ರಷ್ಯಾ ಲಸಿಕೆ ಸ್ಪುಟ್ನಿಕ್‌ V ಒಂದು ಡೋಸ್‌ಗೆ ಭಾರತದಲ್ಲಿ 995 ರೂ.

By Suvarna NewsFirst Published May 14, 2021, 1:40 PM IST
Highlights
  • ಭಾರತದಲ್ಲಿ ಮೊದಲ ಸ್ಪುಟ್ನಿಕ್ ವಿ ಲಸಿಕೆ 
  • ಹೈದರಾಬಾದ್ ನಲ್ಲಿ ಮೊದಲ ಡೋಸ್ ಬಳಕೆ

ದೆಹಲಿ(ಮೇ.14): ರಷ್ಯಾದ ಕೊರೋನಾ ಲಸಿಕೆ ಸ್ಪಟ್ನಿಕ್ ವಿ ಮೊದಲ ಡೋಸ್‌ನ್ನು ಹೈದರಾಬದ್‌ನಲ್ಲಿ ನೀಡಲಾಗಿದೆ. ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ಲಾಂಚ್ ಮಾಡಲಾಗಿದ್ದು ಲಸಿಕೆಯ ಮೊದಲ ಡೋಸ್ ಹೈದರಾಬಾದ್‌ನಲ್ಲಿ ನೀಡಲಾಗಿದೆ ಎಂದು ಡ್ರಗ್ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ತಿಳಿಸಿದೆ.

ಸ್ಪುಟ್ನಿಕ್ ವಿ ಲಸಿಕೆ ಸರಕು ಮೇ 1 ರಂದು ಭಾರತಕ್ಕೆ ಬಂದಿಳಿದಿದೆ. 2021 ರ ಮೇ 13 ರಂದು ಕಸೌಲಿಯ ಕೇಂದ್ರ ಔಷಧ ಪ್ರಯೋಗಾಲಯದಿಂದ ಅನುಮತಿಯನ್ನು ಪಡೆದಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಲಸಿಕೆ ಆಮದು ನಿರೀಕ್ಷಿಸಲಾಗಿದೆ. ನಂತರ ಸ್ಪುಟ್ನಿಕ್ ವಿ ಲಸಿಕೆ ಪೂರೈಕೆ ಭಾರತೀಯ ಉತ್ಪಾದನಾ ಪಾಲುದಾರರಿಂದ ಪ್ರಾರಂಭವಾಗಲಿದೆ ಎಂದು ಅದು ಹೇಳಿದೆ.

ಇತರ ಉತ್ಪಾದಕರೊಂದಿಗೆ ಕೊವ್ಯಾಕ್ಸಿನ್ ಫಾರ್ಮುಲಾ ಶೇರ್ ಮಾಡಲಿದೆ ಭಾರತ್ ಬಯೋಟೆಕ್

ಲಸಿಕೆಯ ಆಮದು ಪ್ರಮಾಣವು ಪ್ರಸ್ತುತ ಗರಿಷ್ಠ 948 ರೂಪಾಯಿ ಇದ್ದು, ಪ್ರತಿ ಡೋಸ್‌ಗೆ 5 ಶೇಕಡಾ ಜಿಎಸ್‌ಟಿ ಇದೆ. ಸ್ಥಳೀಯ ಪೂರೈಕೆ ಪ್ರಾರಂಭವಾದಾಗ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

click me!