ನೆರವು ಕೇಳಿದವನ ಮನೆಗೆ 2 ಗಂಟೇಲಿ ಅಕ್ಕಿ ಕಳುಹಿಸಿದ ಪ್ರಧಾನಿ ಮೋದಿ

By Kannadaprabha News  |  First Published Apr 3, 2020, 10:56 AM IST

ಲಾಕ್‌ಡೌನ್‌ ವೇಳೆ ಒಂದೊತ್ತಿನ ಊಟಕ್ಕೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಯುವಕನೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಪರಿಣಾಮ ಅಕ್ಕಿ ಪೂರೈಕೆಯಾದ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.


ತಿರುವನಂತಪುರ (ಏ. 03):  ಲಾಕ್‌ಡೌನ್‌ ವೇಳೆ ಒಂದೊತ್ತಿನ ಊಟಕ್ಕೂ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಯುವಕನೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆ ಪರಿಣಾಮ ಅಕ್ಕಿ ಪೂರೈಕೆಯಾದ ಅಚ್ಚರಿಯ ಘಟನೆ ಕೇರಳದಲ್ಲಿ ನಡೆದಿದೆ.

ಕಲ್ಲಿಕೋಟೆ ಜಿಲ್ಲೆಯ ಮಣಿಯೂರು ಗ್ರಾಮದ ವೇಣುಗೋಪಾಲ್‌ ಎಂಬಾತನೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡುವ ಮೂಲಕ ಮನೆ ಬಾಗಿಲಿಗೇ ಅಕ್ಕಿ ತರಿಸಿಕೊಂಡ ಯುವಕ. ಇಡೀ ದೇಶವೇ ಕೊರೋನಾ ಲಾಕ್‌ಡೌನ್‌ಗೆ ಒಳಗಾದಾಗ ಕೇರಳ ಸರ್ಕಾರ ಜನ ಸಾಮಾನ್ಯರಿಗೆ ಮನೆ ಬಾಗಿಲಿಗೇ ಪಡಿತರ ವಿತರಿಸುವುದಾಗಿ ಭರವಸೆ ನೀಡಿತ್ತು.

Tap to resize

Latest Videos

ಆದರೆ, ಕೇರಳದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ವಿಧಿಸಲಾದ ಪರಿಣಾಮ ಈ ಯುವಕನಿಗೆ ಅಕ್ಕಿ ಸೇರಿದಂತೆ ಯಾವೊಂದು ಆಹಾರ ಪರಿಕರಗಳು ವಿತರಣೆಯಾಗಲಿಲ್ಲ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಏನೂ ಪ್ರಯೋಜನವಾಗಲಿಲ್ಲ. ಹೀಗಾಗಿ, ಈ ಯುವಕ ಕೊನೆಗೆ ಇ ಮೇಲ್‌ ಮೂಲಕ ಪ್ರಧಾನಿ ಕಾರ್ಯಾಲಯದ ಕದ ತಟ್ಟಿದ. ಈ ಘಟನೆ ನಡೆದು 2 ಗಂಟೆಯಲ್ಲೇ ಕೇರಳದ ಸಿಬ್ಬಂದಿ ಮೂಲಕ ಯುವಕನ ಮನೆಗೇ ಪ್ರಧಾನಿ ಕಾರ್ಯಾಲಯ ಪಡಿತರ ಪೂರೈಸಿದೆ.

click me!