ನವದೆಹಲಿ (ಜೂ.11): ಗುರುವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 94052 ಹೊಸ ಸೋಂಕಿತರು ಪತ್ತೆಯಾಗಿದ್ದರೆ, 6148 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸತತ ಮೂರನೇ ದಿನವೂ ದೇಶದಲ್ಲಿ ಹೊಸ ಸೋಂಕಿನ ಪ್ರಮಾಣ ಲಕ್ಷಕ್ಕಿಂತ ಕೆಳಗೇ ದಾಖಲಾದಂತೆ ಆಗಿದೆ.
ಈ ನಡುವೆ ಬಿಹಾರ ಸರ್ಕಾರ, ರಾಜ್ಯದಲ್ಲಿ ಈವರೆಗೆ ಸಂಭವಿಸಿದ ಸಾವಿನ ಪ್ರಕರಣವನ್ನು ಗುರುವಾರ ದಿಢೀರನೆ 5500ರಿಂದ 9429ಕ್ಕೆ ಏರಿಸಿದೆ. ಹೀಗಾಗಿ ದೇಶದಲ್ಲಿ ಸಾವಿನ ಸಂಖ್ಯೆ ದಾಖಲೆಯ 6148ಕ್ಕೆ ತಲುಪಿದೆ.
undefined
ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆಯನ್ನು ಸೂಕ್ತ ಪ್ರಮಾಣದಲ್ಲಿ ನೀಡುತ್ತಿಲ್ಲ. ಈ ಕುರಿತು ತನಿಖೆ ನಡೆಸಬೇಕು ಎಂದು ಪಟನಾ ಹೈಕೋರ್ಟ್ ಬುಧವಾರವಷ್ಟೇ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ಅದರ ಬೆನ್ನಲ್ಲೇ ರಾಜ್ಯ ಸರ್ಕಾರ ಸಾವಿನ ಸಂಖ್ಯೆಯನ್ನು ದಿಢೀರನೆ 5500ರಿಂದ 9429ಕ್ಕೆ ಹೆಚ್ಚಿಸಿದೆ. ಅಂದರೆ ಒಂದೇ ದಿನ 3929ರಷ್ಟುಹೆಚ್ಚಳ ಮಾಡಿದೆ. ಈ ಸಾವು ಸಂಭವಿಸಿದ ಅವಧಿ ಯಾವುದು ಎಂಬುದನ್ನು ಸರ್ಕಾರ ಬಹಿರಂಗಪಡಿಸಿಲ್ಲ.
8 ಡಿಸಿಗಳೊಂದಿಗೆ ಸಿಎಂ ಸಂವಾದ, ಈ ಜಿಲ್ಲೆಗಳಲ್ಲಿ ರೂಲ್ಸ್ ಮತ್ತಷ್ಟು ಕಟ್ಟುನಿಟ್ಟು
ಇನ್ನು ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2.91 ಕೋಟಿಗೆ, ಸಾವಿನ ಸಂಖ್ಯೆ 3.59 ಲಕ್ಷಕ್ಕೆ, ಸಕ್ರಿಯ ಪ್ರಕರಣಗಳ ಸಂಖ್ಯೆ 11.67 ಲಕ್ಷಕ್ಕೆ, ಚೇತರಿಕೆ ಪ್ರಮಾಣ ಶೇ.94.77ಕ್ಕೆ, ದೈನಂದಿನ ಪಾಸಿಟಿವಿಟಿ ಪ್ರಮಾಣ ಶೇ.4.69ಕ್ಕೆ ತಲುಪಿದೆ.