ಕೊರೋನಾ ಸೋಂಕು: ದೇಶದಲ್ಲೇ ಕರ್ನಾಟಕ ನಂಬರ್ 2!

By Kannadaprabha NewsFirst Published Oct 21, 2020, 8:05 AM IST
Highlights

ರಾಜ್ಯದ 6 ಜಿಲ್ಲೆಗಳಲ್ಲಿ ಹೆಚ್ಚು ಕೇಸ್‌: ಕೇಂದ್ರ|  ಬೆಂಗಳೂರು, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಹಾಸನದಲ್ಲಿ ಕೊರೋನಾ ಅಬ್ಬರ| ಕರ್ನಾಟಕ ಸೇರಿ ದೇಶದ 6 ರಾಜ್ಯಗಳಲ್ಲಿ ಶೇ.64ರಷ್ಟುಕೇಸ್‌| ಕರ್ನಾಟಕ, ಮಹಾರಾಷ್ಟ್ರ, ಕೇರಳದಲ್ಲೇ ಶೇ.50 ಕೇಸ್‌

ನವದೆಹಲಿ(ಅ.21): ದೇಶದಲ್ಲಿರುವ ಒಟ್ಟಾರೆ ಕೊರೋನಾ ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ ಸೇರಿ ದೇಶದ 6 ರಾಜ್ಯಗಳಲ್ಲೇ ಶೇ.64ರಷ್ಟುಕೇಸುಗಳಿವೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದಲ್ಲೇ ಶೇ.50ರಷ್ಟುಪ್ರಕರಣಗಳಿವೆ. ಕರ್ನಾಟಕದ 6 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳು ಅಧಿಕವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

6 ರಾಜ್ಯಗಳಲ್ಲಿ ಅಧಿಕ ಸಕ್ರಿಯ ಪ್ರಕರಣಗಳು ಇರುವ ಟಾಪ್‌ 5 ಜಿಲ್ಲೆಗಳ ಪಟ್ಟಿಯೊಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಅದರಲ್ಲಿ ಬೆಂಗಳೂರು ನಗರ, ಮೈಸೂರು, ತುಮಕೂರು, ದಕ್ಷಿಣ ಕನ್ನಡ ಹಾಗೂ ಹಾಸನದ ಹೆಸರಿದೆ.

ಮಹಾರಾಷ್ಟ್ರ, ಕೇರಳ, ಪಶ್ಚಿಮಬಂಗಾಳ, ತಮಿಳುನಾಡು ಹಾಗೂ ಆಂಧ್ರಪ್ರದೇಶ ಪಟ್ಟಿಯಲ್ಲಿರುವ ಇತರೆ ರಾಜ್ಯಗಳಾಗಿವೆ. ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳಿಗೆ ಶೇ.23.28ರಷ್ಟುಕೊಡುಗೆ ನೀಡುವ ಮೂಲಕ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಶೇ.14.19ರಷ್ಟುಪಾಲಿನೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ಶೇ.12.40ರಷ್ಟುಪ್ರಕರಣಗಳೊಂದಿಗೆ ಕೇರಳ 3ನೇ ಸ್ಥಾನದಲ್ಲಿದೆ. ಈ ಮೂರೂ ರಾಜ್ಯಗಳಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣ ದೇಶದಲ್ಲಿನ ಒಟ್ಟಾರೆ ಸಕ್ರಿಯ ಪ್ರಕರಣಗಳ ಶೇ.49.87ರಷ್ಟಿದೆ ಎಂಬುದು ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಸಾರವಾಗಿದೆ.

click me!