ಮಾಧ್ಯಮಗಳ ಮುಂದೆ ಬರುತ್ತಿಲ್ಲ. ಇದಕ್ಕೆ ಕಾರಣ ಮೋದಿ ಅವರಿಗೆ ಇರುವ ಮನೆಯ ಹಿರಿಯಣ್ಣನ ಇಮೇಜ್. ಶಾ ಅವರನ್ನು ಇಷ್ಟಪಡುವವರು ಕಟ್ಟಾಬಿಜೆಪಿ ಮತದಾರರು. ಹೀಗಾಗಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಲೇಬೇಕಾದ ಇಂದಿನ ಸ್ಥಿತಿಯಲ್ಲಿ ಮೋದಿ ಅವರೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಸಫಲರಾಗಲಿ, ವಿಫಲರಾಗಲಿ ಇಬ್ಬರೂ ತಂತ್ರ ಹೆಣೆದೇ ಯುದ್ಧಕ್ಕೆ ಹೊರಡುತ್ತಾರೆ ಅನ್ನೋದೇನೋ ನಿಜ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿದಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ