ಬುಧವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 71,365 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 1217 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈ ವೈರಸ್ ಇಲ್ಲಿಯವರೆಗೆ 5,05,279 ಮಂದಿಯನ್ನು ಬಲಿಪಡೆದಿದೆ.
ನವದೆಹಲಿ (ಫೆ.10): ಬುಧವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 71,365 ಮಂದಿಗೆ ಕೋವಿಡ್ (Covid19) ದೃಢಪಟ್ಟಿದ್ದು, 1217 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಈ ವೈರಸ್ ಇಲ್ಲಿಯವರೆಗೆ 5,05,279 ಮಂದಿಯನ್ನು ಬಲಿಪಡೆದಿದೆ.
ಆದರೆ ಸಕ್ರಿಯ ಸೋಂಕಿತರ ಸಂಖ್ಯೆ 8,92,828ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬುಧವಾರ ನೀಡಿದೆ. ಒಟ್ಟಾರೆ ಸೋಂಕಿತರ ಪೈಕಿ ಸಕ್ರಿಯ ಸೋಂಕಿತರ ಪ್ರಮಾಣ ಶೇ.2.11ಕ್ಕೆ, ದೈನಂದಿನ ಪಾಸಿಟಿವಿಟಿ ದರ ಶೇ.4.54ಕ್ಕೆ ಮತ್ತು ವಾರದ ಪಾಸಿಟಿವಿಟಿ ದರ ಶೇ.7.57ಕ್ಕೆ ಕುಸಿದಿದೆ. ಇದೇ ವೇಳೆ ದೇಶಾದ್ಯಂತ ಕೋವಿಡ್ ಲಸಿಕೆಯ (Covid Vaccine) 170.87 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.
undefined
Covid Crisis: 1.07 ಲಕ್ಷ ಹೊಸ ಕೋವಿಡ್ ಕೇಸು: 1 ತಿಂಗಳ ಕನಿಷ್ಠ
ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ಬಳಕೆಗೆ ಕೇಂದ್ರ ಅಸ್ತು: ಭಾರತದಲ್ಲಿ ಕೋವಿಡ್ 3ನೇ ಅಲೆ ಇಳಿಮುಖವಾಗುತ್ತಿದೆ. ಈ ನಡುವೆ ರಷ್ಯಾದ ಸ್ಪುಟ್ನಿಕ್ ಲೈಟ್ ಸಿಂಗಲ್ ಡೋಸ್ (Pputnik Light Single Dose Vaccine) ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಭಾನುವಾರ ಅನುಮೋದನೆ ನೀಡಿದೆ. ಭಾರತೀಯ ಔಷಧ ನಿಯಂತ್ರಣದ ಪ್ರಾಧಿಕಾರ (ಡಿಸಿಜಿಐ)ದ ಅನುಮೋದನೆ ಮೂಲಕ ಭಾರತದಲ್ಲಿ ಕೊರೋನಾ ವಿರುದ್ಧದ 9ನೇ ಲಸಿಕೆ ಬಳಕೆಗೆ ಹಸಿರು ನಿಶಾನೆ ಲಭಿಸಿದಂತಾಗಿದೆ. ಇದು ಭಾರತದ ಲಸಿಕಾ ಅಭಿಯಾನಕ್ಕೆ ಮತ್ತಷ್ಟುಬಲ ನೀಡಲಿದೆ. ಸ್ಪುಟ್ನಿಕ್ ಲೈಟ್ ಕೊರೋನಾ ವಿರುದ್ಧ ಶೇ.65.4ರಷ್ಟುಪರಿಣಾಮಕಾರಿ ಎನ್ನಲಾಗಿದೆ.
15,000ಕ್ಕಿಂತ ಕೆಳಗಿಳಿದ ಕೋವಿಡ್ ಕೇಸ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಶುಕ್ರವಾರ 14,950 ಹೊಸ ಪ್ರಕರಣಗಳು ವರದಿಯಾಗಿದೆ. 53 ಮಂದಿ ಮೃತರಾಗಿದ್ದಾರೆ. 40,599 ಮಂದಿ ಚೇತರಿಸಿಕೊಂಡಿದ್ದಾರೆ. ಪಾಸಿಟಿವಿಟಿ ದರ ಕೂಡ ನಿರಂತರವಾಗಿ ಕುಸಿಯುತ್ತಿದೆ. 1.36 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಶೇ.10.93ರ ಪಾಸಿಟಿವಿಟಿ ದರ ದಾಖಲಾಗಿದೆ. ಜನವರಿ 12 ರಂದು ಶೇ. 10.96 ಪಾಸಿಟಿವಿಟಿ ದರ ವರದಿಯಾದ ಬಳಿಕ ಮತ್ತೆ ಪಾಸಿಟಿವಿಟಿ ದರ ಶೇ.10ರ ಅಸುಪಾಸಿಗೆ ಬಂದಿದೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 1.23 ಲಕ್ಷಕ್ಕೆ ಕುಸಿದಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 51,645 ಸಕ್ರಿಯ ಪ್ರಕರಣಗಳಿವೆ. ತುಮಕೂರು 6,223, ಮೈಸೂರು 5,724, ಧಾರವಾಡ ಜಿಲ್ಲೆಯಲ್ಲಿ 4,574 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ ಬೆಂಗಳೂರು ನಗರದಲ್ಲಿ 6,039, ಮೈಸೂರು 944, ತುಮಕೂರು 656 ಮತ್ತು ಹಾಸನ ಜಿಲ್ಲೆಯಲ್ಲಿ 560 ಹೊಸ ಪ್ರಕರಣ ಪತ್ತೆಯಾಗಿದೆ. ನೂರಕ್ಕಿಂತ ಕಡಿಮೆ ಪ್ರಕರಣ ಯಾದಗಿರಿ (56), ರಾಮನಗರ (65), ಚಿಕ್ಕಮಗಳೂರು (73) ಮತ್ತು ಗದಗ ಜಿಲ್ಲೆಯಲ್ಲಿ (81) ವರದಿಯಾಗಿದೆ.
Covid Crisis: ರಾಜ್ಯದಲ್ಲಿ 15,000ಕ್ಕಿಂತ ಕೆಳಗಿಳಿದ ಕೋವಿಡ್ ಕೇಸ್..!
ಕಲಬುರಗಿಯಲ್ಲಿ 9 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಬೆಂಗಳೂರು ನಗರದಲ್ಲಿ 15, ಮೈಸೂರು 10, ದಕ್ಷಿಣ ಕನ್ನಡ 4, ಬೆಳಗಾವಿ ಮತ್ತು ಶಿವಮೊಗ್ಗ ತಲಾ 3, ಉಡುಪಿ, ರಾಮನಗರ, ಕೊಪ್ಪಳ, ಕಲಬುರಗಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತಲಾ 2, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಧಾರವಾಡ, ಹಾಸನ, ಕೋಲಾರ, ಮಂಡ್ಯ ಮತ್ತು ವಿಜಯಪುರಲ್ಲಿ ತಲಾ ಒಂದು ಸಾವು ಸಂಭವಿಸಿದೆ. ರಾಜ್ಯದಲ್ಲಿ ಒಟ್ಟು 38.75 ಲಕ್ಷ ಮಂದಿಯಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. 37.13 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,250 ಮಂದಿ ಮರಣವನ್ನಪ್ಪಿದ್ದಾರೆ.
ಕೋವಿಡ್ ಕೇಸು ಇಳಿಕೆ: ಈವರೆಗೆ ದೈನಂದಿನ ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದ್ದ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ 34 ರಾಜ್ಯಗಳಲ್ಲಿ ಕೊರೋನಾ ವೈರಸ್ಸಿನ ತೀವ್ರತೆ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಅಲ್ಲದೆ ದೈನಂದಿನ ಪಾಸಿಟಿವಿಟಿ ದರವೂ ಕುಸಿತ ಕಂಡಿದೆ. ಆದರೆ ಕೇರಳ ಮತ್ತು ಮಿಜೋರಾಂ ರಾಜ್ಯಗಳಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ದೇಶದ ಒಟ್ಟಾರೆ ಜಿಲ್ಲೆಗಳ ಪೈಕಿ 268 ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇದೆ. ಪರಿಣಾಮಕಾರಿ ಲಸಿಕೆ ಅಭಿಯಾನದಿಂದಾಗಿ ಕೋವಿಡ್ಗೆ ಬಲಿಯಾಗುವವರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ.